ಪ್ರಧಾನ ಮಂತ್ರಿಯವರ ಕಛೇರಿ

ಯುವ ಸಂಶೋಧಕರುಮತ್ತುನವೋದ್ಯಮಿಗಳೊಂದಿಗೆಮಾನ್ಯಪ್ರಧಾನಮಂತ್ರಿಗಳವಿಡಿಯೋಸಂವಾದ.

Posted On: 06 JUN 2018 1:00PM by PIB Bengaluru

ಯುವ ಸಂಶೋಧಕರುಮತ್ತುನವೋದ್ಯಮಿಗಳೊಂದಿಗೆಮಾನ್ಯಪ್ರಧಾನಮಂತ್ರಿಗಳವಿಡಿಯೋಸಂವಾದ. 
 

ಮಾನ್ಯ ಪ್ರಧಾನಮಂತ್ರಿಗಳಾದಶ್ರೀ ನರೇಂದ್ರಮೋದಿಯವರು ದೇಶಾದ್ಯಂತದತರುಣ ಸಂಶೋಧಕರುಮತ್ತು ನವೋದ್ಯಮಿಗಳೊಂದಿಗೆವಿಡಿಯೋ ಸಂವಾದನಡೆಸಿದರು. ಕೇಂದ್ರಸರಕಾರದ ನಾನಾಯೋಜನೆಗಳ ಫಲಾನುಭವಿಗಳೊಂದಿಗೆನಡೆಸುತ್ತಿರುವ ವಿಡಿಯೋಸಂವಾದ ಸರಣಿಯನಾಲ್ಕನೆಯ ಕಾರ್ಯಕ್ರಮಇದಾಗಿದೆ.

ಭಾರತದ ಯುವಜನರುಉದ್ಯೋಗದಾತರಾಗುತ್ತಿರುವುದಕ್ಕೆ ಸಂತಸವ್ಯಕ್ತಪಡಿಸಿದ ಮಾನ್ಯಪ್ರಧಾನಮಂತ್ರಿಗಳು, ದೇಶದಜನಸಂಖ್ಯಾ ಸಂಪನ್ಮೂಲವನ್ನುಸರಿಯಾದ ರೀತಿಯಲ್ಲಿಪರಿಪೋಷಿಸಲು ತಮ್ಮಸರಕಾರ ಬದ್ಧವಾಗಿದೆಎಂದರು. ಅಲ್ಲದೆ, ನವೋದ್ಯಮ ವಲಯದಲ್ಲಿಒಳ್ಳೆಯ ಪ್ರಗತಿಯನ್ನುಸಾಧಿಸಲು ಬಂಡವಾಳ, ಧೈರ್ಯ ಮತ್ತುಜನರೊಂದಿಗೆ ಸರಿಯಾದರೀತಿಯ ಸಂಪರ್ಕವನ್ನುಹೊಂದುವುದು ಅತ್ಯಗತ್ಯವಾಗಿವೆಎಂದು ಅವರುನುಡಿದರು.

