ಸಂಪುಟ

ಭಾರತ ಮತ್ತು ಉಜ್ಬೆಕಿಸ್ತಾನ್ ನಡುವೆ ಮಾದಕವಸ್ತುಗಳು, ಮತ್ತುಬರಿಸುವ ಔಷಧಗಳು, ಮಾನಸಿಕ ಚಿತ್ತಭ್ರಮಣ ವಸ್ತುಗಳು ಮತ್ತು ಪೂರಕ ವಸ್ತುಗಳ ಅನೈತಿಕ ಸಾಗಾಟವನ್ನು ಪರಸ್ಪರ ಸಹಕಾರದಲ್ಲಿ ತಡೆಗಟ್ಟುವ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು ಸಂಪುಟದ ಅನುಮೋದನೆ

Posted On: 26 SEP 2018 4:21PM by PIB Bengaluru

ಭಾರತ ಮತ್ತು ಉಜ್ಬೆಕಿಸ್ತಾನ್ ನಡುವೆ ಮಾದಕವಸ್ತುಗಳು, ಮತ್ತುಬರಿಸುವ ಔಷಧಗಳು, ಮಾನಸಿಕ ಚಿತ್ತಭ್ರಮಣ ವಸ್ತುಗಳು ಮತ್ತು ಪೂರಕ ವಸ್ತುಗಳ ಅನೈತಿಕ ಸಾಗಾಟವನ್ನು ಪರಸ್ಪರ ಸಹಕಾರದಲ್ಲಿ ತಡೆಗಟ್ಟುವ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಉಜ್ಬೆಕಿಸ್ತಾನ್ ನಡುವೆ ಮಾದಕವಸ್ತುಗಳು, ಮತ್ತುಬರಿಸುವ ಔಷಧಗಳು, ಮಾನಸಿಕ ಚಿತ್ತಭ್ರಮಣ ವಸ್ತುಗಳು ಮತ್ತು   ಪೂರಕ ವಸ್ತುಗಳ ಅನೈತಿಕ ಸಾಗಾಟವನ್ನು ಪರಸ್ಪರ ಸಹಕಾರದಲ್ಲಿ ತಡೆಗಟ್ಟುವ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು  ಅನುಮೋದನೆ ನೀಡಿದೆ.

ಪ್ರಯೋಜನಗಳು:

ಈ ತಿಳುವಳಿಕಾ ಒಪ್ಪಂದವು ಪರಸ್ಪರ ಸಹಕಾರದಲ್ಲಿ ಮಾದಕ ಔಷಧ ವಸ್ತುಗಳನ್ನು ಮತ್ತು ಮಾನಸಿಕ ಚಿತ್ತಭ್ರಮಣ ವಸ್ತುಗಳ ಅನೈತಿಕ ಸಾಗಾಟವನ್ನು ತಡೆಗಟ್ಟುವುದಕ್ಕೆ   ಸಹಕಾರಿಯಾಗಲಿದೆ.   ಒಪ್ಪಂದವು ಗುರುತಿಸಲಾದ  ಕ್ಷೇತ್ರಗಳಲ್ಲಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯವಿರುವ  ಸಹಕಾರ ಮತ್ತು ಸಹಾಯಕ್ಕಾಗಿ ರೂಪಿಸಲಾದ ಪರಿಣಾಮಕಾರಿ ರೂಪುರೇಷೆ ಆಗಿದೆ.  ತಿಳುವಳಿಕಾ ಒಪ್ಪಂದ ಎರಡೂ ಸರಕಾರಗಳ ನಡುವೆ ಪರಸ್ಪರ ಪರಿಣಾಮಕಾರಿ ಸಾಂಸ್ಥಿಕ ಕಾರ್ಯಪ್ರಯೋಗಗಳಿಗೆ ಅವಕಾಶ ಮಾಡಲಿದೆ. ಈ ತಿಳುವಳಿಕಾ ಒಪ್ಪಂದ ಅನುಷ್ಠಾನಕ್ಕೆ ಬಂದ ಬಳಿಕ ಮಾದಕವಸ್ತುಗಳ ಕಳ್ಳಸಾಗಣೆಗೆ ಕಡಿವಾಣ ಹಾಕಲು ಬಹಳಷ್ಟು ಸಹಕಾರಿಯಾಗಲಿದೆ.

****

(Release ID: 1547605) Visitor Counter : 100