ಸಂಪುಟ
ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳ ಅನ್ವೇಷಣೆ ಮತ್ತು ಬಳಕೆ ಕುರಿತಂತೆ ನೀತಿ ಚೌಕಟ್ಟಿಗೆ ಸಂಪುಟದ ಅಂಗೀಕಾರ
Posted On:
01 AUG 2018 6:10PM by PIB Bengaluru
ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳ ಅನ್ವೇಷಣೆ ಮತ್ತು ಬಳಕೆ ಕುರಿತಂತೆ ನೀತಿ ಚೌಕಟ್ಟಿಗೆ ಸಂಪುಟದ ಅಂಗೀಕಾರ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳಾದ ಜೇಡಿ ಶಿಲಾಪದರದ ನ್ಯಾಫ್ತಾ ಎಣ್ಣೆ ಯಾ ಅನಿಲ , ಕಲ್ಲಿದ್ದಲು ಹಾಸಿನ ಕೆಳಗಿನ ಮೀಥೇನ್ (ಸಿ.ಬಿ.ಎನ್.) ಇತ್ಯಾದಿಗಳ ಶೋಧನೆ ಮತ್ತು ಬಳಕೆಗೆ ಅನುಮತಿ ನೀಡುವ ನೀತಿಯನ್ನು ಅಂಗೀಕರಿಸಲಾಯಿತು. ಇದನ್ನು ಉತ್ಪಾದನಾ ಪಾಲುದಾರಿಕೆ ಗುತ್ತಿಗೆ (ಪಿ.ಎಸ್.ಸಿ.ಗಳು) , ಸಿ.ಬಿ.ಎಂ ಗುತ್ತಿಗೆಗಳು ಮತ್ತು ಈಗಿರುವ ಅನುಮತಿ ನೀಡಲಾದ ಪ್ರದೇಶಗಳಲ್ಲಿ ಹಾಲಿ ಗುತ್ತಿಗೆ ಹೊಂದಿರುವವರನ್ನು ಉತ್ತೇಜಿಸಲು ಕ್ಷೇತ್ರಗಳನ್ನು ಗುರುತಿಸುವ ಮೂಲಕ ಅಸಾಂಪ್ರದಾಯಿಕ ಹೈಡೋಕಾರ್ಬನ್ ಗಳ ಸಾಮರ್ಥ್ಯವನ್ನು ಹೊರತರಲು ಬಳಸುವ ಮೂಲಕ ಅನುಷ್ಟಾನಕ್ಕೆ ತರಲಾಗುವುದು.
ಲಾಭಗಳು:
· ಈ ನೀತಿಯು ಹಾಲಿ ಗುತ್ತಿಗೆ ಪ್ರದೇಶಗಳಲ್ಲಿ ಇದುವರೆಗೆ ಶೋಧನೆಯಾಗದೆ ಉಳಿದಿರುವ ಮತ್ತು ಬಳಕೆಯಾಗದಿರುವ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಹೊರತೆಗೆಯಲು ಅನುಕೂಲ ಒದಗಿಸುತ್ತದೆ.
ಈ ನೀತಿಯಿಂದಾಗಿ ಅನ್ವೇಷಣೆ ಮತ್ತು ಉತ್ಪಾದನಾ (ಇ. ಮತ್ತು ಪಿ.) ಕಾರ್ಯ ಚಟುವಟಿಕೆಗಳಲ್ಲಿ ಹೊಸ ಹೂಡಿಕೆ ಸಾಧ್ಯವಾಗಲಿದೆ ಮತ್ತು ಹೊಸ ಹೈಡ್ರೋಕಾರ್ಬನ್ ಗಳ ಶೋಧನೆ ಸಾಧ್ಯವಾಗಿ ಆ ಮೂಲಕ ದೇಶೀಯ ಉತ್ಪಾದನೆಯಲ್ಲಿ ಹೆಚ್ಚಳ ನಿರೀಕ್ಷಿಸಬಹುದಾಗಿದೆ.
ಹೆಚ್ಚುವರಿ ಹೈಡ್ರೋಕಾರ್ಬನ್ ಸಂಪನ್ಮೂಲಗಳ ಅನ್ವೇಷಣೆ ಮತ್ತು ಹೊರತೆಗೆಯುವಿಕೆ ಹೊಸ ಹೂಡಿಕೆಯನ್ನು ಪ್ರಚೋದಿಸಲಿದೆ, ಆರ್ಥಿಕ ಚಟುವಟಿಕೆಗಳಿಗೆ ಹೊಸ ಶಕ್ತಿ ತುಂಬಲಿದೆ , ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಆ ಮೂಲಕ ಸಮಾಜದ ವಿವಿಧ ವಲಯಗಳಿಗೆ ಲಾಭ ತರಲಿದೆ.