ಕೆಲವೇ ವರ್ಷಗಳಹಿಂದೆ ನವೋದ್ಯಮಗಳೆಂದರೆ, ಅವು ಕೇವಲಡಿಜಿಟಲ್ ಮತ್ತುತಂತ್ರಜ್ಞಾನವನ್ನು ಕುರಿತಅನ್ವೇಷಣೆ/ಸಂಶೋಧನೆಗೆ ಮಾತ್ರಸಂಬಂಧಿಸಿದ್ದು ಎನ್ನುವಂತಿತ್ತು; ಆದರೆ, ಈಚಹರೆ ಈಗಅಗಾಧವಾಗಿ ಬದಲಾಗಿದೆಎಂದು ಪ್ರಧಾನಮಂತ್ರಿಗಳುಈ ಸಂವಾದದಲ್ಲಿವ್ಯಾಖ್ಯಾನಿಸಿದರು. ಈಗದೇಶದ 28 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳುಮತ್ತು 419 ಜಿಲ್ಲೆಗಳಲ್ಲಿನವೋದ್ಯಮಗಳು ಅಸ್ತಿತ್ವದಲ್ಲಿವೆ. ಇವುಗಳ ಪೈಕಿಶೇಕಡ 44ರಷ್ಟುನವೋದ್ಯಮಗಳು 2 ಮತ್ತು 2ನೇ ಸ್ತರದನಗರಗಳಲ್ಲೇ ನೋಂದಣಿಯಾಗಿವೆ. ಕೇಂದ್ರ ಸರಕಾರದ `ಸ್ಟಾರ್ಟಪ್ ಇಂಡಿಯಾ’ ಯೋಜನೆಯಡಿ ಸ್ಥಳೀಯಮಟ್ಟದಲ್ಲಿ ಸಂಶೋಧನೆಯನ್ನುಉತ್ತೇಜಿಸುತ್ತಿರುವುದೇ ಇದಕ್ಕೆಕಾರಣ. ಒಟ್ಟಾರೆನವೋದ್ಯಮಗಳಲ್ಲಿ, ಶೇಕಡ 45ರಷ್ಟನ್ನು ಮಹಿಳೆಯರೇಆರಂಭಿಸಿದ್ದಾರೆ ಎಂದುಮಾನ್ಯ ಪ್ರಧಾನಮಂತ್ರಿಗಳುವಿವರಿಸಿದರು.

ಶ್ರೀ ನರೇಂದ್ರಮೋದಿಯವರು ಈವಿಡಿಯೋ ಸಂವಾದದಲ್ಲಿ, ತಮ್ಮ ಸರಕಾರಅಸ್ತಿತ್ವಕ್ಕೆ ಬಂದಮೇಲೆಪೇಟೆಂಟುಗಳಿಗೆ ಮತ್ತುಟ್ರೇಡ್ ಮಾರ್ಕ್‍ಗಳ ಹಕ್ಕುಸ್ವಾಮ್ಯಪಡೆಯಲು ಅರ್ಜಿಸಲ್ಲಿಸಬೇಕಾದ ವಿಧಿವಿಧಾನಗಳನ್ನುಎಷ್ಟೊಂದು ಸರಳಗೊಳಿಸಲಾಗಿದೆಎನ್ನುವುದನ್ನು ವಿವರಿಸಿದರು. ಅಂದರೆ, ಹಿಂದೆಲ್ಲಪೇಟೆಂಟ್ ಮತ್ತುಟ್ರೇಡ್‍ ಮಾರ್ಕ್‍ಗಳ ನೋಂದಣಿ/ಹಕ್ಕುಸ್ವಾಮ್ಯಕ್ಕೆ 74 ಅರ್ಜಿಗಳನ್ನುತುಂಬಬೇಕಾಗಿತ್ತು; ಇವುಗಳಸಂಖ್ಯೆಯನ್ನು ಈಗಕೇವಲ ಎಂಟಕ್ಕೆಇಳಿಸಲಾಗಿದೆ. ಇದರಪರಿಣಾಮವಾಗಿ, ಕೇವಲಕಳೆದ ಮೂರುವರ್ಷಗಳಲ್ಲಿ ಟ್ರೇಡ್‍ ಮಾರ್ಕ್‍ಗಳ ನೋಂದಣಿಕೋರಿ ಬರುತ್ತಿರುವಅರ್ಜಿಗಳ ಸಂಖ್ಯೆಯುಮೂರು ಪಟ್ಟುಹೆಚ್ಚಾಗಿದೆ. ಹಾಗೆಯೇ, ಹಿಂದಿನ ಸರಕಾರದಅವಧಿಗೆ ಹೋಲಿಸಿದರೆ, ಪೇಟೆಂಟ್‍ ನೋಂದಣಿಗಾಗಿ ಬರುತ್ತಿರುವಅರ್ಜಿಗಳ ಸಂಖ್ಯೆಯೂಮೂರು ಪಟ್ಟುಹೆಚ್ಚಾಗಿದೆ ಎಂದುಅವರು ಹೇಳಿದರು.

