ಸಂಪುಟ

ಔಷಧ ಉತ್ಪನ್ನಗಳು, ಔಷಧೀಯ ವಸ್ತುಗಳು, ಜೈವಿಕ ಉತ್ಪನ್ನ ಮತ್ತು ಸೌಂದರ್ಯವರ್ಧಕಗಳ ನಿಯಂತ್ರಣ ಕಾರ್ಯಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇಂಡೋನೇಷಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 18 JUL 2018 5:36PM by PIB Bengaluru

ಔಷಧ ಉತ್ಪನ್ನಗಳು, ಔಷಧೀಯ ವಸ್ತುಗಳು, ಜೈವಿಕ ಉತ್ಪನ್ನ ಮತ್ತು ಸೌಂದರ್ಯವರ್ಧಕಗಳ ನಿಯಂತ್ರಣ ಕಾರ್ಯಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇಂಡೋನೇಷಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್.ಸಿ.ಓ.) ಮತ್ತು ಇಂಡೋನೇಷಿಯಾದ ಔಷಧ ಮತ್ತು ಆಹಾರ ನಿಯಂತ್ರಣ ರಾಷ್ಟ್ರೀಯ ಸಂಸ್ಥೆ (ಬಿಪಿಓಎಂ) ನಡುವೆ ಔಷಧ ಉತ್ಪನ್ನಗಳು, ಔಷಧೀಯ ವಸ್ತುಗಳು, ಜೈವಿಕ ಉತ್ಪನ್ನ ಮತ್ತು ಸೌಂದರ್ಯವರ್ಧಕಗಳ ನಿಯಂತ್ರಣ ಕಾರ್ಯಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಮಾಡಿಕೊಳ್ಳಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ಜಕಾರ್ತಾದಲ್ಲಿ 2018ರ ಮೇ 29ರಂದು ಅಂಕಿತ ಹಾಕಲಾಗಿತ್ತು. 

ಈ ಎಂ.ಓ.ಯು. ಪರಸ್ಪರರ ನಿಯಂತ್ರಣ ಅಗತ್ಯಗಳನ್ನು ಉತ್ತಮವಾಗಿ ಅರಿಯಲು ಮೂಡಿಸಲು ನೆರವಾಗುತ್ತದೆ ಮತ್ತು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಭಾರತದ ಔಷಧೀಯ ಉತ್ಪನ್ನಗಳ ರಫ್ತಿಗೂ ಅವಕಾಶ ಕಲ್ಪಿಸುತ್ತದೆ.

ಇದು ಎರಡೂ ದೇಶಗಳ ನಡುವೆ ಸಮಾನತೆ,ಪರಸ್ಪರ ಮತ್ತು ಉಭಯತ್ರರ ಲಾಭದ ಆಧಾರದ ಮೇಲೆ ಔಷಧೀಯ ಉತ್ಪನ್ನಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಫಲಪ್ರದ ಸಹಕಾರ ಮತ್ತು ಮಾಹಿತಿಯ ವಿನಿಮಯಕ್ಕೆ ಚೌಕಟ್ಟು ರೂಪಿಸುತ್ತದೆ. ಜೊತೆಗೆ ಎರಡೂ ದೇಶಗಳ ನಿಯಂತ್ರಣ ಪ್ರಾಧಿಕಾರಗಳ ನಡುವೆ ಉತ್ತಮ ತಿಳಿವಳಿಕೆಗೆ ಇದು ಅವಕಾಶ ಮಾಡಿಕೊಡುತ್ತದೆ. 

ಹಿನ್ನೆಲೆ:

ಸಿಡಿಎಸ್.ಸಿ.ಓ. ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯದ ಅಧೀನ ಕಚೇರಿಯಾದ್ದು, ಅದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಗತ್ತಿಸಲಾದ ಕಚೇರಿ ಹೊಂದಿದೆ ಮತ್ತು ಇದು ಭಾರತದಲ್ಲಿ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ರಾಷ್ಟ್ರೀಯ ನಿಯಂತ್ರಕ ಪ್ರಾಧಿಕಾರವಾಗಿದೆ. ಬಿಪಿಓಎಂ ಇಂಡೋನೇಷಿಯಾದಲ್ಲಿ ಈ ಉತ್ಪನ್ನಗಳ ನಿಯಂತ್ರಣ ಮಾಡುತ್ತದೆ. ಸಿಡಿಎಸ್.ಸಿ.ಓ. (ಇಂಡಿಯಾ) ಮತ್ತು ಬಿಪಿಓಎಂ (ಇಂಡೋನೇಷಿಯಾ) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಭಾರತ ಸರ್ಕಾರದ (ವಾಣಿಜ್ಯ ವಹಿವಾಟು) ಕಾಯಿದೆ 1961ರ ನಿಯಮ 12ರ ಅಡಿಯಲ್ಲಿ ಮಾನ್ಯ ಪ್ರಧಾನಮಂತ್ರಿಯವರ ಅನುಮೋದನೆ ಪಡೆಯಲಾಗಿದೆ.



(Release ID: 1539387) Visitor Counter : 113