ಪ್ರಧಾನ ಮಂತ್ರಿಯವರ ಕಛೇರಿ

ಎನ್.ಹೆಚ್.ಆರ್.ಸಿ.ಯ ಸ್ಥಾಪನಾ ದಿನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು

Posted On: 12 OCT 2018 5:26PM by PIB Bengaluru

ಎನ್.ಹೆಚ್.ಆರ್.ಸಿ.ಯ ಸ್ಥಾಪನಾ ದಿನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು

 

ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್.ಹೆಚ್.ಆರ್.ಸಿ) ಇದರ ಸ್ಥಾಪನಾದಿನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.

 

ಅವಕಾಶವಂಚಿತರು ಮತ್ತು ಶೋಷಣೆಗೊಳಗಾದವರ  ಧ್ವನಿಯಾಗಿ ಪ್ರವರ್ತಿಸಿ, ಕಳೆದ ಎರಡೂವರೆ ದಶಕಗಳಲ್ಲಿ ಎನ್.ಹೆಚ್.ಆರ್.ಸಿ.ಯು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದೆ. ಮಾನವ ಹಕ್ಕುಗಳ ಸಂರಕ್ಷಣೆಯು ನಮ್ಮ ಸಂಸ್ಕೃತಿಯ ಬಲುದೊಡ್ಡ ಭಾಗವಾಗಿದೆ. ಸ್ವತಂತ್ರ ಮತ್ತು ನಿಪಕ್ಷಪಾತ ನ್ಯಾಯಾಂಗ, ಕಾರ್ಯನಿರತ ಸಕ್ರಿಯ ಮಾಧ್ಯಮಗಳು: ಕಾರ್ಯನಿರತ ಸಕ್ರಿಯ ಸಮಾಜಿಕ ಸಂಸ್ಥೆಗಳು ಮತ್ತು ಎನ್.ಹೆಚ್.ಆರ್.ಸಿ ಯಂತಹ ಸಂಸ್ಥೆಗಳು ಸ್ವಾತಂತ್ರ್ಯಾನಂತರದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆಯ ಪ್ರಧಾನಪಾತ್ರವಹಿಸಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