ಯುವ ಉದ್ಯಮಿಗಳೊಂದಿಗಿನಸಂವಾದದಲ್ಲಿ ಮಾನ್ಯಪ್ರಧಾನಮಂತ್ರಿಗಳು ತಮ್ಮಸರಕಾರದ ಉಪಕ್ರಮಗಳನ್ನುವಿವರಿಸುತ್ತ, ``ಸ್ಟಾರ್ಟಪ್‍ಗಳನ್ನು ಸ್ಥಾಪಿಸಲುಮುಂದಾಗುವ ಯುವಉದ್ಯಮಿಗಳಿಗೆ ಮತ್ತುಯುವ ಸಂಶೋಧಕರಿಗೆಯಾವುದೇ ಸಂದರ್ಭದಲ್ಲೂಬಂಡವಾಳದ ಕೊರತೆಎದುರಾಗಬಾರದೆಂಬ ಕಾರಣಕ್ಕಾಗಿ 10,000 ಕೋಟಿ ರೂ.ಗಳ ಒಂದು `ನಿಧಿಗಳ ನಿಧಿ’ (ಫಂಡ್ ಆಫ್ಫಂಡ್ಸ್)ಯನ್ನು ಸ್ಥಾಪಿಸಲಾಗಿದೆ. ಈ ನಿಧಿಯಮೂಲಕ ಇದುವರೆಗೆ 1,285 ಕೋಟಿ ರೂ.ಗಳನ್ನು ಈಗಾಗಲೇಅರ್ಹರಿಗೆ ಒದಗಿಸಲಾಗಿದ್ದು, ಇದುವರೆಗೆ ಒಟ್ಟು 6,980 ಕೋಟಿ ರೂ.ಗಳನ್ನು ಇದಕ್ಕೆನೀಡಲಾಗಿದೆ,’’ ಎಂದುನುಡಿದರು.

ದೇಶದ ಸ್ಟಾರ್ಟಪ್ವಲಯವನ್ನು ಶಕ್ತಿಯುತಗೊಳಿಸಲುಸರಕಾರವು ಕೈಗೊಂಡಿರುವಕ್ರಮಗಳನ್ನು ವಿಸ್ತೃತವಾಗಿವಿವರಿಸಿದ ಪ್ರಧಾನಮಂತ್ರಿಗಳು, ಇದರ ಅಂಗವಾಗಿಸರಕಾರಿ ಇ-ಮಾರುಕಟ್ಟೆ (ಜಿಇಎಂ)ಯನ್ನು `ಸ್ಟಾರ್ಟಪ್ಇಂಡಿಯಾ’ ಯೋಜನೆಯಜತೆ ಬೆಸೆಯಲಾಗಿದೆ. ಇದರಿಂದಾಗಿ ನವೋದ್ಯಮಿಗಳುತಮ್ಮ ಉತ್ಪನ್ನಗಳನ್ನುಸರಕಾರಕ್ಕೇ ಮಾರಾಟಮಾಡಬಹುದು. ಅಲ್ಲದೆ, ನವೋದ್ಯಮಗಳಿಗೆ ಮೂರುವರ್ಷಗಳ ಮಟ್ಟಿಗೆಸಂಪೂರ್ಣ ತೆರಿಗೆವಿನಾಯಿತಿ ನೀಡಲಾಗುತ್ತಿದೆ. ಯುವ ಉದ್ಯಮಿಗಳುಸ್ವಯಂ ಪ್ರಮಾಣಪತ್ರವನ್ನುಒದಗಿಸಲು ನೆರವುನೀಡುವಂತೆ ಆರುಕಾರ್ಮಿಕ ಕಾನೂನುಗಳನ್ನುಮತ್ತು ಪರಿಸರಕ್ಕೆಸಂಬಂಧಿಸಿದ ಮೂರುನಿಯಮಗಳನ್ನು ಬದಲಿಸಲಾಗಿದೆ. ಇವುಗಳ ಜೊತೆಗೆನವೋದ್ಯಮಗಳಿಗೆ ಸಂಬಂಧಿಸಿದ ಸಮಸ್ತಮಾಹಿತಿಯೂ ಒಂದೇಕಡೆ ದೊರೆಯುವಂತಹಸ್ಟಾರ್ಟಪ್ ಇಂಡಿಯಾಹಬ್ ಅನ್ನುರೂಪಿಸಲಾಗಿದೆ,’’ ಎಂದರು.

