ಸಂಪುಟ
ಅಮೃತಸರ, ಬೋಧ ಗಯಾ, ನಾಗಪುರ, ಸಂಭಾಲ್ಪುರ, ಸಿರ್ಮೌರ್, ವಿಶಾಖಪಟ್ತಣಂ ಮತ್ತು ಜಮ್ಮುವಿನಲ್ಲಿ ಏಳು ಹೊಸ ಐ.ಐ.ಎಂ.ಗಳ ಖಾಯಂ ಕ್ಯಾಂಪಸ್ ಸ್ಥಾಪನೆಗೆ ಮತ್ತು ಕಾರ್ಯಾಚರಣೆಗೆ ಸಂಪುಟದ ಅನುಮೋದನೆ.
Posted On:
05 SEP 2018 9:08PM by PIB Bengaluru
ಅಮೃತಸರ, ಬೋಧ ಗಯಾ, ನಾಗಪುರ, ಸಂಭಾಲ್ಪುರ, ಸಿರ್ಮೌರ್, ವಿಶಾಖಪಟ್ತಣಂ ಮತ್ತು ಜಮ್ಮುವಿನಲ್ಲಿ ಏಳು ಹೊಸ ಐ.ಐ.ಎಂ.ಗಳ ಖಾಯಂ ಕ್ಯಾಂಪಸ್ ಸ್ಥಾಪನೆಗೆ ಮತ್ತು ಕಾರ್ಯಾಚರಣೆಗೆ ಸಂಪುಟದ ಅನುಮೋದನೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಮೃತಸರ, ಬೋಧ ಗಯಾ, ನಾಗಪುರ, ಸಂಭಾಲ್ಪುರ, ಸಿರ್ಮೌರ್, ವಿಶಾಖಪಟ್ಟಣಂ ಮತ್ತು ಜಮ್ಮುವಿನಲ್ಲಿ ಏಳು ಹೊಸ ಐ.ಐ.ಎಂ.ಗಳ ಖಾಯಂ ಕ್ಯಾಂಪಸ್ ಸ್ಥಾಪನೆಗೆ ಮತ್ತು ಕಾರ್ಯಾಚರಣೆಗೆ ಅನುಮೋದನೆ ನೀಡಲಾಯಿತಲ್ಲದೆ ಅವುಗಳ ಒಟ್ಟು ರೂ. 3775.42 ಕೋ..ಗಳ ಆವರ್ತಕ ವೆಚ್ಚಕ್ಕೆ ಅಂಗೀಕಾರ ನೀಡಲಾಯಿತು. (ರೂ. 2999.96 ಕೋ. ಗಳನ್ನು ಆವರ್ತಕವಲ್ಲದ ಮತ್ತು ರೂ. 775.46 ಕೋ. ಗಳನ್ನು ಆವರ್ತಕ ವೆಚ್ಚವಾಗಿ ). ಈ ಐ.ಐ.ಎಂ .ಗಳನ್ನು 2015-16 / 2016-17 ರ ಅವಧಿಯಲ್ಲಿ ಸ್ಥಾಪಿಸಲಾಗಿತ್ತು. ಇವುಗಳು ತಾತ್ಕಾಲಿಕ ಕ್ಯಾಂಪಸ್ ಗಳಲ್ಲಿ ಕಾರ್ಯಚರಿಸುತ್ತಿವೆ.
ಒಟ್ಟು ವೆಚ್ಚವನ್ನು ರೂ. 3775.42 ಕೋ. ಗಳೆಂದು ಅಂದಾಜಿಸಲಾಗಿದ್ದು, ಇದರಲ್ಲಿ 2804.09 ಕೋ.ರೂ.ಗಳನ್ನು ಈ ಸಂಸ್ಥೆಗಳ ಖಾಯಂ ಕ್ಯಾಂಪಸುಗಳ ನಿರ್ಮಾಣಕ್ಕಾಗಿ ಈ ಕೆಳಗಿನಂತೆ ವ್ಯಯ ಮಾಡಲಾಗುತ್ತದೆ
ಕ್ರಮ ಸಂಖ್ಯೆ
|
ಐ.ಐ.ಎಂಗಳ ಹೆಸರು
|
ಮೊತ್ತ
(ಕೋಟಿ ರೂಪಾಯಿಗಳಲ್ಲಿ)
|
1.
