ಸಂಪುಟ

ಕೇಂದ್ರ ಪಟ್ಟಿಯಲ್ಲಿರುವ ಇತರ ಹಿಂದುಳಿದ ವರ್ಗಗಳ ಉಪವಿಭಾಗೀಕರಣದ ವಿಷಯವನ್ನು ಪರಿಶೀಲಿಸುವ ಆಯೋಗದ ಅವಧಿಯನ್ನು ಮೇ 31, 2019 ವರೆಗೆ ವಿಸ್ತರಿಸಲು ಸಂಪುಟದ ಅನುಮೋದನೆ.

Posted On: 22 NOV 2018 1:37PM by PIB Bengaluru

ಕೇಂದ್ರ ಪಟ್ಟಿಯಲ್ಲಿರುವ ಇತರ ಹಿಂದುಳಿದ ವರ್ಗಗಳ ಉಪವಿಭಾಗೀಕರಣದ ವಿಷಯವನ್ನು ಪರಿಶೀಲಿಸುವ ಆಯೋಗದ ಅವಧಿಯನ್ನು ಮೇ 31, 2019 ವರೆಗೆ ವಿಸ್ತರಿಸಲು ಸಂಪುಟದ ಅನುಮೋದನೆ.

 

ಕೇಂದ್ರ ಪಟ್ಟಿಯಲ್ಲಿರುವ ಇತರ ಹಿಂದುಳಿದ ವರ್ಗಗಳ ಉಪವಿಭಾಗೀಕರಣದ ವಿಷಯವನ್ನು ಪರಿಶೀಲಿಸುವ ಆಯೋಗದ ಅವಧಿಯನ್ನು ನವೆಂಬರ್ 30, 2018ರಿಂದ ವಿಸ್ತರಿಸಿ 6 ತಿಂಗಳ ಹೆಚ್ಚುವರಿ ಕಾಲವಧಿಯೊಂದಿಗೆ ಮೇ 31, 2019 ವರೆಗೆ ಮುಂದುವರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಸಂಪುಟ ಸಭೆ ಅನುಮೋದನೆ ನೀಡಿದೆ. 

 

ರಾಜ್ಯ ಸರಕಾರಗಳು, ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗಗಳು, ವಿವಿಧ ಸಮುದಾಯ ಸಂಘಸಂಸ್ಥೆಗಳು ಮತ್ತು ವಿವಿಧ ಹಿಂದುಳಿದ ವರ್ಗಗಳ ಹಾಗೂ ಆಯೋಗಗಳಿಗೆ ಸಂಬಂಧಪಟ್ಟ ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಲ್ಲಿ ವ್ಯಾಪಕ ಮಾತುಕತೆಗಳನ್ನು ಆಯೋಗವು ನಡೆಸಿದೆ. ಅಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೇರ್ಪಡೆಯಾದ ಇತರ ಹಿಂದುಳಿದ ವರ್ಗಗಳ (ಒ.ಬಿ.ಸಿ) ಜಾತಿಯಾಧಾರದ ಮಾಹಿತಿ ಸಂಗ್ರಹಿಸಲಾಗಿದೆ ಹಾಗೂ ಕೇಂದ್ರೀಯ ಇಲಾಖೆಗಳ, ಸಾರ್ವಜನಿಕ ವಲಯದ ಸಂಸ್ಥೆಗಳ, ಸಾರ್ವಜನಿಕ ವಲಯದ ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳಲ್ಲಿ ನೇಮಕಾತಿಗೊಂಡವರ ಜಾತಿಯಾಧಾರದ ದತ್ತಾಂಶಗಳನ್ನೂ ಸೇರಿಸಿಕೊಂಡ ದಾಖಲೆಗಳನ್ನೂ ಕೂಡಾ ಪಡೆಯಲಾಗಿದೆ.  

 

ಸಂಸ್ಕರಿಸಿದಾಗ ಮತ್ತು ವಿಶ್ಲೇಷಣೆಮಾಡಿದಾಗ ಹೊರಹೊಮ್ಮಿದ ದತ್ತಾಂಶಗಳ ಆಧಾರದಲ್ಲಿ, ಉಪವಿಭಾಗಗಳ ಪಟ್ಟಿಯನ್ನು ಅಂತಿಮಗೊಳಿಸಿ ವರದಿ ತಯಾರಿಸುವ ಮೊದಲು, ರಾಜ್ಯಗಳ ಜತೆ ಮತ್ತು ರಾಜ್ಯದ ಹಿಂದುಳಿದ ವರ್ಗಗಳ ಆಯೋಗಗಳ ಜತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಬೇಕೆಂಬ ಆಸಕ್ತಿಯನ್ನು ಆಯೋಗವು ವ್ಯಕ್ತಪಡಿಸಿದೆ.

 

*****



(Release ID: 1553523) Visitor Counter : 100