ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಪಕ್ಯೊಂಗ್ ವಿಮಾನ ನಿಲ್ದಾಣ ಉದ್ಘಾಟಿಸಿದರು, ಸಿಕ್ಕಿಂಗೆ ಲಭಿಸಿತು ವಾಯುಯಾನ ಸಂಪರ್ಕ 

Posted On: 24 SEP 2018 1:24PM by PIB Bengaluru

ಪ್ರಧಾನಮಂತ್ರಿ ಪಕ್ಯೊಂಗ್ ವಿಮಾನ ನಿಲ್ದಾಣ ಉದ್ಘಾಟಿಸಿದರು, ಸಿಕ್ಕಿಂಗೆ ಲಭಿಸಿತು ವಾಯುಯಾನ ಸಂಪರ್ಕ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು  ಸಿಕ್ಕಿಂನಲ್ಲಿ ಪಕ್ಯೊಂಗ್ ವಿಮಾನ ನಿಲ್ದಾಣ ಉದ್ಘಾಟಿಸಿದರು.  ಇದು ಹಿಮಾಲಯ ತಪ್ಪಲ ರಾಜ್ಯಗಳಲ್ಲಿ ಮೊದಲ ವಿಮಾನ ನಿಲ್ದಾಣವಾಗಿದೆ ಹಾಗೂ ದೇಶದ 100ನೇ ವಿಮಾನ ನಿಲ್ದಾಣವಾಗಿದೆ.  

ನೆರೆದಿದ್ದ ಬೃಹತ್ ಸಭೆಯನ್ನುದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸಿಕ್ಕಂ ಪಾಲಿಗೆ ಇದೊಂದು ಐತಿಹಾಸಿಕ ದಿನವಾಗಿದೆ ಮತ್ತು ಭಾರತದ ಪಾಲಿಗೆ ಅತ್ಯಂತ ಮಹತ್ತರವಾಗಿದೆ ಎಂದರು. 

ಪಕ್ಯೊಂಗ್ ವಿಮಾನ ನಿಲ್ದಾಣದ ನಿರ್ಮಾಣದೊಂದಿಗೆ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಶತಕ ತಲುಪಿದೆ ಎಂದರು .ಇತ್ತೀಚೆಗೆ ಸಿಕ್ಕಿಂನಿಂದ ಪ್ರಪ್ರಥಮಬಾರಿಗೆ ಸೇರ್ಪಡೆಗೊಂಡು ವಿಜಯ್ ಹಜಾರಡ ಟ್ರೋಫಿಯಲ್ಲಿ ಶತಕ ಭಾರಿಸಿದ ಸಿಕ್ಕಿಂನ ಯುವ ಕ್ರಿಕೆಟಿಗ ಶ್ರೀ ನೀಲೇಶ್ ಲಮಿಚನಯ್ ಹೆಸರನ್ನೂ ಪ್ರಧಾನಮಂತ್ರಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. 

 

ಪಕ್ಯೊಂಗ್ ವಿಮಾನ ನಿಲ್ದಾಣವು ಸಿಕ್ಕಿಂ ರಾಜ್ಯದೊಳಗೆ ಅತ್ಯುತ್ತಮ ಸಂಪರ್ಕವನ್ನು ಸುಲಭವಾಗಿ ಏರ್ಪಡಿಸಲಿದೆ. ಜನಸಾಮಾನ್ಯನ ಬಳಕೆಯ ಸಹಾಯಕ್ಕಾಗಿ ನಿಲ್ದಾಣವು ಉಡಾನ್ ಯೋಜನೆಯ ಅಂಗ ಕೂಡಾ ಆಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು

 

ಸಂಪೂರ್ಣ ಈಶಾನ್ಯ ಭಾರತದ ಪ್ರದೇಶಗಳಿಗೆ ಮೂಲಸೌಕರ್ಯಗಳು ಮತ್ತು ಭಾವನಾತ್ಮಕ ಸಂರ್ಪಕಗಳನ್ನು ಅತಿ ತೀವ್ರಗತಿಯಲ್ಲಿ ನಡೆಯಲು ಪ್ರಯತ್ನಗಳನ್ನು ಮಾಡಲಾಗಿದೆ.  ಅಭಿವೃದ್ಧಿ ಕಾರ್ಯಯೋಜನೆಗಳ ಪ್ರಗತಿ ಪರಾಮರ್ಶನ-ಪರಿಶೀಲನೆಗಾಗಿ ಹಲವು ಬಾರಿ ನಾನು ಈಶಾನ್ಯ ಭಾರತದ ರಾಜ್ಯಗಳಿಗೆ ನಾನು ಭೇಟಿ ನೀಡಿದ್ದೇನೆ. ಇದೂ ಅಲ್ಲದೆ, ಕೇಂದ್ರ ಸರಕಾರದ ಸಚಿವರುಗಳು ಈ ಪ್ರದೇಶಕ್ಕೆ ಆಗಾಗ  ಭೇಟಿ ನೀಡುತ್ತಿದ್ದಾರೆ.  ಇದರ ಪರಿಣಾಮಗಳು ನಮಗಿಂದು ಗೋಚರಿಸುತ್ತಿವೆ. ವೃದ್ಧಿಸಿದ ವಾಯುಯಾನ ಮತ್ತು ರೈಲ್ವೇ ಸಂಪರ್ಕ, ಉತ್ತಮ ರಸ್ತೆಗಳು, ಬೃಹತ್ ಸೇತುವೆಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ.

 

ಇಂದು ದೇಶದಲ್ಲಿರುವ 100 ವಿಮಾನ ನಿಲ್ದಾಣಗಳಲ್ಲಿ 35 ವಿಮಾನ ನಿಲ್ದಾಣಗಳು ಕಳೆದ 4 ವರ್ಷಗಳಲ್ಲಿ ಪ್ರಾರಂಭವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. 

 

ಸಾವಯವ ಕೃಷಿಯಲ್ಲಿ ಸಿಕ್ಕಿಂನ ಪ್ರಗತಿಯನ್ನೂ ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.  ಈ ನಿಟ್ಟಿನಲ್ಲಿ “ಈಶಾನ್ಯ ಭಾರತದ ರಾಜ್ಯಗಳ ಸಾವಯವ ಮೌಲ್ಯ ಅಭಿವೃದ್ಧಿಯ ಸಂಕಲ್ಪ” ( ಮಿಷನ್ ಓರ್ಗಾನಿಕ್ ವಾಲ್ಯೂ ಡೆವೆಲೊಪ್ ಮೆಂಟ್ ಫೋರ್ ನೋರ್ತ್ ಈಸ್ಟರ್ನ್ ರೀಜನ್ ) “ ಎಂಬ ಯೋಜನೆಯನ್ನೂ ಕೇಂದ್ರ ಸರಕಾರ ಪ್ರಾರಂಭಿಸಿದ್ದಾಗಿ ಪ್ರಧಾನಮಂತ್ರಿ ಅವರು ತಿಳಿಸಿದರು. 

 

***



(Release ID: 1547265) Visitor Counter : 67