ಸಂಪುಟ
ಆರೋಗ್ಯ ರಕ್ಷಣೆ, ಮೂಲಸೌಕರ್ಯಕ್ಕೆ ಉತ್ತೇಜನ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯನ್ನು 2019-20ರ ವೆರೆಗೆ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ
Posted On:
02 MAY 2018 3:31PM by PIB Bengaluru
ಆರೋಗ್ಯ ರಕ್ಷಣೆ, ಮೂಲಸೌಕರ್ಯಕ್ಕೆ ಉತ್ತೇಜನ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯನ್ನು 2019-20ರ ವೆರೆಗೆ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ
ದೇಶದಲ್ಲಿ ಆರೋಗ್ಯ ರಕ್ಷಣೆ, ಮೂಲಸೌಕರ್ಯ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ(ಪಿ ಎಂ ಎಸ್ ಎಸ್ ವೈ)ಅನ್ನು 12ನೇ ಪಂಚವಾರ್ಷಿಕ ಯೋಜನೆ ಮುಗಿದ ನಂತರವೂ ಅಂದರೆ 2019-20ರ ವರೆಗೆ ಮುಂದುವರಿಸಲು ಅನುಮೋದಿಸಲಾಯಿತು. ಈ ಉದ್ದೇಶಕ್ಕಾಗಿ 14,832ಕೋಟಿ ರೂಪಾಯಿ ಆರ್ಥಿಕ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಡಿ ಹೊಸದಾಗಿ ಅಖಿಲ ಭಾರತ ವೈದ್ಯಕೀಯ ಸಂಸ್ಥೆಗಳ - ಏಮ್ಸ್ ಸ್ಥಾಪನೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುವುದು.
ಧ್ಯೇಯೋದ್ದೇಶ:
ಪಿ ಎಂ ಎಸ್ ಎಸ್ ವೈ ಕೇಂದ್ರದ ಪ್ರಾಯೋಜಿತ ಕಾರ್ಯಕ್ರಮ. ಇದರಡಿ ವಿಶೇಷವಾಗಿ ಹಿಂದುಳಿದ ರಾಜ್ಯಗಳಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡಲು ಮೂಲಸೌಕರ್ಯವನ್ನು ವೃದ್ಧಿಸುವುದು ಹಾಗೂ ಸಾರ್ವತ್ರಿಕವಾಗಿ ದೇಶದಾದ್ಯಂತ ನಾನಾ ಭಾಗಗಳಲ್ಲಿ ಸಿಗುತ್ತಿರುವ ಆರೋಗ್ಯ ರಕ್ಷಣಾ ಸೇವೆಗಳಲ್ಲಿನ ಅಸಮತೋಲನವನ್ನು ನಿವಾರಿಸಿ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ಗುರಿ ಹೊಂದಲಾಗಿದೆ.
ಪರಿಣಾಮ:
ಹೊಸದಾಗಿ ಏಮ್ಸ್ ಗಳನ್ನು ಸ್ಥಾಪಿಸುವುದರಿಂದ ಕೇವಲ ಆರೋಗ್ಯ ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯಲ್ಲಿ ಬದಲಾವಣೆಯಾಗುವುದಲ್ಲದೆ, ಆ ಪ್ರದೇಶದಲ್ಲಿ ಆರೋಗ್ಯ ರಕ್ಷಣಾ ವೃತ್ತಿಪರರ ಕೊರತೆ ಎದುರಾಗದು. ಹೊಸ ಏಮ್ಸ್ ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣ ಆರ್ಥಿಕ ನೆರವು ಒದಗಿಸಲಿದೆ. ಹೊಸ ಏಮ್ಸ್ ಗಳ ಕಾರ್ಯನಿರ್ವಹಣೆ ಮತ್ತು ವೆಚ್ಚವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ.
ಮೇಲ್ದರ್ಜೆಗೇರಿಸುವ ಕಾರ್ಯಕ್ರಮದಲ್ಲಿ ಆರೋಗ್ಯ ಮೂಲಸೌಕರ್ಯ ಸುಧಾರಿಸುವುದಕ್ಕೆ ಅಂದರೆ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಗಳ ನಿರ್ಮಾಣ, ಟ್ರಾಮಾ ಕೇಂದ್ರಗಳ ಆರಂಭ ಮತ್ತಿತರ ಕೆಲಸಗಳಿಗೆ ಒತ್ತು ನೀಡಲಾಗುವುದು ಹಾಗೂ ಕೇಂದ್ರ ಮತ್ತು ರಾಜ್ಯಗಳು ಹಂಚಿಕೆಯೊಂದಿಗೆ ಹೊಸದಾಗಿ ವೈದ್ಯಕೀಯ ಉಪಕರಣಗಳ ಖರೀದಿಗೂ ಅವಕಾಶವಿದೆ.
