ಸಂಪುಟ

ಇಂಧನ ಸಂರಕ್ಷಣೆ/ಪರಿಣಾಮಕಾರಿ ಬಳಕೆ ವಲಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ

Posted On: 06 DEC 2018 9:36PM by PIB Bengaluru

ಇಂಧನ ಸಂರಕ್ಷಣೆ/ಪರಿಣಾಮಕಾರಿ ಬಳಕೆ ವಲಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಇಂಧನ ಸಂರಕ್ಷಣೆ ಮತ್ತು ಪರಿಣಾಮಕಾರಿ ಬಳಕೆ ವಲಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ 2018ರ ಅಕ್ಟೋಬರ್ 17ರಂದು ಸಹಿ ಹಾಕಲಾಗಿದೆ.

 

 

ಪ್ರಮುಖ ಪರಿಣಾಮ:-

          ಈ ಒಡಂಬಡಿಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಒಪ್ಪಂದವಾಗಿದ್ದು, ಇದರಡಿ ತಾಂತ್ರಿಕ ಸ್ವರೂಪದ ಪರಸ್ಪರ ಸಹಕಾರ ಮತ್ತು ಜ್ಞಾನ ವಿನಿಮಯ ಒಳಗೊಂಡಿದೆ. ಈ ಒಪ್ಪಂದದಂತೆ ನೀತಿ ನಿರೂಪಣೆಗಳ ಮಾಹಿತಿ ವಿನಿಮಯ ಮುಂದುವರಿಸಿಕೊಂಡು ಹೋಗುವುದು ಮತ್ತು ಬೇಡಿಕೆ ಆಧರಿತ ನಿರ್ವಹಣಾ ಮತ್ತು ಪರಿಣಾಮಕಾರಿ ಇಂಧನ ಬಳಕೆ ಕುರಿತಂತೆ ತಾಂತ್ರಿಕ ಸಹಾಯ ಪಡೆದುಕೊಳ್ಳುವುದು ಸೇರಿದೆ.

 

ಪ್ರಯೋಜನಗಳು

 

        ಈ ಒಪ್ಪಂದದಿಂದಾಗಿ ಪರಿಣಾಮಕಾರಿ ಇಂಧನ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ನೆರವಾಗುತ್ತದೆ. ಅಲ್ಲದೆ ಇಂಗಾಲದ ಹೊರಸೂಸುವಿಕೆಯ ವಿಶ್ಲೇಷಣೆ ಮತ್ತು ಅಭಿವೃದ್ಧಿಯ ಉಪಕರಣಗಳ ಬಳಕೆ, ಐ ಎನ್ ಡಿ ಸಿಗೆ ಸಂಬಂಧಿಸಿದಂತೆ ಜಾಗತಿಕ ಮಾಲಿನ್ಯ ನಿಗಾ ವ್ಯವಸ್ಥೆಗೆ    ಜಿ ಎಚ್ ಜಿ ದತ್ತಾಂಶ ಪಡೆದುಕೊಳ್ಳುವ ಅಂಶ ಸೇರಿದೆ. ಅಲ್ಲದೆ ಇದು ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವುದಲ್ಲದೆ, ಪರಿಣಾಮಕಾರಿ ಇಂಧನ ಬಳಕೆ ಪ್ರಾತ್ಯಕ್ಷಿಕೆ ನೀಡಲು ಸಹಕಾರಿಯಾಗಲಿದೆ. ಸುಸ್ಥಿರ ಸಂಚಾರ ಸಾರಿಗೆ ವ್ಯವಸ್ಥೆ ಅಭಿವೃದ್ಧಿಗೆ, ಅದರಲ್ಲೂ ವಿಶೇಷವಾಗಿ ವಿದ್ಯುತ್ ಚಾಲಿತ ವಾಹನಗಳಿಗೆ ಒತ್ತು ನೀಡುವ ಅಂಶ ಸೇರಿದೆ. 

 

**** 



(Release ID: 1555152) Visitor Counter : 96