|
ಐ.ಐ.ಎಂ. ಅಮೃತಸರ
|
348.31
|
2.
|
ಐ.ಐ.ಎಂ.ಬೋಧಗಯ
|
411.72
|
3.
|
ಐ.ಐ.ಎಂ ನಾಗಪುರ
|
379.68
|
4.
|
ಐ.ಐ.ಎಂ ಸಂಭಾಲ್ಪುರ
|
401.94
|
5.
|
ಐ.ಐ.ಎಂ. ಸಿರ್ಮೌರ್
|
392.51
|
6.
|
ಐ.ಐ.ಎಂ. ವಿಶಾಖಪಟ್ಟಣಂ
|
445.00
|
7.
|
ಐ.ಐ.ಎಂ ಜಮ್ಮು
|
424.93
|
|
ಒಟ್ಟು
|
2804.09
|
ಪ್ರತೀ ಐ.ಐ.ಎಂ.ಗಳೂ 60384 ಚದರ ಕಿಲೋ ಮೀಟರ್ ನಿರ್ಮಾಣ ಪ್ರದೇಶವನ್ನು ಹೊಂದಿರಲಿವೆ ಮತ್ತು ಪ್ರತೀ ಐ.ಐ.ಎಂ.ಗಳೂ ತಲಾ 600 ವಿದ್ಯಾರ್ಥಿಗಳಿಗೆ ಅವಶ್ಯವಾದ ಸಂಪೂರ್ಣ ಮೂಲ ಸೌಕರ್ಯವನ್ನು ಒಳಗೊಂಡಿರುತ್ತವೆ. ಈ ಸಂಸ್ಥೆಗಳಿಗೆ ಆವರ್ತನ ನಿಧಿಯನ್ನೂ ವಿದ್ಯಾರ್ಥಿಯೊಬ್ಬರಿಗೆ 5 ವರ್ಷಕ್ಕೆ ರೂ.5 ಲಕ್ಷಗಳಂತೆ ಅನುಮೋದನೆ ನೀಡಲಾಗಿದೆ. ಆ ಬಳಿಕ ಸಂಸ್ಥೆಗಳು ನಿರ್ವಹಣಾ ಮತ್ತು ಸಂಸ್ಥೆ ನಡೆಸಲು ತಗಲುವ ವೆಚ್ಚವನ್ನು ಅಂತರಿಕ ನಿಧಿ ಸಂಗ್ರಹದ ಮೂಲಕ ನಿಭಾಯಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ಈ ಸಂಸ್ಥೆಗಳಿಗೆ ಖಾಯಂ ಕ್ಯಾಂಪಸ್ ನಿರ್ಮಾಣ 2021ರ ಜೂನ್ ತಿಂಗಳೊಳಗೆ ಪೂರ್ಣಗೊಳ್ಳತಕ್ಕದ್ದು. ಇದರೊಂದಿಗೆ ಎಲ್ಲಾ 20 ಐ.ಐ.ಎಂ. ಗಳೂ ತಮ್ಮದೇ ಖಾಯಂ ಕ್ಯಾಂಪಸ್ ಹೊಂದಿದಂತಾಗುತ್ತದೆ.
ವಿದ್ಯಾರ್ಥಿಗಳು ವೃತ್ತಿಪರ ಮ್ಯಾನೇಜರುಗಳಾಗುವುದಕ್ಕೆ ಅನುಕೂಲವಾಗುವಂತಹ ಶಿಕ್ಷಣವನ್ನು ಐ.ಐ.ಎಂ.ಗಳು ಒದಗಿಸಲಿವೆ. ಮಂಜೂರಾತಿಯಿಂದ ದೇಶದ ಕೈಗಾರಿಕಾ ಅಭಿವೃದ್ದಿ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ.
(Release ID: 1545530)
Visitor Counter : 173