ಸಂಪುಟ

ಸಾಮಾಜಿಕ ಮತ್ತು ಕಾರ್ಮಿಕ ವಲಯದ ಸಹಕಾರಕ್ಕಾಗಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

Posted On: 24 OCT 2018 1:14PM by PIB Bengaluru

ಸಾಮಾಜಿಕ ಮತ್ತು ಕಾರ್ಮಿಕ ವಲಯದ ಸಹಕಾರಕ್ಕಾಗಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಮಾಜಿಕ ಮತ್ತು ಕಾರ್ಮಿಕ ವಲಯದ ಸಹಕಾರಕ್ಕಾಗಿ ಬ್ರೆಜಿಲ್, ರಷ್ಯಾ ಒಕ್ಕೂಟ, ಭಾರತ, ಚೈನಾ, ದಕ್ಷಿಣ ಆಫ್ರಿಕಾಗಳ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ಬ್ರಿಕ್ಸ್ ರಾಷ್ಟ್ರಗಳ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರುಗಳ (ಎಲ್.ಇ.ಎಂ.) ಸಭೆಯ ವೇಳೆ  2018ರ ಆಗಸ್ಟ್ 3ರಂದು ಅಂಕಿತ ಹಾಕಲಾಗಿತ್ತು.

 

ವಿವರ:

 

ಈ ತಿಳಿವಳಿಕೆ ಒಪ್ಪಂದದಲ್ಲಿ, ದುರ್ಬಲ ಗುಂಪುಗಳ ಮೇಲೆ ಗಮನವಿಟ್ಟು ಕಾರ್ಮಿಕ ಹಕ್ಕುಗಳ ರಕ್ಷಣೆ, ಕಾರ್ಮಿಕ ಕಾಯಿದೆ ಮತ್ತು ಅನುಷ್ಠಾನ, ಉದ್ಯೋಗ ಮತ್ತು ಕಾರ್ಮಿಕ ಮಾರುಕಟ್ಟೆ ನೀತಿಗಳು,ವೃತ್ತಿಪರ ಶಿಕ್ಷಣ, ಕೌಶಲಗಳು ಮತ್ತು ತರಬೇತಿ ಹಾಗೂ ಸಾಮಾಜಿಕ ರಕ್ಷಣೆಗಾಗಿ ಪ್ರಮುಖ ಪ್ರದೇಶಗಳಲ್ಲಿ ಪರಸ್ಪರ ಕಾರ್ಯಕ್ರಮ ನಿಯೋಜನೆಗೆ ಸಹಕಾರ ಮತ್ತು ಸಹಭಾಗಿತ್ವ ನೀಡಲು ಭಾರತ ಸೇರಿದಂತೆ ಪಕ್ಷಕಾರರು ಒಪ್ಪಿಕೊಂಡಿದ್ದಾರೆ. ಸದಸ್ಯ ರಾಷ್ಟ್ರಗಳು ಸಾಮಾಜಿಕ ಭದ್ರತೆ ಮತ್ತು ಇತರ ಕಾರ್ಮಿಕ ವಿಚಾರಗಳ ಕುರಿತ ಬ್ರಿಕ್ಸ್ ಸಾಮಾಜಿಕ ಭದ್ರತೆ ಸಹಕಾರ ಚೌಕಟ್ಟು ಮತ್ತು ಬ್ರಿಕ್ಸ್  ಕಾರ್ಮಿಕ ಸಂಶೋಧನೆ ಸಂಸ್ಥೆಗಳ ಜಾಲವನ್ನು ಬಳಸಿಕೊಳ್ಳಬಹುದಾಗಿದೆ. ಈ ತಿಳಿವಳಿಕೆ ಒಪ್ಪಂದವು ಒಂದು ಅಂತಾರಾಷ್ಟ್ರೀಯ ಒಪ್ಪಂದವಲ್ಲ ಮತ್ತು ಇದು ಅಂತಾರಾಷ್ಟ್ರೀಯ ಕಾನೂನಿನನ್ವಯ ಪಕ್ಷಕಾರರಿಗೆ ಯಾವುದೇ ಹಕ್ಕು ಮತ್ತು ಬಾಧ್ಯತೆಯನ್ನು ಹೊರಿಸುವುದಿಲ್ಲ.

 

ಪ್ರಮಖ ಪರಿಣಾಮ:

 