ಇದರಿಂದ ಹೊಸ , ನವೀನ ಮತ್ತು ಆಧುನಿಕ ತಂತ್ರಜ್ಞಾನ ಸೇರ್ಪಡೆಯಾಗುವುದಲ್ಲದೆ ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳ ಹೊರತೆಗೆಯುವಿಕೆ, ಬಳಕೆಯಲ್ಲಿ ನವೀನ ತಂತ್ರಜ್ಞಾನ ಸಹಕಾರಗಳು ಅಸ್ತಿತ್ವಕ್ಕೆ ಬರಲಿವೆ.
ಹಿನ್ನೆಲೆ:
ಹಾಲಿ ಇರುವ ಪಿ.ಎಸ್.ಸಿ. ಗುತ್ತಿಗೆ ವ್ಯವಸ್ಥೆಯ ಪ್ರಕಾರ ಈಗಿರುವ ಗುತ್ತಿಗೆದಾರರಿಗೆ ಸಿ.ಬಿ.ಎಂ. ಅಥವಾ ಇತರ ಅಸಾಂಪ್ರದಾಯಿಕ ಹೈಡ್ರೋಕಾರ್ಬನುಗಳ ಅನ್ವೇಷಣೆ ಮತ್ತು ಹೊರತೆಗೆಯುವಿಕೆಗೆ ಈಗಾಗಲೇ ಪರವಾನಗಿ ಯಾ ಲೀಸ್ ನೀಡಲಾದ ಪ್ರದೇಶಗಳಲ್ಲಿ ಅವಕಾಶ ನೀಡಲಾಗದು. ಅದೇ ರೀತಿ ಸಿ.ಬಿ.ಎಂ ಗುತ್ತಿಗೆದಾರರಿಗೆ ಸಿ.ಬಿ.ಎಂ. ಹೊರತುಪಡಿಸಿ ಇನ್ಯಾವುದೇ ಹೈಡ್ರೋಕಾರ್ಬನ್ ಹೊರತೆಗೆಯುವಿಕೆಗೆ ಅವಕಾಶ ನೀಡಲಾಗದು. ಭಾರತದ ಜೇಡಿಮಡ್ಡಿ ಪದರ ಸಂಚಯಿತ ತೈಲ ನಿಕ್ಷೇಪಿತ ಜಲಾನಯನ ಪ್ರದೇಶದಲ್ಲಿ ಪಿ.ಎಸ್.ಸಿ.ಗಳಡಿ ವಿವಿಧ ಗುತ್ತಿಗೆದಾರರು ಹಾಲಿ ಹೊಂದಿರುವ ಎಕರೆಗಟ್ಟಲೆ ಪ್ರದೇಶ ಮತ್ತು ಸಿ.ಬಿ.ಎಂ ಬ್ಲಾಕುಗಳು ಮತ್ತು ನಾಮಕರಣ ವ್ಯವಸ್ಥೆಯಲ್ಲಿ ನೈಸರ್ಗಿಕ ಅನಿಲ ಕಂಪೆನಿಗಳು (ಎನ್.ಒ.ಸಿ.ಗಳು) ಹೊಂದಿರುವ ಪ್ರದೇಶಗಳು ಬಹು ದೊಡ್ದ ಪ್ರಮಾಣದಲ್ಲಿವೆ.
ವಿವಿಧ ಅಂತಾರಾಷ್ಟ್ರೀಯ ಏಜೆನ್ಸಿಗಳು ಮಾಡಿದ ಮೌಲ್ಯ ಮಾಪನ ಪ್ರಕಾರ ಭಾರತದ 5 ಮಡ್ಡಿ ಸಂಚಯಿತ ಜಲಾನಯನ ಪ್ರದೇಶಗಳಲ್ಲಿ 100-200 ಟಿ.ಸಿ.ಎಫ್. ವ್ಯಾಪ್ತಿಯಲ್ಲಿ ಜೇಡಿ ಪದರ ತೈಲ ಯಾ ಅನಿಲ ಸಂಪನ್ಮೂಲ ಸಾಧ್ಯತೆಯನ್ನು ಪ್ರಾಥಮಿಕ ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ಪಕ್ವ ಸಾವಯವ ಶ್ರೀಮಂತ ಜೇಡಿ ಮಡ್ಡಿ ಶಿಲಾಪದರ ಹೊಂದಿರುವ ಕ್ಯಾಂಬೇ, ಕೃಷ್ಣಾ-ಗೋದಾವರಿ (ಕೆ.ಜಿ.) , ಕಾವೇರಿ ಇತ್ಯಾದಿ ಜಲಾನಯನ ಪ್ರದೇಶಗಳ ಜೇಡಿ ಮಡ್ಡಿ ಶಿಲಾ ಪದರದಲ್ಲಿ ನ್ಯಾಫ್ತಾ ಎಣ್ಣೆ ಯಾ ಅನಿಲ ಇರುವ ಸಾಧ್ಯತೆಯನ್ನು ಊಹಿಸಲಾಗಿದೆ. ಹೊಸ ಅನ್ವೇಷಣಾ ಪರವಾನಗಿ ಪೂರ್ವ ನೀತಿ (ಎನ್.