ಸಂಪುಟ

ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ) ಕಾಯಿದೆ 2014 ರ ತಿದ್ದುಪಡಿಗೆ ಸಂಪುಟ ಅಂಗೀಕಾರ. 

Posted On: 12 SEP 2018 4:22PM by PIB Bengaluru

ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ) ಕಾಯಿದೆ 2014 ರ ತಿದ್ದುಪಡಿಗೆ ಸಂಪುಟ ಅಂಗೀಕಾರ 
 

ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ) ಅಮರಾವತಿ / ವಿಜಯವಾಡ (ಆಂದ್ರಪ್ರದೇಶ), ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ) ಭೋಪಾಲ್ (ಮಧ್ಯಪ್ರದೇಶ), ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ), ಜೊರ್ಹಾತ್ (ಅಸ್ಸಾಂ) ಮತ್ತು ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ), ಕುರುಕ್ಷೇತ ( ಹರ್ಯಾಣ) ಎಂಬ ನೂತನ ನಾಲ್ಕು ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ) ಸಂಸ್ಥೆಗಳನ್ನು ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ) ಕಾಯಿದೆ 2014ರ ವ್ಯಾಪ್ತಿಯಡಿಯಲ್ಲಿ ತರುವ ತಿದ್ದುಪಡಿಗಾಗಿ ಮತ್ತು ಅಹ್ಮದಾಬಾದ್ ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಮಟ್ಟದ ಅತ್ಯುತ್ತಮ ಶ್ರೇಣಿಯ ಇನ್ಸ್ಟಿಟ್ಯೂಷನ್ ಆಫ್ ನ್ಯಾಷನಲ್ ಇಂಪೋರ್ಟೆನ್ಸ್ (ಐ.ಎನ್.ಐ)ಗಳೆಂದು ಘೋಷಿಸಲು ಮಸೂದೆ ಮಂಡಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿತು. ಎನ್.ಐ.ಡಿ ವಿಜಯವಾಡವನ್ನು “ಎನ್.ಐ.ಡಿ ಅಮರಾವತಿ” ಎಂಬ ಮರು ನಾಮಕಾರಣ ಮಾಡುವ ಮತ್ತು ಪ್ರಧಾನ ವಿನ್ಯಾಸಕಾರರನ್ನು ಪ್ರೊಫೆಸರ್ ಅಭಿದಾನದ ಸಮಾನತೆ ನೀಡುವ ಅಗತ್ಯದ ಬದಲಾವಣೆಗಳೊಂದಿಗೆ ಪರಿಣಾಮಕಾರಿ ತಿದ್ದಪಡಿಯೊಂದಿಗೆ, ಕಾಯಿದೆಯಲ್ಲಿ ಇತರ ಸಣ್ಣಪುಟ್ಟ ತಿದ್ದುಪಡಿಗಳೂ ಕೂಡಾ ಪ್ರಸ್ತಾವಿತ ಮಸೂದೆಯಲ್ಲಿದೆ. 

ಎನ್.ಐ.ಡಿ.ಗಳನ್ನು ಇನ್ಸ್ಟಿಟ್ಯೂಷನ್ ಆಫ್ ನ್ಯಾಷನಲ್ ಇಂಪೋರ್ಟೆನ್ಸ್ (ಐ.ಎನ್.ಐ) ಮಾದರಿಯಲ್ಲಿ ದೇಶದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಸ್ಥಾಪನೆ ಮಾಡುವುದರಿಂದ ವಿನ್ಯಾಸಗಳಲ್ಲಿ ಅತ್ಯುತ್ತಮ ಕೌಶಲ್ಯಹೊಂದಿರುವ ಮಾನವಶಕ್ತಿಯನ್ನು ಸೃಷ್ಠಿಸಲಿದೆ, ಆ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಠಿಮಾಡಲಿದೆ, ವೃತ್ತಿಕಲೆಗಳಿಗೆ, ಕೈಮಗ್ಗಗಳಿಗೆ, ಗ್ರಾಮೀಣ ತಂತ್ರಜ್ಞಾನಕ್ಕೆ, ಸಣ್ಣ, ಮಧ್ಯಮ ಮತ್ತು ಬೃಹತ್ ಗಾತ್ರದ ವ್ಯವಹಾರಿಕೋದ್ಯಮಗಳಿಗೆ ಸುಸ್ಥಿರ ವಿನ್ಯಾಸ ಪೂರೈಸುವ ಮೂಲಕ ಮಧ್ಯವರ್ತಿಯಾಗಿ ಪ್ರವರ್ತಿಸುವುದು ಮತ್ತು ಸಾಮರ್ಥ್ಯ, ಯೋಗ್ಯತೆ ಮತ್ತು ಸಂಸ್ಥೆಯ ನಿರ್ಮಾಣಕ್ಕಾಗಿ ಬಾಹ್ಯಸಂಪರ್ಕ ಕಾರ್ಯಕ್ರಮಗಳು. 
 

***



(Release ID: 1545953) Visitor Counter : 70