ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಜುಲೈ 7, 2018ರಂದು ರಾಜಸ್ತಾನಕ್ಕೆ ಭೇಟಿ

Posted On: 06 JUL 2018 4:04PM by PIB Bengaluru

ಪ್ರಧಾನಮಂತ್ರಿ ಜುಲೈ 7, 2018ರಂದು ರಾಜಸ್ತಾನಕ್ಕೆ ಭೇಟಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜುಲೈ 7, 2018ರಂದು ರಾಜಸ್ತಾನದ ಜೈಪುರಕ್ಕೆ ಭೇಟಿ ನೀಡಲಿದ್ದಾರೆ.

        ಪ್ರಧಾನಿ ಅವರು, ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಾರತ ಸರ್ಕಾರ ಮತ್ತು ರಾಜಸ್ತಾನ ಸರ್ಕಾರದ 12 ಯೋಜನೆಗಳ ಫಲಾನುಭವಿಗಳು ಹಂಚಿಕೊಂಡಿರುವ ಅನುಭವದ ಆಡಿಯೊ-ವಿಡಿಯೊ ದೃಶ್ಯಾವಳಿಯನ್ನು ವೀಕ್ಷಿಸಲಿದ್ದಾರೆ. ರಾಜಸ್ತಾನದ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ
ರಾಜೆ ಈ ಪ್ರಾತ್ಯಕ್ಷಿಕೆಯನ್ನು ನಿರೂಪಿಸಲಿದ್ದಾರೆ.


ಆ ಯೋಜನೆಗಳಲ್ಲಿ ಈ ಕೆಳಗಿನವುಗಳು ಸೇರಿವೆ:

ಪ್ರಧಾನಮಂತ್ರಿ ಉಜ್ವಲ ಯೋಜನೆ
ಪ್ರಧಾನಮಂತ್ರಿ ಮುದ್ರಾ ಯೋಜನೆ
ಪ್ರಧಾನಮಂತ್ರಿ ಆವಾಸ್ ಯೋಜನೆ
ಸ್ಕಿಲ್ ಇಂಡಿಯಾ
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ
ಮುಖ್ಯಮಂತ್ರಿ ರಾಜಶ್ರೀ ಯೋಜನೆ
ಭಾಮಷಾ ಸ್ವಾಸ್ಥ್ಯ ಬಿಮಾ ಯೋಜನೆ
ಮುಖ್ಯಮಂತ್ರಿ ಜಲ ಸ್ವಾವಲಂಬನಾ ಅಭಿಯಾನ
ಶ್ರಮಿಕ ಕಲ್ಯಾಣ ಕಾರ್ಡ್
ಮುಖ್ಯಮಂತ್ರಿ ಫಲನ್ ಹರ್ ಯೋಜನೆ
ಛಾತ್ರಸ್ಕೂಟಿ ವಿತರಣಾ ಯೋಜನೆ
ದೀನ್ ದಯಾಳ್ ಉಪಾಧ್ಯಾಯ ವರಿಷ್ಠ ನಾಗರಿಕ ತೀರ್ಥಯಾತ್ರ ಯೋಜನೆ


        ಇದೇ ವೇಳೆ ಪ್ರಧಾನಮಂತ್ರಿ ಅವರು, ಒಟ್ಟು ಸುಮಾರು 2,100 ಕೋಟಿ ರೂ. ಮೌಲ್ಯದ 13 ನಗರ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವುಗಳಲ್ಲಿ ಪ್ರಮುಖ
ಯೋಜನೆಗಳೆಂದರೆ.

ಗೋಡೆಗಳ ನಗರಿ ಉದಯಪುರದ ಸಮಗ್ರ ಮೂಲಸೌಕರ್ಯ ಪ್ಯಾಕೇಜ್. ಅಜ್ಮೀರ್ ನ ಎತ್ತರಿಸಿದ ರಸ್ತೆ ಯೋಜನೆ.
ಅಜ್ಮೀರ್, ಭಿಲ್ವಾರ, ಬಿಕನೇರ್, ಹನುಮಗಢ, ಸಿಕಾರ್ ಮತ್ತು ಮೌಂಟ್ ಅಬು ಪಟ್ಟಣಗಳ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆ.
ಧೋಲ್ ಪುರ್, ನಾಗೌರ್, ಆಳ್ವಾರ್ ಮತ್ತು ಜೋಧ್ ಪುರ್ ಗಳ ತ್ಯಾಜ್ಯ ಸಂಸ್ಕರಣಾ ಘಟಕಗಳ ಮೇಲ್ದರ್ಜೆ ಯೋಜನೆ.
ಗುಂಡಿ, ಅಜ್ಮೀರ್ ಮತ್ತು ಬಿಕನೇರ್ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) ಯೋಜನೆ ಜಾರಿ.
ಕೋಟಾದಲ್ಲಿ ದಸರಾ ಮೈದಾನ(2ನೇ ಹಂತ) ಅಭಿವೃದ್ಧಿ.


        ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನೂ ಕೂಡ ಉದ್ದೇಶಿಸಿಭಾಷಣ ಮಾಡಲಿದ್ದಾರೆ.



*****************


(Release ID: 1538116) Visitor Counter : 71