ಇ.ಎಲ್.ಪಿ.) ಅಡಿಯಲ್ಲಿ ಪಿ.ಎಸ್.ಸಿ.ಗಳು ಹೊಂದಿರುವ 72,027 ಚದರ ಕಿಲೋ ಮೀಟರ್ ಪ್ರದೇಶವನ್ನು , ಮತ್ತು 5269 ಸಿ.ಬಿ.ಎಂ ಗುತ್ತಿಗೆ ವ್ಯವಸ್ಥೆ ಅಡಿಯಲ್ಲಿರುವ 5269 ಚದರ ಕಿಲೋ ಮೀಟರ್ ಪ್ರದೇಶವನ್ನು ಏಕಕಾಲದಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಹೈಡ್ರೋಕಾರ್ಬನುಗಳ ಶೋಧನೆ ಮತ್ತು ಗಣಿಗಳ ಬಳಕೆಗೆ ಮುಕ್ತಗೊಳಿಸಲಾಗಿದೆ. ಈ ನೀತಿಯ ಅಂಗೀಕಾರದೊಂದಿಗೆ “ಏಕ ಹೈಡ್ರೋಕಾರ್ಬನ್ ಸಂಪನ್ಮೂಲ ಮಾದರಿ’ ಯಿಂದ ’ಸಮಾನ ಪರವಾನಗಿ ನೀತಿ’ಗೆ ಸಂಪೂರ್ಣವಾಗಿ ಬದಲಾವಣೆಗೊಳ್ಲಲಿದೆ. ಪ್ರಸ್ತುತ ಅದು ಹೈಡ್ರೋಕಾರ್ಬನ್ ಅನ್ವೇಷಣೆ ಮತ್ತು ಪರವಾನಗಿ ನೀತಿ (ಎಚ್.ಇ.ಎಲ್.ಪಿ.) ಮತ್ತು ಶೋಧಿತ ಸಣ್ಣ ಕ್ಷೇತ್ರ (ಡಿ.ಎಸ್.ಎಫ್.) ನೀತಿಗೆ ಅನ್ವಯವಾಗುತ್ತಿದೆ.
ನೀತಿಯ ಹಣಕಾಸು ಮತ್ತು ಗುತ್ತಿಗೆ ಶರತ್ತುಗಳು ಪೆಟ್ರೋಲಿಯಂ ಕಾರ್ಯಾಚರಣೆಗಳು ಮತ್ತು ಪಿ.ಎಸ್.ಸಿ. ಬ್ಲಾಕುಗಳಲ್ಲಿ ಹೊಸ ಹೈಡ್ರೋಕಾರ್ಬನ್ ಗಳ ಅನ್ವೇಷಣೆಗೆ ತಗಲುವ ವೆಚ್ಚ ವಸೂಲು ಮಾಡಲು ಅವಕಾಶ ಇರುವಂತೆ ರೂಪಿಸಲ್ಪಟ್ಟಿವೆ. ಸಿ.ಬಿ.ಎಂ. ಗುತ್ತಿಗೆಯಲ್ಲಾದರೆ ಪೆಟ್ರೋಲಿಯಂ ಯಾ ಉತ್ಪಾದನಾ ಮಟ್ಟದಲ್ಲಿ ಪಾವತಿ (ಪಿ.ಎಲ್.ಪಿ.) ಯಲ್ಲಿ 10 % ದರದಲ್ಲಿ ಹೆಚ್ಚುವರಿ ಲಾಭ, ಪೆಟ್ರೋಲಿಯಂ ಲಾಭ ಯಾ ಪಿ.ಎಲ್.ಪಿ.ಯಲ್ಲಿ ಈಗಿರುವ ದರಕ್ಕಿಂತ ಹೆಚ್ಚಿನದನ್ನು ಹೊಸ ಅನ್ವೇಷಣೆಗಳಾಗಿದ್ದರೆ ಸರಕಾರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಬ್ಲಾಕುಗಳ ನಾಮಕರಣಕ್ಕೆ ಸಂಬಂಧಿಸಿ ಈಗಿರುವ ಹಣಕಾಸು ಮತ್ತು ಅನ್ವೇಷಣಾ ಯಾ ಲೀಸ್ ಪರವಾನಗಿಯ ಗುತ್ತಿಗೆ ಶರತ್ತುಗಳ ಅನ್ವಯ ಅಸಾಂಪ್ರದಾಯಿಕ ಹೈಡ್ರೋ ಕಾರ್ಬನುಗಳ ಅನ್ವೇಷಣೆ ಹಾಗು ಹೊರತೆಗೆಯುವಿಕೆಗೆ ನಿರಾಕ್ಷೇಪಣಾ ಪತ್ರಗಳಿಗೆ ಅವಕಾಶ ನೀಡಲಾಗುವುದು.
-----
(Release ID: 1541348)
Visitor Counter : 221