ಸಂಪುಟ

ಬ್ರಿಕ್ಸ್ ರಾಷ್ಟ್ರಗಳ ನಡುವೆ ಪರಿಸರ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ. 

Posted On: 24 OCT 2018 1:09PM by PIB Bengaluru

ಬ್ರಿಕ್ಸ್ ರಾಷ್ಟ್ರಗಳ ನಡುವೆ ಪರಿಸರ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಪರಿಸರ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.) ಗೆ ಪೂರ್ವಾನ್ವಯ ಅನುಮೋದನೆ ನೀಡಿತು. ಈ ತಿಳುವಳಿಕಾ ಒಡಂಬಡಿಕೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ 2018 ರ ಜುಲೈ ತಿಂಗಳಲ್ಲಿ ಅಂಕಿತ ಹಾಕಲಾಗಿತ್ತು. 

ಒಡಂಬಡಿಕೆ ಕೆಳಗಿನ ಕ್ಷೇತ್ರಗಳನ್ನು ಸಹಕಾರಕ್ಕಾಗಿ ಗುರುತಿಸಿದೆ. 

ಅ) ವಾಯು ಗುಣಮಟ್ಟ; 

ಆ) ಜಲ; 

ಇ) ಜೀವ ವೈವಿಧ್ಯತೆ; 

ಈ) ಹವಾಮಾನ ಬದಲಾವಣೆ; 

ಉ) ತ್ಯಾಜ್ಯ ನಿರ್ವಹಣೆ; 

ಊ) ಸಹ್ಯ ಅಭಿವೃದ್ದಿಗಾಗಿ ಮತ್ತು ಸಹ್ಯ ಅಭಿವೃದ್ದಿಯ ಗುರಿ ಸಾಧನೆಗಾಗಿ 2030 ರ ಕಾರ್ಯ ಸೂಚಿಯ ಅನುಷ್ಟಾನ ; ಮತ್ತು 

ಎ) ಪಾಲುದಾರರು ಪರಸ್ಪರ ಒಪ್ಪಿಕೊಂಡ ಇತರ ಸಹಕಾರದ ಕ್ಷೇತ್ರಗಳು. 

ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಮಾನತೆ , ಪರಸ್ಪರ ವಿನಿಮಯ, ಪರಸ್ಪರ ಲಾಭದಾಯಕವಾಗುವಂತಹ ರೀತಿಯ ಆಧಾರದ ಮೇಲೆ, , ಆಯಾ ದೇಶಗಳ ಕಾನೂನುಗಳಡಿ ನಿರ್ವಹಣೆ ಮಾಡಲು ಬ್ರಿಕ್ಸ್ ರಾಷ್ಟ್ರಗಳ ನಡುವೆ ನಿಕಟ ಸಹಕಾರ ಸ್ಥಾಪನೆಗೆ ಮತ್ತು ಧೀರ್ಘಾವಧಿ ಸಹಕಾರಕ್ಕೆ ಈ ಒಡಂಬಡಿಕೆ ಉತ್ತೇಜನ ನೀಡಲಿದೆ. 

ಪರಿಸರ ಸಂಬಂಧಿ ವಿಷಯಗಳಿಗೆ ವ್ಯಕ್ತವಾಗುತ್ತಿರುವ ಕಳವಳಗಳು ಯಾವುದೇ ದೇಶಕ್ಕೆ ಸೀಮಿತವಾದವುಗಳಲ್ಲ ಮತ್ತು ಅವು ಇಡೀ ವಿಶ್ವಕ್ಕೆ ಗಂಭೀರ ಸವಾಲಾಗಿರುವಂತಹವು. ಈ ತಿಳುವಳಿಕಾ ಒಡಂಬಡಿಕೆ ವಿಶ್ವದ ಶೇಖಡಾ 40 ಕ್ಕೂ ಅಧಿಕ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ಐದು ಪ್ರಮುಖ ಆರ್ಥಿಕತೆಗಳಾದ –ಬ್ರೆಜಿಲ್, ರಶ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡ ಬ್ರಿಕ್ಸ್ ರಾಷ್ಟ್ರಗಳ ಸಂಘಟನೆಯು ಪರಿಸರ ಸಂರಕ್ಷಣೆ ಮತ್ತು ಸಹ್ಯ ಅಭಿವೃದ್ದಿಯ ನಿಟ್ಟಿನಲ್ಲಿ ಹೊಂದಿರುವ ಹೊಣೆಗಾರಿಕೆಯನ್ನು ಗುರುತಿಸುತ್ತದೆ. 

ಈ ತಿಳುವಳಿಕಾ ಒಡಂಬಡಿಕೆ ಉತ್ತಮ ಪರಿಸರ ರಕ್ಷಣೆ , ಉತ್ತಮ ಸಂರಕ್ಷಣೆ, ಮತ್ತು ಹವಾಮಾನ ಬದಲಾವಣೆಯ ಉತ್ತಮ ನಿರ್ವಹಣೆ ಮತ್ತು ವನ್ಯಜೀವಿಗಳ ರಕ್ಷಣೆ/ಸಂರಕ್ಷಣೆಗೆ ಸಂಬಂಧಿಸಿ ಅತ್ಯಾಧುನಿಕ ತಂತ್ರಜ್ಞಾನ ಹಾಗು ಉತ್ತಮ ನಡವಳಿಕೆಗಳನ್ನು ಅನುಷ್ಟಾನಕ್ಕೆ ತರುವ ನಿರೀಕ್ಷೆ ಇದೆ. ಈ ತಿಳುವಳಿಕಾ ಒಡಂಬಡಿಕೆಯು ಅನುಭವ , ಪರಿಣತಿಗಳ ವಿನಿಮಯ, ಉತ್ತಮ ನಡವಳಿಕೆಗಳು ಮತ್ತು ತಾಂತ್ರಿಕ ಜ್ಞಾನವನ್ನು ಸಹಭಾಗೀ ಬ್ರಿಕ್ಸ್ ರಾಷ್ತ್ರಗಳ ಸಾರ್ವಜನಿಕ ಮತ್ತು ಖಾಸಗಿ ರಂಗಗಳ ಮೂಲಕ ವಿನಿಮಯ ಮಾಡಲು ಅನುಕೂಲತೆ ಒದಗಿಸಲಿದೆ ಮತ್ತು ಸಹ್ಯ ಅಭಿವೃದ್ದಿ, ಮತ್ತು ಪರಿಸರ ಸಂರಕ್ಷಣೆ ಹಾಗು ರಕ್ಷಣೆಗೆ ಕೊಡುಗೆ ನೀಡಲಿದೆ. ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆಗೂ ಈ ತಿಳುವಳಿಕಾ ಒಡಂಬಡಿಕೆಯಲ್ಲಿ ಅವಕಾಶಗಳಿವೆ. 



(Release ID: 1550848) Visitor Counter : 65