ಮಾನವ ಹಕ್ಕು ಎಂಬುದು ಕೇವಲ ಘೋಷ ವಾಕ್ಯವಾಗಿರಬಾರದು, ಅದು ನಮ್ಮ ತತ್ವಗಳ ಹುರುಪಿನ ಅಂಗವಾಗಿರಬೇಕು. ಬಡವರ ಜೀವನ ಗುಣಮಟ್ಟ ಉತ್ತಮಗೊಳಿಸಲು ಹಲವಾರು ಪರಿಣಾಮಕಾರಿ ಪ್ರಯತ್ನಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮಾಡಲಾಗಿದೆ. ಮಾನವನ ಸಾಮಾನ್ಯ ಆವಶ್ಯಕತೆಗಳ ಲಭ್ಯತೆಯ ಅವಕಾಶವನ್ನು ಎಲ್ಲ ಭಾರತೀಯರೂ ಹೊಂದುವಂತೆ ಮಾಡುವುದಕ್ಕೆ ಸರಕಾರದ ಗಮನ ಕೇಂದ್ರೀಕರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭೇಟಿ ಬಚಾವೋ, ಭೇಟಿ ಪಡಾವೋ, ಸುಗಮ್ಯ ಭಾರತ ಅಭಿಯಾನ, ಪ್ರಧಾನಮಂತ್ರಿ ಆವಾಸ ಯೋಜನೆ, ಉಜ್ವಲಾ ಯೋಜನೆ ಮತ್ತು ಸೌಭಾಗ್ಯ ಯೋಜನೆಗಳ ಯಶಸ್ಸು ಮತ್ತು ಈ ಯೋಜನೆಗಳ ಪರಿಣಾಮವಾಗಿ ಜನರ ಜೀವನದಲ್ಲಿ ಆಗಿರುವ ಸುಧಾರಣೆಯ ಬದಲಾವಣೆಗಳ ಕುರಿತು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. 9 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣವು ನೈರ್ಮಲ್ಯವನ್ನು ದೃಢಪಡಿಸಿದೆ ಅಲ್ಲದೆ ಕೋಟ್ಯಾಂತರ ಬಡಜನರ ಜೀವನದ ಘನತೆ-ಗೌರವ ಹೆಚ್ಚಿಸಿದೆ. ಇತ್ತೀಚೆಗೆ ಪ್ರರಂಭಗೊಂಡ – ಪಿ.ಎಮ್.ಜೆ.ಎ.ವೈ- ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ದೊರೆಯುವ ಆರೋಗ್ಯ ಭರವಸೆ ಉಪಕ್ರಮ ವ್ಯವಸ್ಥೆಗಳ ಕುರಿತು ಹಾಗೂ ಕೇಂದ್ರ ಸರಕಾರದ ಆರ್ಥಿಕ ಸೇರ್ಪಡೆ ಉಪಕ್ರಮಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ನಾವು ಜನಸಾಮಾನ್ಯರ ಸಾಮಾನ್ಯಅಗತ್ಯಗಳ ಹಕ್ಕು ಲಭ್ಯವಾಗಿಸುವತ್ತ ಇಟ್ಟ ಹೆಜ್ಜೆಯ ಅಂಗವಾಗಿದೆ, ಮುಸಲ್ಮಾನ ಮಹಿಳೆಯರನ್ನು ತ್ರಿವಳಿ ತಲ್ಲಾಕ್ ನಿಂದ ಬಿಡುಗಡೆಗೊಳಿಸಿ ನೆಮ್ಮದಿ ನೀಡಿದ ಕಾನೂನು ಎಂದು ಪ್ರಧಾನಮಂತ್ರಿ ಹೇಳಿದರು.

 

ನ್ಯಾಯ ಪಡೆಯಲು ಸುಲಭವಾಗುಂತಹ ಉಪಕ್ರಮಗಳತ್ತ ಹೆಜ್ಜೆಗಳನ್ನು ಇಡಲಾಗಿದೆ, ಉದಾಹರಣೆಗಾಗಿ, ಇ-ಕೋರ್ಟ್ ಗಳ ಸಂಖ್ಯೆಗಳ ಹೆಚ್ಚಿಸಲಾಗಿದೆ ಮತ್ತು ರಾಷ್ಟ್ರೀಯ ನ್ಯಾಯಾಲಯಗಳ ದತ್ತಾಂಶ ಜಾಲರಿಯನ್ನು ಸಶಕ್ತಗೊಳಿಸಲಾಗಿದೆ. ಆಧಾರ್ ಎಂಬುದು ತಂತ್ರಜ್ಞಾನ ಆಧಾರಿತ ಸಬಲೀಕರಣದ  ಉಪಕ್ರಮವಾಗಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು

 

ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದಾಗಿ - ಜನ ಭಾಗೀದಾರಿ  ಉಪಕ್ರಮಗಳು ಯಶಸ್ಸು ಕಂಡಿವೆ. ಮಾನವ ಹಕ್ಕುಗಳ ಬಗ್ಗೆ ಅರಿವು ಜೊತೆ ನಾಗರಿಕರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತಾಗಿಯೂ ಅರಿವು ಹೊಂದಿರಬೇಕು.ಯಾರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವಿರುತ್ತದೋ ಅವರುಗಳಿಗೆ ಇತರರ ಹಕ್ಕುಗಳನ್ನು ಗೌರವಿಸುವುದೂ ಗೊತ್ತಿರುತ್ತದೆ. ಸುಸ್ತಿರ ಅಭಿವೃದ್ಧಿ ಗುರಿಗಳನ್ನು ಹೊಂದುವಲ್ಲಿ ಎನ್.ಹೆಚ್.ಆರ್.ಸಿ.ಯು ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.


(Release ID: 1549734) Visitor Counter : 141