ಸಂಪುಟ

ಉಜ್ಬೆಕಿಸ್ತಾನದ ಅಡಿಜಾನ್ ವಲಯದಲ್ಲಿ ಉಜ್ಬೆಕ್ – ಭಾರತೀಯ ಮುಕ್ತ ಫಾರ್ಮಾಸಿಕ್ಯೂಟಿಕಲ್ ಪ್ರದೇಶ ಸ್ಥಾಪಿಸುವುದಕ್ಕಾಗಿ ಸಹಕರಿಸುವ ನಿಟ್ಟಿನಲ್ಲಿ ಭಾರತ ಮತ್ತು ಉಜ್ಬೆಕಿಸ್ತಾನದ ನಡುವೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು ಸಂಪುಟದ ಅಂಗೀಕಾರ

Posted On: 26 SEP 2018 4:16PM by PIB Bengaluru

ಉಜ್ಬೆಕಿಸ್ತಾನದ ಅಡಿಜಾನ್ ವಲಯದಲ್ಲಿ ಉಜ್ಬೆಕ್ – ಭಾರತೀಯ ಮುಕ್ತ ಫಾರ್ಮಾಸಿಕ್ಯೂಟಿಕಲ್ ಪ್ರದೇಶ ಸ್ಥಾಪಿಸುವುದಕ್ಕಾಗಿ ಸಹಕರಿಸುವ ನಿಟ್ಟಿನಲ್ಲಿ ಭಾರತ ಮತ್ತು ಉಜ್ಬೆಕಿಸ್ತಾನದ ನಡುವೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು ಸಂಪುಟದ ಅಂಗೀಕಾರ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಂಪುಟ ಸಭೆಯು ಉಜ್ಬೆಕಿಸ್ತಾನದ ಅಡಿಜಾನ್ ವಲಯದಲ್ಲಿ ಉಜ್ಬೆಕ್ – ಭಾರತೀಯ ಮುಕ್ತ ಫಾರ್ಮಾಸಿಕ್ಯೂಟಿಕಲ್ ಪ್ರದೇಶ ಸ್ಥಾಪಿಸುವುದಕ್ಕಾಗಿ ಸಹಕರಿಸುವ ನಿಟ್ಟಿನಲ್ಲಿ ಭಾರತ ಮತ್ತು ಉಜ್ಬೆಕಿಸ್ತಾನದ ನಡುವೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು ಅಂಗೀಕಾರ ನೀಡಿತು. ಅಕ್ಟೋಬರ್ 01, 2018ರಂದು ಭಾರತ ಭೇಟಿ ನೀಡಲಿರುವ ಉಜ್ಬೆಕಿಸ್ತಾನದ ಅಧ್ಯಕ್ಷರ ಸಂದರ್ಭದಲ್ಲಿ ಈ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗುವುದು. 

ಎರಡೂ ದೇಶಗಳಲ್ಲೂ ಫಾರ್ಮಾಸ್ಯೂಟಿಕಲ್ ಮತ್ತು ಬಯೋಫಾರ್ಮಾಸ್ಯೂಟಿಕಲ್ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಯ ಪ್ರಾಮುಖ್ಯತೆಗಳು ವೃದ್ಧಿಸುತ್ತಿರುವುದರಿಂದ ಮತ್ತು ಫಾರ್ಮಾಸ್ಯೂಟಿಕಲ್ ಮತ್ತು ಬಯೋಫಾರ್ಮಾಸ್ಯೂಟಿಕಲ್ ಕ್ಷೇತ್ರಗಳಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಉತ್ಪಾದನೆಗಳಲ್ಲಿ ಪರಸ್ಪರ ಸಹಕಾರದ ಪ್ರಾಮುಖ್ಯತೆಗಳಿಂದಾಗಿ ಎರಡೂ ದೇಶಗಳು ದ್ವಿಪಕ್ಷೀಯ ಸಹಕಾರಗಳ ಔಪಚಾರಿಕ ವ್ಯವಸ್ಥೆಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಈ ತಿಳುವಳಿಕಾ ಒಪ್ಪಂದಗಳು ಉಜ್ಬೆಕಿಸ್ತಾನದ ಅಡಿಜಾನ್ ವಲಯದಲ್ಲಿ ಉಜ್ಬೆಕ್ – ಭಾರತೀಯ ಮುಕ್ತ ಫಾರ್ಮಾಸಿಕ್ಯೂಟಿಕಲ್ ಪ್ರದೇಶ ಸೃಷ್ಠಿಸಲು ಸಹಕಾರಕ್ಕಾಗಿ ಕಾರ್ಯಯೋಜನೆಗಳಿಗೆ ಅನುಕೂಲಮಾಡಲಿವೆ, ಉಜ್ಬೆಕಿಸ್ತಾನದ ಅಡಿಜಾನ್ ವಲಯದಲ್ಲಿ ಉಜ್ಬೆಕ್ – ಭಾರತೀಯ ಮುಕ್ತ ಫಾರ್ಮಾಸಿಕ್ಯೂಟಿಕಲ್ ಪ್ರದೇಶದಲ್ಲಿ ಫಾರ್ಮಾಸ್ಯೂಟಿಕಲ್ ಉತ್ಪನ್ನಗಳ ಉತ್ಪಾದನೆಗಾಗಿ ಭಾರತೀಯ ಫಾರ್ಮಾಸ್ಯೂಟಿಕಲ್ ಮತ್ತು ಬಯೋಫಾರ್ಮಾಸ್ಯೂಟಿಕಲ್ ಸಂಸ್ಥೆಗಳಿಗೆ ಹೂಡಿಕೆ ಮಾಡಲು ಮತ್ತು ಉತ್ಪಾದನಾ ವ್ಯವಸ್ಥೆಗಳನ್ನು ಸ್ಥಾಪಿಸಲು ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ. 



(Release ID: 1548051) Visitor Counter : 64