Social Welfare
“ಯುವಜನತೆಯ ಸಬಲೀಕರಣ, ಭಾರತದ ಬದಲಾವಣೆ"
प्रविष्टि तिथि:
13 AUG 2026 13:11 PM
ವಿಕಸಿತ ಭಾರತ@2047 ಕ್ಕಾಗಿ ಅಮೃತ ಪೀಳಿಗೆ
ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ, ಅದರ ಶೇಕಡಾ 65 ರಷ್ಟು ನಾಗರಿಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಜನಸಂಖ್ಯಾಶಾಸ್ತ್ರದ ಅನುಕೂಲವನ್ನು ಅಭಿವೃದ್ಧಿಯ ಲಾಭಾಂಶವಾಗಿ ಪರಿವರ್ತಿಸಲು, ವರ್ಷಗಳಿಂದ ಸರ್ಕಾರವು ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ, ಕ್ರೀಡೆ, ಆರೋಗ್ಯ ಮತ್ತು ನಾಗರಿಕ ಭಾಗವಹಿಸುವಿಕೆಯ ಕ್ಷೇತ್ರಗಳಲ್ಲಿ ತನ್ನ ಹೂಡಿಕೆಯನ್ನು ವಿಸ್ತರಿಸಿದೆ. ಈ ಎಲ್ಲಾ ಪ್ರಯತ್ನಗಳು ಒಟ್ಟಾಗಿ 'ಅಮೃತ ಪೀಳಿಗೆ'ಗೆ ವಿಕಸಿತ ಭಾರತ @ 2047 ಅನ್ನು ರೂಪಿಸಲು ಶಕ್ತಗೊಳಿಸುತ್ತಿವೆ.
ಮೈ ಭಾರತ್: ಯುವಜನತೆಯ ನೇತೃತ್ವದ ಅಭಿವೃದ್ಧಿಗಾಗಿ ಒಂದು ವೇದಿಕೆ
ಈ ದೃಷ್ಟಿಕೋನದ ಕೇಂದ್ರಬಿಂದುವಾಗಿ, 15-29 ವರ್ಷ ವಯಸ್ಸಿನ ಯುವಕರಿಗಾಗಿ ಅಕ್ಟೋಬರ್ 2023 ರಲ್ಲಿ 'ಮೇರಾ ಯುವ ಭಾರತ್' ಅನ್ನು ಪ್ರಾರಂಭಿಸಲಾಯಿತು. ಈ ತಂತ್ರಜ್ಞಾನ-ಆಧಾರಿತ ವೇದಿಕೆಯು ಸ್ವಯಂಸೇವೆ, ಅನುಭವಾತ್ಮಕ ಕಲಿಕೆ, ನಾಯಕತ್ವ, ಕೌಶಲ್ಯ ತರಬೇತಿ, ವೃತ್ತಿಜೀವನದ ಬೆಂಬಲ ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಒಂದೇ ದೇಶವ್ಯಾಪಿ ವ್ಯವಸ್ಥೆಯಡಿಯಲ್ಲಿ (ಇಕೋಸಿಸ್ಟಮ್) ತರುತ್ತದೆ.
- ಬೆಳೆಯುತ್ತಿರುವ ರಾಷ್ಟ್ರೀಯ ವೇದಿಕೆ – ಜುಲೈ 2026 ರ ವೇಳೆಗೆ, ಸ್ವಯಂಸೇವೆ, ಅನುಭವಾತ್ಮಕ ಕಲಿಕೆ, ನಾಯಕತ್ವ, ಕೌಶಲ್ಯ ತರಬೇತಿ ಮತ್ತು ವೃತ್ತಿಜೀವನದ ಅವಕಾಶಗಳಿಗಾಗಿ 2.22 ಕೋಟಿಗೂ ಹೆಚ್ಚು ಯುವಕರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
- ಬೃಹತ್ ಮಟ್ಟದ ಸ್ವಯಂಸೇವೆ – 1.52 ಲಕ್ಷಕ್ಕೂ ಹೆಚ್ಚು ಸ್ವಯಂಸೇವೆಯ ಅವಕಾಶಗಳು ಯುವಜನತೆಗೆ ಸಮುದಾಯ ಸೇವೆ, ಪರಿಸರ ಕಾಳಜಿ, ಸಾಂಸ್ಕೃತಿಕ ಉಪಕ್ರಮಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತವೆ.