ಉದ್ಯೋಗ ಸೃಷ್ಟಿ:
ನಾನಾ ರಾಜ್ಯಗಳಲ್ಲಿ ಹೊಸ ಏಮ್ಸ್ ಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರತಿಯೊಂದು ಏಮ್ಸ್ ಗಳ ಸ್ಥಾಪನೆಯಿಂದ ಹಲವು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಸೇರಿ ಸುಮಾರು ಮೂರು ಸಾವಿರ ಮಂದಿಗೆ ಉದ್ಯೋಗ ಲಭಿಸುತ್ತದೆ. ಇದಲ್ಲದೆ ಏಮ್ಸ್ ಸುತ್ತಮುತ್ತ ಶಾಪಿಂಗ್ ಸೆಂಟರ್, ಕ್ಯಾಂಟೀನ್ ಮತ್ತಿತರ ಅನುಕೂಲಗಳು ಮತ್ತು ಸೇವೆಗಳನ್ನು ಒದಗಿಸುವ ಕಾರ್ಯದಲ್ಲಿ ಪರೋಕ್ಷವಾಗಿಯೂ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ.
ಆಯ್ದ ಸರ್ಕಾರಿ ವೈದ್ಯಕೀಯ ಕಾಲೇಜುಗಳು(ಜಿಎಂಸಿ)ಗಳಲ್ಲಿ ಕೈಗೊಳ್ಳಲಿರುವ ಮೇಲ್ದರ್ಜೆ ಕಾರ್ಯಗಳನ್ನು ಭಾರತ ಸರ್ಕಾರ ನೇಮಿಸಿದ ಸಂಸ್ಥೆಗಳು ಕೈಗೆತ್ತಿಕೊಳ್ಳಲಿದ್ದು, ಅವುಗಳ ನೇರ ಉಸ್ತುವಾರಿಯನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜಿಎಂಸಿಗಳಲ್ಲಿ ನಿಯಮಗಳ ಪ್ರಕಾರ ಹೆಚ್ಚುವರಿ ಸ್ನಾತಕೋತ್ತರ ಸೀಟುಗಳು ಮತ್ತು ಹೆಚ್ಚುವರಿ ಬೋಧಕ ಹುದ್ದೆಗಳನ್ನು ಸೃಷ್ಟಿಮಾಡಿ, ಅವುಗಳನ್ನು ಭರ್ತಿಮಾಡಲಾಗುವುದು.
ಈ ಯೋಜನೆಯಡಿ ಹೊಸದಾಗಿ ನಿರ್ಮಿಸುವ ಏಮ್ಸ್ ಗಳಲ್ಲಿ ಭೌತಿಕ ಮೂಲಸೌಕರ್ಯ ಸೃಷ್ಟಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೇಲ್ದರ್ಜೆ ಯೋಜನೆಯಲ್ಲೂ ಸಾಕಷ್ಟು ಉದ್ಯೋಗಾವಕಾಶಗಳು ನಿರ್ಮಾಣ ಹಂತದಲ್ಲಿ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಹಿನ್ನೆಲೆ:
ಈ ಪಿ ಎಂ ಎಸ್ ಎಸ್ ವೈ ಯೋಜನೆಯನ್ನು 2003ರಲ್ಲಿ ಪ್ರಕಟಿಸಲಾಯಿತು. ದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡಲು ಅಗತ್ಯ ಸೌಕರ್ಯಗಳನ್ನು ಸೃಷ್ಟಿಸುವುದು ಮತ್ತು ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಜನರಿಗೆ ಕೈಗೆಟಕುವ ದರದಲ್ಲಿ ವಿಶ್ವಾಸಾರ್ಹ ಆರೋಗ್ಯ ರಕ್ಷಣಾ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿತ್ತು. ಪಿ ಎಂ ಎಸ್ ಎಸ್ ವೈ ಅಡಿ ಎರಡು ಕೆಲಸ ಕೈಗೆತ್ತಿಕೊಳ್ಳಲಾಗುವುದು ಅವುಗಳೆಂದರೆ
