ಸಂಪುಟ

ನಷ್ಟ / ಸಂಕಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಕಾಲಮಿತಿಯಲ್ಲಿ ಮುಚ್ಚುವ ಮತ್ತು ಅವುಗಳ ಸ್ಥಿರ ಮತ್ತು ಚರಾಸ್ಥಿ ವಿಲೇವಾರಿ ಮಾಡುವ ಪರಿಷ್ಕೃತ ಮಾರ್ಗಸೂಚಿಗೆ ಕೇಂದ್ರ ಸಂಪುಟ ಅನುಮೋದನೆ

Posted On: 06 JUN 2018 3:13PM by PIB Bengaluru

ನಷ್ಟ / ಸಂಕಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಕಾಲಮಿತಿಯಲ್ಲಿ ಮುಚ್ಚುವ ಮತ್ತು ಅವುಗಳ ಸ್ಥಿರ ಮತ್ತು ಚರಾಸ್ಥಿ ವಿಲೇವಾರಿ ಮಾಡುವ ಪರಿಷ್ಕೃತ ಮಾರ್ಗಸೂಚಿಗೆ ಕೇಂದ್ರ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆಗೆ ಸೇರಿದ ನಷ್ಟ / ಸಂಕಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಕಾಲಮಿತಿಯಲ್ಲಿ ಮುಚ್ಚುವ ಮತ್ತು ಅವುಗಳ ಸ್ಥಿರ ಮತ್ತು ಚರಾಸ್ಥಿ ವಿಲೇವಾರಿ ಮಾಡುವ ಪರಿಷ್ಕೃತ ಮಾರ್ಗಸೂಚಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿತು. ಈ ಪರಿಷ್ಕೃತ ಮಾರ್ಗಸೂಚಿಯಿಂದಾಗಿ ನಷ್ಟ ಮತ್ತು ಸಂಕಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮುಚ್ಚುವ ಯೋಜನೆ ಅನುಷ್ಠಾನದಲ್ಲಿನ ವಿಳಂಬ ತಗ್ಗಲಿದೆ. ಈ ಪರಿಷ್ಕೃತ ಮಾರ್ಗಸೂಚಿ ಹಿಂದೆ 2016ರ ಸೆಪ್ಟೆಂಬರ್ ನಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆ ಹೊರಡಿಸಿದ್ದ ಮಾರ್ಗಸೂಚಿಗಳ ಬದಲಿಗೆ ಜಾರಿಗೆ ಬರಲಿದೆ.

ಈ ಹೊಸ ಮಾರ್ಗಸೂಚಿ ಅನ್ವಯ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ವಿಸ್ತೃತ ಚೌಕಟ್ಟನ್ನು ಹಾಕಿಕೊಡುವುದಲ್ಲದೆ, ಆ ಪ್ರಕ್ರಿಯೆಗೆ ನಿಗದಿತ ಕಾಲಮಿತಿ ಒದಗಿಸುವುದರ ಜತೆಗೆ ಸಂಬಂಧಿಸಿದ ಸಚಿವಾಲಯಗಳು, ಇಲಾಖೆಗಳು ಮತ್ತು ಸಿಪಿಎಸ್ಇಗಳಿಗೆ ಹೊಣೆಗಾರಿಕೆ ನೀಡಲಾಗುವುದು. ಮಾರ್ಗಸೂಚಿ ಅನ್ವಯ ಸಚಿವಾಲಯ, ಇಲಾಖೆ ಅಥವಾ ಸಿಪಿಎಸ್ಇಗಳು ಪೂರ್ವಭಾವಿ ಕ್ರಮಗಳನ್ನು ಅಂದರೆ ಮುಚ್ಚುವ ಪ್ರಸ್ತಾವಕ್ಕೆ ತಯಾರಿ, ಸಾಂಸ್ಥಿಕ ಮತ್ತು ಇತರೆ ಹೊಣೆಗಾರಿಕೆಗಳ ಇತ್ಯರ್ಥ ಮತ್ತು ಕಾಲಮಿತಿಯಲ್ಲಿ ಸಿಪಿಎಸ್ಇಗಳ ಸ್ಥಿರ ಮತ್ತು ಚರಾಸ್ಥಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಗಳನ್ನು ಕೈಗೊಳ್ಳಬಹುದಾಗಿದೆ. 

ಮಾರ್ಗಸೂಚಿ ಅನ್ವಯ ಸಿಪಿಎಸ್ಇಗಳು ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಕೈಗೆಟಕುವ ದರದಲ್ಲಿ ವಸತಿ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಿಪಿಎಸ್ಇಗಳ ಭೂಮಿ ಬಳಕೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಈ ಸಿಪಿಎಸ್ಇಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಂಸ್ಥೆಗಳನ್ನು ಮುಚ್ಚುವುದರಿಂದ ತೊಂದರೆಯಾಗಬಾರದು ಎಂದು ಸರ್ಕಾರ ನಿರ್ಧರಿಸಿರುವುದರಿಂದ ಯಾವ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅಂತಹರಿಗೆ 2007ರ ರಾಷ್ಟ್ರೀಯ ವೇತನಶ್ರೇಣಿಯಂತೆ ಎಲ್ಲ ಸಿಬ್ಬಂದಿಗೂ ಏಕರೂಪದ ಸ್ವಯಂ ನಿವೃತ್ತಿ ಯೋಜನೆ(ವಿಆರ್ಎಸ್) ಸೌಲಭ್ಯ ಕಲ್ಪಿಸುವುದು.

ಈ ಮಾರ್ಗಸೂಚಿಗಳು ಎಲ್ಲ ಸಂಕಷ್ಟ ಮತ್ತು ನಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಅನ್ವಯವಾಗುತ್ತದೆ. ಅವೆಂದರೆ 

· ಸಂಪುಟ / ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ / ಸಂಬಂಧಿಸಿದ ಸಚಿವಾಲಯಗಳಿಂದ ಸಂಸ್ಥೆಗಳನ್ನು ಮುಚ್ಚಲು ಅನುಮೋದನೆ ಅಥವಾ ತಾತ್ವಿಕ ಅನುಮೋದನೆ ಪಡೆದಿರಬೇಕು.

· ಸಚಿವಾಲಯ ಅಥವಾ ಇಲಾಖೆ ಸಿಪಿಎಸ್ಇ ಕಂಪನಿಯನ್ನು ಮುಚ್ಚಲು ಆಡಳಿತಾತ್ಮಕ ಅನುಮೋದನೆ ನೀಡಿದ ನಂತರ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿರುವ ಸಂಸ್ಥೆಗಳು. 

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ನಿರ್ವಹಣೆ ಮಾಡುತ್ತಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಕೈಗಟಕುವ ದರದಲ್ಲಿ ವಸತಿ ಯೋಜನೆ ಅನುಷ್ಠಾನಕ್ಕೆ ಮುಚ್ಚಲು ನಿರ್ಧರಿಸಿರುವ ಸಂಕಷ್ಟ ಮತ್ತು ನಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳ ಲಭ್ಯವಿರುವ ಭೂಮಿಯನ್ನು ಬಳಸಿಕೊಳ್ಳಲು ಆದ್ಯತೆ ನೀಡಬೇಕಾಗಿದೆ.
 

***



(Release ID: 1535146) Visitor Counter : 85