- ಅನುಭವದ ಮೂಲಕ ಕಲಿಕೆ – 24,900 ಕ್ಕೂ ಹೆಚ್ಚು ಅನುಭವಾತ್ಮಕ ಕಲಿಕಾ ಕಾರ್ಯಕ್ರಮಗಳು ಯುವಜನತೆಯನ್ನು ಆಡಳಿತ, ಆರೋಗ್ಯ ರಕ್ಷಣೆ, ಮಾಧ್ಯಮ, ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಯೊಂದಿಗೆ ಜೋಡಿಸಿವೆ.
ಡಿಜಿಟಲ್ ಭಾಗವಹಿಸುವಿಕೆ ಮತ್ತು ನಾಗರಿಕ ಸಹಭಾಗಿತ್ವ
- ವಿಕಸಿತ ಭಾರತ ಯುವ ನಾಯಕರ ಸಂವಾದ 2026 – ದೇಶವ್ಯಾಪಿ ಕ್ವಿಜ್ (ರಸಪ್ರಶ್ನೆ) ಮೂಲಕ 50 ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದಾರೆ. ಈ ಸಂವಾದದಲ್ಲಿ 21 ದೇಶಗಳ 78 ಅನಿವಾಸಿ ಭಾರತೀಯ (ಡಯಾಸ್ಪೊರಾ) ಯುವಕರು ಭಾಗವಹಿಸಿದ್ದು, ಜಿಲ್ಲಾವಾರು ಪಟ್ಟಿಗಾಗಿ (ರೆಪೊಸಿಟರಿ) 6,000 ಯುವ ನಾಯಕರನ್ನು ಗುರುತಿಸಲಾಗಿದೆ.
- ರಾಷ್ಟ್ರೀಯ ಸೇವಾ ಯೋಜನೆ – ಸ್ವಯಂಸೇವಕರ ನೋಂದಣಿಯು 2014–15 ರಲ್ಲಿ 34.09 ಲಕ್ಷದಿಂದ 2025–26 ರಲ್ಲಿ 38.90 ಲಕ್ಷಕ್ಕೆ ಹೆಚ್ಚಾಗಿದೆ.
ಶಿಕ್ಷಣ: ಪ್ರವೇಶ, ಗುಣಮಟ್ಟ ಮತ್ತು ಭವಿಷ್ಯದ ಸಿದ್ಧತೆ
- ಶಿಕ್ಷಣ ವ್ಯವಸ್ಥೆಯು ವಿಸ್ತರಿಸುವುದರ ಜೊತೆಗೆ ಹೆಚ್ಚು ನಮ್ಯತೆ (ಫ್ಲೆಕ್ಸಿಬಿಲಿಟಿ), ಡಿಜಿಟಲ್ ಮತ್ತು ನಾವೀನ್ಯತೆ ಆಧಾರಿತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಕಲಿಕಾರ್ಥಿಯನ್ನು ಕೇಂದ್ರವಾಗಿರಿಸಿಕೊಂಡು ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಪರಸ್ಪರ ಜೋಡಿಸುತ್ತದೆ.
· ವಿಶ್ವದ ಅತಿದೊಡ್ಡ ಶಾಲಾ ವ್ಯವಸ್ಥೆಗಳಲ್ಲಿ ಒಂದಾದ ಭಾರತವು 14.67 ಲಕ್ಷ ಶಾಲೆಗಳನ್ನು ಹೊಂದಿದ್ದು, 1.02 ಕೋಟಿಗೂ ಹೆಚ್ಚು ಶಿಕ್ಷಕರ ಬೆಂಬಲದೊಂದಿಗೆ 24.72 ಕೋಟಿ ವಿದ್ಯಾರ್ಥಿಗಳಿಗೆ ಸೇವೆಯನ್ನು ಒದಗಿಸುತ್ತಿದೆ.