1. ಏಮ್ಸ್ ನಂತಹ ಸಂಸ್ಥೆಗಳ ಸ್ಥಾಪನೆ ಮತ್ತು
2. ಹಾಲಿ ಇರುವ ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳ(ಜಿಎಂಸಿಎಸ್)ಗಳ ಮೇಲ್ದರ್ಜೆಗೇರಿಸುವುದು
ಪಿ ಎಂ ಎಸ್ ಎಸ್ ವೈ ಅಡಿ ಕೈಗೊಂಡಿರುವ ಯೋಜನೆಗಳು
ಪಿ ಎಂ ಎಸ್ ಎಸ್ ವೈ ಯೋಜನೆಯಡಿ ನಾನಾ ಹಂತಗಳಲ್ಲಿ ಕೈಗೊಂಡಿರುವ ಹಲವು ಯೋಜನೆಗಳು ಈ ಕೆಳಗಿನಂತಿವೆ
ಹಂತ ಮತ್ತು ಬಜೆಟ್ ನಲ್ಲಿ ಘೋಷಣೆಯಾದ ವರ್ಷ
|
ಎಎಚ್ಎಂಎಸ್ ನಂತಹ ಸಂಸ್ಥೆಗಳು
|
ರಾಜ್ಯ ಸರ್ಕಾರಿ ವೈದ್ಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವುದು
|
ಹಂತ -1(2006)
|
ಭೂಪಾಲ್, ಭುವನೇಶ್ವರ್, ಜೋಧ್ ಪುರ್,ಪಾಟ್ನಾ, ರಾಯ್ ಪುರ್, ಋಷಿಕೇಶ್(ಆರು ಏಮ್ಸ್ ಗಳು
|
13 ವೈದ್ಯಕೀಯ ಕಾಲೇಜುಗಳು
|
|
ಪಶ್ಚಿಮ ಬಂಗಾಳದಲ್ಲಿ ಏಮ್ಸ್(ನಾಲ್ಕನೇ ಹಂತಕ್ಕೆ ವರ್ಗಾವಣೆ) ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ 1 ಏಮ್ಸ್ ಸ್ಥಾಪನೆ
|
6 ಸರ್ಕಾರಿ ವೈದ್ಯ ಕಾಲೇಜುಗಳು
|
ಹಂತ -3(2013)
|
ಯಾವುದೇ ಹೊಸ ಏಮ್ಸ್ ಇಲ್ಲ
|
39 ಸರ್ಕಾರಿ ವೈದ್ಯಕೀಯ ಕಾಲೇಜುಗಳು
|
ಹಂತ -4(2014-15)
|
ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಪೂರ್ವಾಂಚಲ(4ಏಮ್ಸ್ ಸ್ಥಾಪನೆ)
|
13 ಸರ್ಕಾರಿ ವೈದ್ಯ ಕಾಲೇಜುಗಳು
|
ಹಂತ – 5 (2015-16)
|
ಜಮ್ಮು, ಕಾಶ್ಮೀರ,ಪಂಜಾಬ್, ತಮಿಳುನಾಡು,ಹಿಮಾಚಲಪ್ರದೇಶ, ಅಸ್ಸಾಂ, ಬಿಹಾರ(7 ಏಮ್ಸ್)
|
ಇಲ್ಲ
|
ಹಂತ -5ಎ2016-17)
|
ಇಲ್ಲ
|
ಕೇರಳದ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನಮತ್ತು ತಂತ್ರಜ್ಞಾನ ಕಾಲೇಜು ಹಾಗೂ ಐಎಂಎಸ್, ಬಿ ಹೆಚ್ ಯುನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಮೇಲ್ದರ್ಜೆಗೇರಿಸಲು ಸಚಿವಾಲಯ ಅನುಮೋದನೆ(ಕೇರಳ02)
|
ಹಂತ -6(2017-18)
|
|
ಇಲ್ಲ
|
ಒಟ್ಟು
|
20 ಏಮ್ಸ್ ಗಳು
|
73 ಮೇಲ್ದರ್ಜೆ ಯೋಜನೆಗಳು
|
(Release ID: 1531131)
Visitor Counter : 126