ಸಂಪುಟ
ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ತಿದ್ದುಪಡಿ ಮಾಡುವ ಎರಡನೇ ಶಿಷ್ಟಾಚಾರಕ್ಕೆ ಸಂಪುಟ ಅನುಮೋದನೆ
प्रविष्टि तिथि:
03 OCT 2018 6:57PM by PIB Bengaluru
ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ತಿದ್ದುಪಡಿ ಮಾಡುವ ಎರಡನೇ ಶಿಷ್ಟಾಚಾರಕ್ಕೆ ಸಂಪುಟ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ತಿದ್ದುಪಡಿ ಮಾಡುವ ಎರಡನೇ ಶಿಷ್ಟಾಚಾರಕ್ಕೆ ಪೂರ್ವೋತ್ತರ ಅನುಮೋದನೆ ನೀಡಲಾಯಿತು. ಈ ಸಿಇಸಿಎ ಒಪ್ಪಂದಕ್ಕೆ 2018ರ ಆಗಸ್ಟ್ 24ರಂದು ಸಹಿ ಹಾಕಲಾಗಿತ್ತು. ಪ್ರಯೋಜನಗಳು : ಎರಡನೇ ಶಿಷ್ಟಾಚಾರಕ್ಕೆ ಸಹಿ ಹಾಕಿದ್ದರಿಂದ ಭಾರತ ಮತ್ತು ಸಿಂಗಾಪುರ ನಡುವೆ ದ್ವಿಪಕ್ಷೀಯ ವ್ಯಾಪಾರ ವೃದ್ಧಿಯಾಗುವುದಲ್ಲದೆ, ಆರ್ಥಿಕ ಸಹಕಾರ ಬಲವರ್ಧನೆಯಾಗಲಿದೆ. ಅಲ್ಲದೆ, ಸಿಇಸಿಎ ಬಳಕೆಯೂ ಸಹ ಸಾಕಷ್ಟು ಸುಧಾರಿಸಲಿದೆ.
(रिलीज़ आईडी: 1548688)
आगंतुक पटल : 111