ಹಾಗೆಯೇ, ಯುವಜನರಲ್ಲಿಸಂಶೋಧನೆ ಕುರಿತುಆಸಕ್ತಿಯನ್ನು ಬೆಳೆಸಲುಮತ್ತು ಸ್ಪರ್ಧಾತ್ಮಕತೆಯನ್ನುಹೆಚ್ಚಿಸಲು ಕೇಂದ್ರಸರಕಾರವು `ಅಟಲ್ನ್ಯೂ ಇಂಡಿಯಾಚಾಲೆಂಜ್’, `ಸ್ಮಾರ್ಟ್ಇಂಡಿಯಾ ಹ್ಯಾಕಥಾನ್’ ಮತ್ತು `ಅಗ್ರಿಕಲ್ಚರ್ಗ್ರ್ಯಾಂಡ್ ಚಾಲೆಂಜ್’ನಂತಹ ಹಲವುಕಾರ್ಯಕ್ರಮಗಳನ್ನು ಆರಂಭಿಸಿದೆ. ಮಿಗಿಲಾಗಿ, ಭಾರತಮತ್ತು ಸಿಂಗಪುರಗಳಸಂಶೋಧಕರ ನಡುವೆ `ಸ್ಮಾರ್ಟ್ ಇಂಡಿಯಾಹ್ಯಾಕಥಾನ್’ನಂತಹ ಸ್ಪರ್ಧೆಯನ್ನುಏರ್ಪಡಿಸುವ ಕುರಿತುತಾವು ಇತ್ತೀಚೆಗೆಸಿಂಗಪುರದ ಪ್ರಧಾನಮಂತ್ರಿಗಳೊದಿಗೆಮಾತುಕತೆ ನಡೆಸಿರುವುದಾಗಿಶ್ರೀ ನರೇಂದ್ರಮೋದಿಯವರು ಈಸಂವಾದದ ಸಂದರ್ಭದಲ್ಲಿತಿಳಿಸಿದರು.

ಯುವಜನರು ಸಂಶೋಧನೆಯನ್ನುಕೈಗೆತ್ತಿಕೊಳ್ಳುವುದು ಸಾಧ್ಯವಾಗಬೇಕೆಂಬಆಶಯದಿಂದ ಕೇಂದ್ರಸರಕಾರವು ದೇಶದೆಲ್ಲೆಡೆ 8 ಸಂಶೋಧನಾ ಪಾರ್ಕ್‍ಗಳನ್ನು ಮತ್ತು 2,500 ಅಟಲ್ ಟಿಂಕರಿಂಗ್ಲ್ಯಾಬ್‍ಗಳನ್ನು ಸ್ಥಾಪಿಸಲಾಗುತ್ತಿದೆಎಂದು ಪ್ರಧಾನಮಂತ್ರಿಗಳುಮಾಹಿತಿ ನೀಡಿದರು.

ಅಲ್ಲದೆ, ದೇಶದಕೃಷಿ ವಲಯವನ್ನುಪರಿವರ್ತಿಸಲು ಅಗತ್ಯವಾದಚಿಂತನೆಗಳನ್ನು ತಮಗೆನೀಡುವಂತೆ ಮಾನ್ಯಪ್ರಧಾನಮಂತ್ರಿಗಳು ಯುವಸಂಶೋಧಕರಿಗೆಆಹ್ವಾನವಿತ್ತರು. ಹಾಗೆಯೇ `ಮೇಕ್ ಇನ್ಇಂಡಿಯಾ’ ಯೋಜನೆಯಜತೆಜತೆಗೇ `ಡಿಝೈನ್ಇನ್ ಇಂಡಿಯಾ’ ಕೂಡ ಅಗತ್ಯವಿದೆಎಂದ ಅವರು, ಯುವಜನರು `ಸಂಶೋಧಿಸಿ, ಇಲ್ಲವೇ ಸ್ಥಗಿತಗೊಳ್ಳಿ’ (ಇನ್ನೋವೇಟ್ ಆರ್ಸ್ಟ್ಯಾಗ್ನೇಟ್) ಎನ್ನುವಮಂತ್ರದೊಂದಿಗೆ ಸಂಶೋಧನಾಚಟುವಟಿಕೆಗಳನ್ನು ಮುಂದುವರಿಸಬೇಕೆಂದುಉತ್ತೇಜನದ ಮಾತುಗಳನ್ನಾಡಿದರು.

