ಸಂಪುಟ

ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಔಷಧ ವಲಯದಲ್ಲಿ ಸಹಕಾರಕ್ಕಾಗಿ ಮಾಡಲಾಗಿರುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ. 

Posted On: 26 SEP 2018 4:12PM by PIB Bengaluru

ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಔಷಧ ವಲಯದಲ್ಲಿ ಸಹಕಾರಕ್ಕಾಗಿ ಮಾಡಲಾಗಿರುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಔಷಧ ವಲಯದಲ್ಲಿ ಸಹಕಾರಕ್ಕಾಗಿ ಮಾಡಲಾಗಿರುವ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕುವುದಕ್ಕೆ ಅನುಮೋದನೆ ನೀಡಲಾಯಿತು. ಈ ಒಡಂಬಡಿಕೆ ವ್ಯಾಪಾರ, ಕೈಗಾರಿಕೋದ್ಯಮ, ಮತ್ತು ಔಷಧಿ ಉತ್ಪಾದನೆಗಳ ಸಂಶೋಧನೆ ಹಾಗು ಅಭಿವೃದ್ದಿಯಲ್ಲಿ ಉಭಯ ದೇಶಗಳ ನಡುವೆ ಸಹಕಾರವನ್ನು ಹೆಚ್ಚಿಸಲಿದೆ. ಈ ತಿಳುವಳಿಕಾ ಒಡಂಬಡಿಕೆಗೆ ಉಜ್ಬೆಕಿಸ್ತಾನದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿರುವ 2018 ರ ಅಕ್ಟೋಬರ್ 1 ರಂದು ಅಂಕಿತ ಬೀಳಲಿದೆ. 

ಉಭಯ ದೇಶಗಳಲ್ಲಿ ಔಷಧ ಕೈಗಾರಿಕೆಯ ಬೆಳವಣಿಗೆಯ ಮಹತ್ವದ ಹಿನ್ನೆಲೆಯಲ್ಲಿ ಮತ್ತು ವ್ಯಾಪಾರ, ಉತ್ಪಾದನೆ, ಹಾಗು ಔಷಧ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗಾಗಿ, ಉಭಯ ಸರಕಾರಗಳು ದ್ವಿಪಕ್ಷೀಯ ಸಹಕಾರದ ಔಪಚಾರಿಕ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಈ ತಿಳುವಳಿಕಾ ಒಡಂಬಡಿಕೆ ಉಭಯ ದೇಶಗಳ ಚಿಕಿತ್ಸಾ ಘಟಕಗಳಲ್ಲಿ ಕ್ರಿಯಾತ್ಮಕ ಔಷಧೀಯ ಘಟಕಾಂಶಗಳು (ಎ.ಪಿ.ಐ.ಗಳು) ಸೇರಿದಂತೆ ಔಷಧಿಗಳ ಉತ್ಪಾದನೆ ಸಾಧ್ಯತೆಯ ಬಗ್ಗೆ ಅನ್ವೇಷಣೆ ಮಾಡಲಿದೆ. ಎ.ಪಿ.ಐ.ಗಳು ಸೇರಿದಂತೆ ಔಷಧೀಯ ಉತ್ಪಾದನೆಗಳ ರಫ್ತು ಮತ್ತು ಆಮದು ನಿಯಂತ್ರಣ ಆವಶ್ಯಕತೆಗಳು, ಕಾನೂನು, ನೊಂದಾವಣೆ ಪ್ರಕ್ರಿಯೆಗಳು, ಮತ್ತು ವ್ಯಾಪಾರಕ್ಕೆ ಸಂಬಂಧಿಸಿ ಮಾಹಿತಿ ವಿನಿಮಯಕ್ಕೂ ಈ ತಿಳುವಳಿಕಾ ಒಡಂಬಡಿಕೆ ಅನುಕೂಲತೆಗಳನ್ನು ಒದಗಿಸುತ್ತದೆ. ಈ ತಿಳುವಳಿಕಾ ಒಡಂಬಡಿಕೆಯು ರಿಪಬ್ಲಿಕ್ ಆಫ್ ಉಜ್ಬೆಕಿಸ್ತಾನದ ಜೊತೆಯಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಔಷಧೀಯ ಉತ್ಪನ್ನಗಳ ಸಂಶೋಧನೆ ಹಾಗು ಅಭಿವೃದ್ದಿಯನ್ನು ಉತ್ತೇಜಿಸಲಿದೆ. 



(Release ID: 1548044) Visitor Counter : 66