ತಿಳಿವಳಿಕೆ ಒಪ್ಪಂದವು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಸಮಾನ ಉದ್ದೇಶದೊಂದಿಗೆ ಸಮಗ್ರ ಅಭಿವೃದ್ಧಿ ಮತ್ತು ಹೊಸ ಕೈಗಾರಿಕಾ ಕ್ರಾಂತಿಯಲ್ಲಿ ಹಂಚಿಕೆಯ ಪ್ರಗತಿಗಾಗಿ ಸಹಕಾರ, ಸಹಯೋಗ ಮತ್ತು ಗರಿಷ್ಠ ಸಂಯೋಜನೆಯ ವ್ಯವಸ್ಥೆ ಒದಗಿಸುತ್ತದೆ. ಇದು ಸದಸ್ಯ ರಾಷ್ಟ್ರಗಳಿಗೆ ಜ್ಞಾನ ವಿನಿಮಯ ಮತ್ತು ಕಾರ್ಮಿಕ ಮತ್ತು ಉದ್ಯೋಗ, ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಮಾತುಕತೆ ಕುರಿತ ವಿಷಯಗಳ ಮೇಲೆ ಜಂಟಿ ಕಾರ್ಯಕ್ರಮ ಅನುಷ್ಠಾನಕ್ಕೂ ಅನುವು ಮಾಡಿಕೊಡುತ್ತದೆ. ಇದು ವಿ.ವಿ.ಗಿರಿ ಭಾರತೀಯ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಸೇರಿದಂತೆ ಬ್ರಿಕ್ಸ್ ಕಾರ್ಮಿಕ ಸಂಸ್ಥೆಗಳ ಜಾಲವನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್.ಓ.)ಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರಗಳೊಂದಿಗೆ ಸೇರಿಸುವ ಖಾತ್ರಿ ಒದಗಿಸುತ್ತದೆ. ಈ ಜಾಲ ಹೊಸ ಉದ್ಯೋಗದ ಸ್ವರೂಪ ಕುರಿತ ಸಂಶೋಧನೆ ಮತ್ತು ಯುವಜನರ ಉದ್ಯೋಗದ ಮೇಲೆ ವಿಶೇಷವಾಗಿ ಗಮನ ಹರಿಸುತ್ತದೆ. ಈ ಜಾಲವು ಸಹಕಾರವನ್ನು ಮತ್ತಷ್ಟು ಬಲಪಡಿಸಲು ವಸ್ತುತಃ ಜಾಲ,  ಸಮರ್ಥ್ಯ ವರ್ಧನೆ ಮತ್ತು ಮಾಹಿತಿ ವಿನಿಮಯ ಸೇರಿದಂತೆ ಹೊಸ ತಂತ್ರಜ್ಞಾನ ಕಲಿಕೆಯನ್ನೂ ಅನ್ವೇಷಿಸುತ್ತದೆ. ಬ್ರಿಕ್ಸ್ ಸಾಮಾಜಿಕ ಭದ್ರತೆ ಸಹಕಾರ ಚೌಕಟ್ಟು ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಾಮಾಜಿಕ ಭದ್ರತೆ ಸಹಕಾರವನ್ನು ಆಳಗೊಳಿಸುತ್ತದೆ ಮತ್ತು ಸಾಮಾಜಿಕ ಭದ್ರತೆ ವ್ಯವಸ್ಥೆ ಹಾಗೂ ಸದಸ್ಯ ರಾಷ್ಟ್ರಗಳ ನಡುವಿನ ಸಾಮಾಜಿಕ ಭದ್ರತೆ ಒಪ್ಪಂದಗಳ ಸುಧಾರಣೆ ಸಹಕಾರಕ್ಕೂ ಅನುವು ಮಾಡಿಕೊಡುತ್ತದೆ.

 

 

ಹಿನ್ನೆಲೆ:

 

 ಬ್ರಿಕ್ಸ್ ಔದ್ಯೋಗಿಕ ಕಾರ್ಯ ಗುಂಪಿನ 2ನೇ ಸಭೆ 2018ರ ಜುಲೈ 30ರಿಂದ ಆಗಸ್ಟ್ 1ರವರೆಗೆ ಮತ್ತು ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮಟ್ಟದ ಸಭೆ 2018ರ ಆಗಸ್ಟ್ 2ರಿಂದ 2018ರ ಆಗಸ್ಟ್ 3ರವರೆಗೆ ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆದಿತ್ತು. 2018ರ ಜುಲೈ 30ರಿಂದ 2018ರ ಆಗಸ್ಟ್ 1ರವರೆಗೆ ನಡೆದ ಬ್ರಿಕ್ಸ್ ಇಡಬ್ಲ್ಯುಜಿ ಸಭೆಯಲ್ಲಿ ಸಾಮಾಜಿಕ ಮತ್ತು ಕಾರ್ಮಿಕ ವಲಯದ ಸಹಕಾರಕ್ಕೆ ಸಂಬಂಧಿಸಿದಂತೆ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಕರಡು ತಿಳಿವಳಿಕೆ ಒಪ್ಪಂದದ ಕುರಿತು ಚರ್ಚಿಸಿ, ಸಮಾಲೋಚಿಸಿ ಮತ್ತು ಆಖೈರುಗೊಳಿಸಲಾಗಿತ್ತು ಮತ್ತು 2018ರ ಆಗಸ್ಟ್ 3ರಂದು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಕಾರ್ಮಿಕ ಸಚಿವರುಗಳು ಇದಕ್ಕೆ ಅಂಕಿತ ಹಾಕಿದ್ದರು. ಈ ತಿಳಿವಳಿಕೆ ಒಪ್ಪಂದದ ನಿಬಂಧನೆಗಳು ಸಾಮಾಜಿಕ ಮತ್ತು ಕಾರ್ಮಿಕ ವಲಯದಲ್ಲಿ ವಿನಿಮಯ ಕಾರ್ಯಕ್ರಮ; ಸಮಾಲೋಚನೆ; ತಜ್ಞರ ಸಭೆ ಮತ್ತು ಸಮಾವೇಶ ಇತ್ಯಾದಿಗಳ ಮೂಲಕ ನೀತಿ ಕ್ರಮಗಳ ಯಶಸ್ವಿ ಹಂಚಿಕೆಯ ಸಹಕಾರ ಸ್ವರೂಪದ ಉದ್ದೇಶ ಸ್ಪಷ್ಟಪಡಿಸುತ್ತವೆ.



(Release ID: 1550722) Visitor Counter : 75