· ಸುಧಾರಿತ ತಡೆಹಿಡಿಯುವಿಕೆ (ರಿಟೆನ್ಷನ್) – ಪ್ರೌಢಶಾಲಾ ಹಂತದಲ್ಲಿ ಶಾಲೆ ತೊರೆಯುವವರ (ಡ್ರಾಪೌಟ್) ದರವು 2013–14 ರಲ್ಲಿದ್ದ ಶೇಕಡಾ 14.54 ರಿಂದ 2025–26 ರಲ್ಲಿ 7 ಕ್ಕೆ ಕುಸಿದಿದೆ.
· ಡಿಜಿಟಲ್ ತರಗತಿ ಕೊಠಡಿಗಳು – 2025–26 ರ ವೇಳೆಗೆ 1.49 ಲಕ್ಷಕ್ಕೂ ಹೆಚ್ಚು ಶಾಲೆಗಳನ್ನು ಐಸಿಟಿ ಮತ್ತು ಡಿಜಿಟಲ್ ಉಪಕ್ರಮಗಳ ಅಡಿಯಲ್ಲಿ ತರಲಾಗಿದೆ, ಜೊತೆಗೆ 1.76 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು 1.79 ಲಕ್ಷ ಐಸಿಟಿ ಪ್ರಯೋಗಾಲಯಗಳಿಗೆ ಮಂಜೂರಾತಿ ನೀಡಲಾಗಿದೆ (ಮಾರ್ಚ್ 2026 ರ ವೇಳೆಗೆ).
- ಅಟಲ್ ಟಿಂಕರಿಂಗ್ ಲ್ಯಾಬ್‌ಗಳು – 10,000 ಕ್ಕೂ ಹೆಚ್ಚು ಲ್ಯಾಬ್‌ಗಳು 1.1 ಕೋಟಿಗೂ ಹೆಚ್ಚು ವಿದ್ಯಾರ್ಥಿ ನಾವೀನ್ಯಕಾರರನ್ನು ತೊಡಗಿಸಿಕೊಂಡಿದ್ದು, 16 ಲಕ್ಷಕ್ಕೂ ಹೆಚ್ಚು ಯೋಜನೆಗಳಿಗೆ ಬೆಂಬಲ ನೀಡಿವೆ.
ಉನ್ನತ ಶಿಕ್ಷಣ ಮತ್ತು ನಾವೀನ್ಯತೆ
- ಹೆಚ್ಚುತ್ತಿರುವ ನೋಂದಣಿ – ಉನ್ನತ ಶಿಕ್ಷಣ ನೋಂದಣಿಯು 2014–15 ರಲ್ಲಿ 3.4 ಕೋಟಿಯಿಂದ 2023–24 ರಲ್ಲಿ 4.5 ಕೋಟಿಗೆ ಹೆಚ್ಚಾಗಿದೆ; ಮಹಿಳಾ ನೋಂದಣಿಯು 2014-2015 ರಿಂದ ಶೇಕಡಾ 42.2 ರಷ್ಟು ಹೆಚ್ಚಾಗಿದ್ದು, 2023-24 ರಲ್ಲಿ 2.2 ಕೋಟಿಗೆ ತಲುಪಿದೆ.
- ಸಾಂಸ್ಥಿಕ ಬೆಳವಣಿಗೆ

- ಪ್ರಯೋಗಾಲಯ ಮತ್ತು ಸಂಶೋಧನೆ – 85 ಅಟಲ್ ಪ್ರಯೋಗಾಲಯ ಕೇಂದ್ರಗಳು 32,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ ಮತ್ತು 2,900 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಿವೆ.
