ಸಂಪುಟ
ಚುನಾವಣೆ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಸುರಿನಾಮ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
प्रविष्टि तिथि:
16 MAY 2018 3:45PM by PIB Bengaluru
ಚುನಾವಣೆ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಸುರಿನಾಮ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಚುನಾವಣೆ ಪ್ರಕ್ರಿಯೆಯ ಸಾಂಸ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿಗಾಗಿ ಜ್ಞಾನ ಮತ್ತು ಅನುಭವದ ವಿನಿಮಯ; ಮಾಹಿತಿ ವಿನಿಮಯಕ್ಕೆ ಬೆಂಬಲ, ಸಾಂಸ್ಥಿಕ ಸಬಲೀಕರಣ ಮತ್ತು ಸಾಮರ್ಥ್ಯ ವರ್ಧನೆ, ಸಿಬ್ಬಂದಿಯ ತರಬೇತಿ, ನಿಯಮಿತ ಸಮಾಲೋಚನೆ ನಡೆಸುವುದು ಇತ್ಯಾದಿ ಸೇರಿದಂತೆ ಚುನಾವಣಾ ನಿರ್ವಹಣೆ ಮತ್ತು ಆಡಳಿತಕ್ಷೇತ್ರದ ಸಹಕಾರಕ್ಕಾಗಿ ಭಾರತ ಮತ್ತು ಸುರಿನಾಮ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಸುರಿನಾಮ್ ನೊಂದಿಗೆ ಚುನಾವಣೆ ಆಡಳಿತ ಮತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಾಂತ್ರಿಕ ನೆರವು/ಸಾಮರ್ಥ್ಯ ವರ್ಧನೆಯ ಗುರಿಯೊಂದಿಗೆ ದ್ವಿಪಕ್ಷೀಯ ಸಹಕಾರ ಉತ್ತೇಜಿಸುತ್ತದೆ.
(रिलीज़ आईडी: 1532370)
आगंतुक पटल : 110