ಸಂಪುಟ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜಂಟಿ ಅಂಚೆ ಚೀಟಿ ವಿತರಣೆಗೆ ಸಂಪುಟ ಅಂಗೀಕಾರ 

Posted On: 09 AUG 2018 5:02PM by PIB Bengaluru

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜಂಟಿ ಅಂಚೆ ಚೀಟಿ ವಿತರಣೆಗೆ ಸಂಪುಟ ಅಂಗೀಕಾರ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ “ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 20 ವರ್ಷಗಳ ವ್ಯೂಹಾತ್ಮಕ ಸಹಭಾಗಿತ್ವ” ಕುರಿತಂತೆ ಜಂಟಿಯಾಗಿ ಅಂಚೆ ಚೀಟಿ ಬಿಡುಗಡೆ ಮಾಡಿದ ಬಗ್ಗೆ ಪರಾಮರ್ಶಿಸಲಾಯಿತು. ಜಂಟಿ ಅಂಚೆ ಚೀಟಿಗಳನ್ನು 2018 ರ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. 

ಭಾರತ – ದಕ್ಷಿಣ ಆಫ್ರಿಕಾಗಳು ಜಂಟಿಯಾಗಿ ಹೊರಡಿಸಿದ ಅಂಚೆ ಚೀಟಿಗಳು ದೀನದಯಾಳ್ ಉಪಾಧ್ಯಾಯ ಮತ್ತು ದಕ್ಷಿಣ ಆಫ್ರಿಕಾದ ಒಲಿವರ್ ರೆಜಿನಾಲ್ಡ್ ತಾಂಬೋ ಅವರ ಚಿತ್ರಗಳನ್ನು ಒಳಗೊಂಡಿವೆ. ಈ ನಿಟ್ಟಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 2018 ರ ಮೇ ತಿಂಗಳಲ್ಲಿ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಗಿತ್ತು. 


(Release ID: 1542569) Visitor Counter : 87