ಸಂಪುಟ

ಜಮ್ಮು –ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ರಕ್ಷಣಾ ಇಲಾಖೆಯ 7.118 ಎಕರೆ ಭೂಮಿಯನ್ನು ಕೇಂದ್ರೀಯ ವಿದ್ಯಾಲಯ ಸಂಖ್ಯೆ 2ರ ನಿರ್ಮಾಣಕ್ಕಾಗಿ ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ವರ್ಗಾಯಿಸಲು ಸಂಪುಟದ ಅಂಗೀಕಾರ.

Posted On: 04 JUL 2018 2:40PM by PIB Bengaluru

ಜಮ್ಮು –ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ರಕ್ಷಣಾ ಇಲಾಖೆಯ 7.118 ಎಕರೆ ಭೂಮಿಯನ್ನು ಕೇಂದ್ರೀಯ ವಿದ್ಯಾಲಯ ಸಂಖ್ಯೆ 2ರ ನಿರ್ಮಾಣಕ್ಕಾಗಿ ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ವರ್ಗಾಯಿಸಲು ಸಂಪುಟದ ಅಂಗೀಕಾರ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ರಕ್ಷಣಾ ಇಲಾಖೆಗೆ ಸೇರಿದ 7.118 ಎಕರೆ ಭೂಮಿಯನ್ನು 30 ವರ್ಷಗಳ ಧೀರ್ಘಾವಧಿ ಮತ್ತು 30 ವರ್ಷದ ಎರಡು ಅವಧಿಗಳಿಗೆ ನವೀಕರಿಸಲು ಅವಕಾಶ ಇರುವಂತೆ ಕೇಂದ್ರೀಯ ವಿದ್ಯಾಲಯ ಸಂಘಟನೆಗೆ (ಕೆ.ವಿ.ಎಸ್.) ವರ್ಗಾಯಿಸಲು ನಿರ್ಧರಿಸಿತು. ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿರುವ ಈ ಭೂಮಿಯನ್ನು ಕೇಂದ್ರೀಯ ವಿದ್ಯಾಲಯ 2 ರ ನಿರ್ಮಾಣಕ್ಕೆ ವರ್ಷಕ್ಕೆ 1 ರೂಪಾಯಿ ಸಾಂಕೇತಿಕ ಬಾಡಿಗೆಯೊಂದಿಗೆ ನೀಡಲು ಒಪ್ಪಿಗೆ ನೀಡಲಾಯಿತು.

ಹಿನ್ನೆಲೆ:

ಪ್ರಸ್ತುತ ಕೇಂದ್ರೀಯ ವಿದ್ಯಾಲಯ ಸಂಖ್ಯೆ 2, ಧಾರ್ ರಸ್ತೆ, ಉಧಂಪುರ, ಇದು 1985ರಲ್ಲಿ ಆರಂಭಗೊಂಡಂದಿನಿಂದ ಇಲ್ಲಿಯವರೆಗೂ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಲಿ 851 ವಿದ್ಯಾರ್ಥಿಗಳು ಕೇಂದ್ರೀಯ ವಿದ್ಯಾಲಯ ಸಂಖ್ಯೆ 2, ಧಾರ್ ರಸ್ತೆ, ಉಧಂಪುರ-ಇಲ್ಲಿ ಕಲಿಯುತ್ತಿದ್ದಾರೆ. ಕೆ.ವಿ.ಎಸ್. ನಿಂದ ಶಾಶ್ವತ ಶಾಲಾ ಕಟ್ಟಡ ಕಟ್ಟಲ್ಪಟ್ಟರೆ ಸೇವಾ ನಿರತ ಅಧಿಕಾರಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಆವಶ್ಯಕತೆಗೆ ಅನುಗುಣವಾದ ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ಶಾಲಾ ಅಧಿಕಾರಿಗಳಿಗೆ ಸಾಧ್ಯವಾಗಲಿದೆ. 
 

---------------



(Release ID: 1537974) Visitor Counter : 68