ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೌಲ್ಯಮಾಪನ ಮಾಡಿ, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ 

Posted On: 17 SEP 2018 11:15PM by PIB Bengaluru

ವಾರಾಣಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೌಲ್ಯಮಾಪನ ಮಾಡಿ, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಪುಟ್ಟ ಶಾಲಾ ಮಕ್ಕಳೊಂದಿಗೆ 90 ನಿಮಿಷಗಳ ಕಾಲ ಆಪ್ತ ಸಂವಾದ ನಡೆಸಿದರು. 

ನರೂರ್ ಗ್ರಾಮದ ಪ್ರಾಥಮಿಕ ಶಾಲೆಗೆ ಆಗಮಿಸಿದ ಅವರಿಗೆ ಶಾಲೆಯ ಮಕ್ಕಳು ಉತ್ಸಾಹದಿಂದ ಶುಭ ಕೋರಿದರು. ಅವರೂ ಸಹ ಮಕ್ಕಳಿಗೆ ವಿಶ್ವಕರ್ಮ ಜಯಂತಿಯ ಶುಭ ಕೋರಿ, ವಿವಿಧ ಕೌಶಲಗಳನ್ನು ಕರಗತ ಮಾಡಿಕೊಳ್ಳುವಂತೆ ತಿಳಿಸಿದರು. 

ವಿದ್ಯಾರ್ಥಿಗಳಾಗಿ ಪ್ರಶ್ನೆಗಳನ್ನು ಕೇಳುವುದು ಅತಿ ಮುಖ್ಯ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರಶ್ನೆಗಳನ್ನು ಕೇಳಲು ಎಂದಿಗೂ ಹೆದರಬೇಡಿ ಎಂದು ಪುಟ್ಟ ಶಾಲಾ ಮಕ್ಕಳಿಗೆ ತಿಳಿಯ ಹೇಳಿದರು. ಅದು ಕಲಿಕೆಯ ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಪ್ರತಿಪಾದಿಸಿದರು. 

"ರೂಮ್ ಟು ರೀಡ್" ಲಾಭರಹಿತ ಸಂಸ್ಥೆಯಿಂದ ನೆರವು ಪಡೆಯುತ್ತಿರುವ ಪುಟ್ಟ ಮಕ್ಕಳೊಂದಿಗೆ ಪ್ರಧಾನಮಂತ್ರಿಯವರು ಕೆಲ ಕಾಲ ಕಳೆದರು. 

ಬಳಿಕ ವಾರಾಣಸಿಯ ಡಿ.ಎಲ್.ಡಬ್ಲ್ಯುನಲ್ಲಿ ಪ್ರಧಾನಮಂತ್ರಿಯವರು ಕಾಶಿ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನೆರವು ಪಡೆಯುತ್ತಿರುವ ಬಡ ಮತ್ತು ದುರ್ಬಲವರ್ಗದ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕಷ್ಟಪಟ್ಟು ಓದುವಂತೆ ಮತ್ತು ಕ್ರೀಡೆಯಲ್ಲೂ ಆಸಕ್ತಿ ಮೂಡಿಸಿಕೊಳ್ಳುವಂತೆ ಅವರು ತಿಳಿಸಿದರು. 

ಸಂಜೆ, ಪ್ರಧಾನಮಂತ್ರಿಯವರು ವಾರಾಣಸಿಯ ರಸ್ತೆಗಳಲ್ಲಿ ಸಂಚರಿಸಿ, ನಗರದ ಅಭಿವೃದ್ಧಿಯ ಮೌಲ್ಯಮಾಪನ ಮಾಡಿದರು. ಕಾಶಿ ವಿಶ್ವನಾಥ ದೇವಾಲಯದ ಬಳಿ ಕೆಲ ಕಾಲ ನಿಂತು ಪ್ರಾರ್ಥನೆ ಸಲ್ಲಿಸಿದರು. ಮಂಡುದಿಹ್ ರೈಲು ನಿಲ್ದಾಣಕ್ಕೂ ಅವರು ಹಠಾತ್ ಭೇಟಿ ನೀಡಿದರು. 



(Release ID: 1546609) Visitor Counter : 69