ಸಂಪುಟ

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದಲ್ಲಿ ತಲಾ ಒಂದು ಉಪಾಧ್ಯಕ್ಷ ಮತ್ತು ಸದಸ್ಯ ಹುದ್ದೆ ಸೃಷ್ಟಿಸಲು ಕೇಂದ್ರ ಸಂಪುಟದ ಒಪ್ಪಿಗೆ

Posted On: 04 JUL 2018 2:26PM by PIB Bengaluru

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದಲ್ಲಿ ತಲಾ ಒಂದು ಉಪಾಧ್ಯಕ್ಷ ಮತ್ತು ಸದಸ್ಯ ಹುದ್ದೆ ಸೃಷ್ಟಿಸಲು ಕೇಂದ್ರ ಸಂಪುಟದ ಒಪ್ಪಿಗೆ

 

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದಲ್ಲಿ ತಲಾ ಒಂದು ಉಪಾಧ್ಯಕ್ಷ ಮತ್ತು ಸದಸ್ಯ ಹುದ್ದೆಗಳನ್ನು ಸೃಷ್ಟಿಸಲು ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಒಪ್ಪಿಗೆ ನೀಡಿದೆ.

 

ಆಯೋಗವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗಬೇಕು ಮತ್ತು ಸಫಾಯಿ ಕರ್ಮಚಾರಿಗಳ ಕಲ್ಯಾಣದ ಕನಸು ಈಡೇರಬೇಕು ಎಂಬ ಆಶಯಗಳನ್ನು ಇಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

 

ಹಿನ್ನೆಲೆ: 

 

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗವು ದೇಶಾದ್ಯಂತ ಇರುವ ಸಫಾಯಿ ಕರ್ಮಚಾರಿಗಳ ಮತ್ತು ಸಾಂಪ್ರದಾಯಿಕ ಮಾದರಿಯಲ್ಲಿ ಕೈಯಿಂದ ಮಲ ಎತ್ತುವ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಸಫಾಯಿ ಕರ್ಮಚಾರಿಗಳ ಸಮುದಾಯದಲ್ಲಿ ಅನುಕೂಲಗಳು ಮತ್ತು ಅವಕಾಶಗಳ ದೃಷ್ಟಿಯಿಂದ ಇರುವ ತಾರತಮ್ಯವನ್ನು ಮೂಲೋತ್ಪಾಟನೆ ಮಾಡುವುದು ಆಯೋಗದ ಕಡ್ಡಾಯ ಕರ್ತವ್ಯವಾಗಿದೆ. ಜತೆಗೆ, ದೇಶದಲ್ಲಿರುವ ಸಾಂಪ್ರದಾಯಿಕ ಮಾದರಿಯ ಪೌರಕಾರ್ಮಿಕರಿಗೆ ಒಂದು ಕಾಲಮಿತಿಯೊಳಗೆ ಸಮರ್ಪಕ ಪುನರ್ವಸತಿ ಸೌಲಭ್ಯವನ್ನು ಒದಗಿಸುವುದು ಕೂಡ ಆಯೋಗದ ಹೊಣೆಗಾರಿಕೆಯಾಗಿದೆ. ಇದಕ್ಕಾಗಿ 2013ರ ಸಾಂಪ್ರದಾಯಿಕ ಪೌರಕಾರ್ಮಿಕ ಪದ್ಧತಿಯ ನಿರ್ಮೂಲನೆ ಮತ್ತು ಪುನರ್ವಸತಿ ಕಾಯ್ದೆಯಡಿ ಆಯೋಗವು ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ-

 

(ಅ) ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಗಾ ವಹಿಸುವುದು.

(ಆ) ಕಾಯ್ದೆಯ ನಾನಾ ಅಂಶಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬರುವ ದೂರುಗಳ ವಿಚಾರಣೆ ನಡೆಸುವುದು.

(ಸಿ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಕ್ತ ಸಲಹೆಗಳನ್ನು ನೀಡುವುದು. 



(Release ID: 1537824) Visitor Counter : 101