`ಸ್ಟಾರ್ಟಪ್ ಇಂಡಿಯಾ’ ಯೋನಜನೆಯಡಿ ಹೊಸನವೋದ್ಯಮಗಳನ್ನು ಸ್ಥಾಪಿಸಲುಕೇಂದ್ರ ಸರಕಾರದಹಲವು ಯೋಜನೆಗಳುಎಷ್ಟೊಂದು ಉಪಯುಕ್ತವಾಗಿವೆಎನ್ನುವುದನ್ನು ಅವರುಇದೇ ಸಂದರ್ಭದಲ್ಲಿವಿವರಿಸಿದರು. ಜತೆಗೆ, ಉದ್ಯಮಿಗಳು ಮತ್ತುಸಂಶೋಧಕರು ಕೂಡತಾವು ಕೃಷಿವಲಯದಿಂದ ಹಿಡಿದುಬ್ಲಾಕ್‍ಚೈನ್ ಟೆಕ್ನಾಲಜಿಯವರೆಗೆನಾನಾ ಕ್ಷೇತ್ರಗಳಿಗೆಸಂಬಂಧಿಸಿದಂತೆ ಕೈಗೊಂಡಿರುವಸಂಶೋಧನಾ ಚಟುವಟಿಕೆಗಳನ್ನುಕುರಿತು ಮಾನ್ಯಪ್ರಧಾನಮಂತ್ರಿಗಳಿಗೆ ವಿವರಿಸಿದರು. ದೇಶದ ನಾನಾ `ಅಟಲ್ ಟಿಂಕರಿಂಗ್ಲ್ಯಾಬ್‍’ಗಳಲ್ಲಿನ ವಿದ್ಯಾರ್ಥಿಗಳುಕೂಡ ತಮ್ಮಸಂಶೋಧನಾ ಚಟುವಟಿಕೆಗಳಬಗ್ಗೆ ಶ್ರೀನರೇಂದ್ರ ಮೋದಿಯವರೊಂದಿಗೆತಮ್ಮ ಅನುಭವಗಳನ್ನುಹಂಚಿಕೊಂಡರು. ವಿದ್ಯಾರ್ಥಿಗಳಲ್ಲಿನಈ ವೈಜ್ಞಾನಿಕಕೌಶಲ್ಯಕ್ಕೆ ಶಹಭಾಷ್‍ಗಿರಿ ಕೊಟ್ಟಮಾನ್ಯ ಪ್ರಧಾನಮಂತ್ರಿಗಳು, ಇಂತಹ ಇನ್ನಷ್ಟುಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವಂತೆಹುರಿದುಂಬಿಸಿದರು.

`ಇನ್ನೋವೇಟ್ ಇಂಡಿಯಾ’ ಕಾರ್ಯಕ್ರಮವನ್ನು ಒಂದುದೊಡ್ಡ ಸಾಮೂಹಿಕಆಂದೋಲನವನ್ನಾಗಿ ಮಾಡಬೇಕುಎಂದು ಕರೆಕೊಟ್ಟ ಪ್ರಧಾನಮಂತ್ರಿಗಳು, ದೇಶದ ನಾಗರಿಕರುತಮ್ಮಲ್ಲಿ ಮೂಡಿಬರುವಹೊಸಹೊಸ ಆಲೋಚನೆಗಳನ್ನು/ಚಿಂತನೆಗಳನ್ನು #InnovateIndia ಹ್ಯಾಶ್‍ಟ್ಯಾಗ್ ಮೂಲಕಹಂಚಿಕೊಳ್ಳುವಂತೆ ಹೇಳಿದರು.



(Release ID: 1535152) Visitor Counter : 51