ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಾಧೀಶ ರಂಜನ್ ಗೊಗೋಯ್ ನೇಮಕ 

Posted On: 13 SEP 2018 7:18PM by PIB Bengaluru

ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಾಧೀಶ ರಂಜನ್ ಗೊಗೋಯ್ ನೇಮಕ 
 

ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಾಧೀಶ ರಂಜನ್ ಗೊಗೋಯ್ ಅವರನ್ನು ಭಾರತದ ರಾಷ್ಟ್ರಪತಿ ಅವರು ನೇಮಿಸಿದ್ದಾರೆ. ಪ್ರಸ್ತುತ ಮುಖ್ಯ ನ್ಯಾಯಾಧೀಶರಾಗಿರುವ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು ಅಕ್ಟೋಬರ್ 03,2018 ರಂದು ನಿವೃತ್ತಿಯಾದ ನಂತರ ನ್ಯಾಯಾಧೀಶ ರಂಜನ್ ಗೊಗೋಯ್ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ನವೆಂಬರ್ 18,1954ರಂದು ಜನಿಸಿದ ನ್ಯಾಯಾಧೀಶ ರಂಜನ್ ಗೊಗೋಯ್ ಅವರು 1978ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಇವರು ಸಂವಿಧಾನಿಕ, ತೆರಿಗೆಗಳು ಮತ್ತು ಸಾಂಸ್ಥಿಕ ವಿಷಯಗಳಲ್ಲಿ ಗೌಹಾಟಿ ಉಚ್ಛನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು. ಫೆಬ್ರವರಿ 28,2001ರಂದು ಗೌಹಾಟಿ ಉಚ್ಛನ್ಯಾಯಾಲಯದ ಶಾಶ್ವತ ನ್ಯಾಯಾಧೀಶರಾಗಿ ನೇಮಕಗೊಂಡರು. ಸೆಪ್ಟೆಂಬರ್ 09,2010ರಂದು ಪಂಜಾಬ್ & ಹರ್ಯಾಣ ಉಚ್ಛನ್ಯಾಯಾಲಯಕ್ಕೆವರ್ಗಾವಣೆಗೊಂಡರು, ಅಲ್ಲದೆ ಫೆಬ್ರವರಿ 12,2011ರಂದು 2010ರಂದು ಪಂಜಾಬ್ & ಹರ್ಯಾಣ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. ಎಪ್ರಿಲ್ 23,2012ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು.


(Release ID: 1546149) Visitor Counter : 132