ಸಂಪುಟ
ಭೂ ವಿಜ್ಞಾನದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
प्रविष्टि तिथि:
06 DEC 2018 9:38PM by PIB Bengaluru
ಭೂ ವಿಜ್ಞಾನದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ (ಯು.ಎಸ್.ಎ)ದ ನಡುವೆ ಭೂ ವಿಜ್ಞಾನದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿದಂತೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ನವೆಂಬರ್ 1ರಂದು ಅಂಕಿತ ಹಾಕಲಾಗಿತ್ತು.
ಭಾರತ ಮತ್ತು ಅಮೆರಿಕಾ ನಡುವಿನ ಸಹಯೋಗವು, ಭೂ ವಿಜ್ಞಾನ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳ ಸಂಸ್ಥೆಗಳಲ್ಲಿ ಲಭ್ಯವಿರುವ ನೈಪುಣ್ಯತೆಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಅತ್ಯಾಧುನಿಕ ಸುಸಜ್ಜಿತ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅವಕಾಶ ನೀಡಲಿದೆ. ವೈಜ್ಞಾನಿಕ ಕ್ಷೇತ್ರದ ಸಹಕಾರವು, ಪರಿಸರ ವ್ಯವಸ್ಥೆ, ಹವಾಮಾನ ವೈಪರೀತ್ಯ ಮತ್ತು ಭೂ ಬಳಕೆ ಬದಲಾವಣೆ, ಇಂಧನ, ಖನಿಜ, ಪರಿಸರ ಆರೋಗ್ಯ, ನೈಸರ್ಗಿಕ ಅಡೆತಡೆಗಳು, ಅಪಾಯ ಮತ್ತು ನಿರ್ಧರಣೆಯಲ್ಲಿನ ಸಂಕಲ್ಪ, ಜಲ ಸಂಪನ್ಮೂಲ ಮತ್ತು ಇನ್ಫರ್ಮ್ಯಾಟಿಕ್ಸ್ ಹಾಗೂ ದತ್ತಾಂಶ ಏಕೀಕರಣವನ್ನು ಒಳಗೊಂಡಿದೆ. ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿನ ಸಹಕಾರವು ವಿವಿಧ ವಿಧಾನಗಳ ಮೂಲಕ ಅಂದರೆ ತಾಂತ್ರಿಕ ಮಾಹಿತಿಯ ವಿನಿಮಯ, ಭೇಟಿ, ತರಬೇತಿ ಮತ್ತು ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಹಕಾರಾತ್ಮಕ ಸಂಶೋಧನೆ ಕಾರ್ಯಕ್ರಮಗಳ ಮೂಲಕ ಸಾಕಾರವಾಗುತ್ತದೆ.
****
(रिलीज़ आईडी: 1555017)
आगंतुक पटल : 126