ನಮ್ಯ ಕಲಿಕೆ (ಫ್ಲೆಕ್ಸಿಬಲ್ ಲರ್ನಿಂಗ್) ಮತ್ತು ಡಿಜಿಟಲ್ ಪ್ರವೇಶ
- ರಾಷ್ಟ್ರೀಯ ಕ್ರೆಡಿಟ್ ಫ್ರೇಮ್‌ವರ್ಕ್ – 700 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು 7,500 ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು ರಾಷ್ಟ್ರೀಯ ಕ್ರೆಡಿಟ್ ಫ್ರೇಮ್‌ವರ್ಕ್ ಅನ್ನು ಅಳವಡಿಸಿಕೊಂಡಿವೆ.
- ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ – 3,123 ಸಂಸ್ಥೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, 35.27 ಕೋಟಿಗೂ ಹೆಚ್ಚು ಅಪಾರ್ ಐಡಿಗಳನ್ನು ವಿತರಿಸಲಾಗಿದೆ, ಇದು ಕಲಿಕಾರ್ಥಿಗಳಿಗೆ ಕ್ರೆಡಿಟ್‌ಗಳನ್ನು ಶೇಖರಿಸಲು, ವರ್ಗಾಯಿಸಲು ಮತ್ತು ನಗದೀಕರಿಸಲು (ರೆಡೀಮ್) ಅನುವು ಮಾಡಿಕೊಡುತ್ತದೆ (ಆಗಸ್ಟ್ 12, 2026 ರ ವೇಳೆಗೆ).
- ಸ್ವಯಂ – ಆಗಸ್ಟ್ 12, 2026 ರ ವೇಳೆಗೆ, ಈ ವೇದಿಕೆಯು 20,370 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ನೀಡುತ್ತಿದ್ದು, 6.5 ಕೋಟಿಗೂ ಹೆಚ್ಚು ನೋಂದಣಿಗಳನ್ನು ದಾಖಲಿಸಿದೆ.
- ದೀಕ್ಷಾ – ಭಾರತದಾದ್ಯಂತ, 342 ಕೋರ್ಸ್‌ಗಳು 19.06 ಕೋಟಿ ನೋಂದಣಿಗಳನ್ನು, 15.02 ಕೋಟಿ ಪೂರ್ಣಗೊಳಿಸುವಿಕೆಗಳನ್ನು ಮತ್ತು 13 ಕೋಟಿ ಪ್ರಮಾಣಪತ್ರಗಳ ವಿತರಣೆಯನ್ನು ದಾಖಲಿಸಿವೆ (ಆಗಸ್ಟ್ 12, 2026 ರ ವೇಳೆಗೆ).
ಕೌಶಲ್ಯ ವೃದ್ಧಿ ಮತ್ತು ಉದ್ಯೋಗಾರ್ಹತೆ
ಸರ್ಕಾರವು ತನ್ನ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ 6 ಕೋಟಿಗೂ ಹೆಚ್ಚು ಜನರನ್ನು ಸಬಲೀಕರಣಗೊಳಿಸಿದೆ. ಸ್ಕಿಲ್ ಇಂಡಿಯಾ ಮಿಷನ್ ತರಬೇತಿಯನ್ನು ಮೂಲಭೂತ ಪ್ರಮಾಣೀಕರಣದಿಂದ ಉದ್ಯಮ, ಅಪ್ರೆಂಟಿಸ್‌ಶಿಪ್‌ಗಳು, ಡಿಜಿಟಲ್ ವೇದಿಕೆಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳೊಂದಿಗೆ ಜೋಡಿಸಲಾದ ಬೇಡಿಕೆ ಆಧಾರಿತ ಮಾದರಿಗೆ ಬದಲಾಯಿಸಿದೆ.

- ಕಡಿಮೆಯಾದ ನಿರುದ್ಯೋಗ ದರ – ನಿರುದ್ಯೋಗ ದರವು 2014 ರಲ್ಲಿದ್ದ ಶೇಕಡಾ 7.71 ರಿಂದ 2025 ರಲ್ಲಿ ಶೇಕಡಾ 4.2 ಕ್ಕೆ ಕುಸಿದಿದೆ.
- ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ– 2015 ರಿಂದ ನಾಲ್ಕು ಹಂತಗಳಲ್ಲಿ 1.64 ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗಿದೆ. ಪಿಎಂಕೆವಿವೈ ಯೋಜನೆ ಹಾಗೂ ಪ್ರಾಯೋಗಿಕ ಕಾರ್ಯಾನುಭವದೊಂದಿಗೆ (ಆನ್-ದಿ-ಜಾಬ್ ಎಕ್ಸ್‌ಪೋಸರ್) ಎಐ, ರೊಬೊಟಿಕ್ಸ್, ಡ್ರೋನ್‌ಗಳು, ಎಲೆಕ್ಟ್ರಾನಿಕ್ಸ್, ಹಸಿರು ಇಂಧನ ಮತ್ತು ಇತರ ಭವಿಷ್ಯದ ಕ್ಷೇತ್ರಗಳಲ್ಲಿ ಉದ್ಯಮ-ಸಂಬಂಧಿತ ತರಬೇತಿಯನ್ನು ಒಳಗೊಂಡಿದೆ.
- ಜನ್ ಶಿಕ್ಷಣ ಸಂಸ್ಥಾನ – ಮಾರ್ಚ್ 2026 ರ ವೇಳೆಗೆ 36.48 ಲಕ್ಷ ಜನರಿಗೆ ತರಬೇತಿ ನೀಡಲಾಗಿದೆ.
- ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರೋತ್ಸಾಹಕ ಯೋಜನೆ – ಮಾರ್ಚ್ 2026 ರ ವೇಳೆಗೆ 54.41 ಲಕ್ಷಕ್ಕೂ ಹೆಚ್ಚು ಅಪ್ರೆಂಟಿಸ್‌ಗಳನ್ನು ತೊಡಗಿಸಿಕೊಳ್ಳಲಾಗಿದೆ.
- ಸ್ಟಾರ್ಟ್‌ಅಪ್ ಇಂಡಿಯಾ – 2014 ಕ್ಕಿಂತ ಮೊದಲು ಸುಮಾರು 350 ರಷ್ಟಿದ್ದ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು ಆಗಸ್ಟ್ 2026 ರ ವೇಳೆಗೆ 2.47 ಲಕ್ಷಕ್ಕೂ ಹೆಚ್ಚು ಬೆಳೆದಿದ್ದು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆಯನ್ನಾಗಿ (ಇಕೋಸಿಸ್ಟಮ್) ಮಾಡಿದೆ.
- ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ – ಆಗಸ್ಟ್ 12, 2026 ರ ವೇಳೆಗೆ, ಪಿಎಂ ಇಂಟರ್ನ್‌ಶಿಪ್ ಯೋಜನೆಯು 31 ಕ್ಷೇತ್ರಗಳಲ್ಲಿ 1,64,902 ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಿದೆ.
- ಪಿಎಂ-ಸೇತು – ಉದ್ಯಮಗಳ ಭಾಗವಹಿಸುವಿಕೆ ಮತ್ತು ಶ್ರಮಿಕ ಮಾರುಕಟ್ಟೆ ಆಧಾರಿತ ಕೋರ್ಸ್‌ಗಳೊಂದಿಗೆ, 200 ಹಬ್‌ಗಳು ಮತ್ತು 800 ಸ್ಪೋಕ್‌ಗಳ ಮೂಲಕ 1,000 ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲು ₹60,000 ಕೋಟಿ ಅಂದಾಜು ವೆಚ್ಚದೊಂದಿಗೆ ಅಕ್ಟೋಬರ್ 2025 ರಲ್ಲಿ ಪ್ರಾರಂಭಿಸಲಾಯಿತು.
- 2014 ಮತ್ತು 2025 ರ ನಡುವೆ, ಐಟಿಐಗಳ ಸಂಖ್ಯೆಯು 9,977 ರಿಂದ 14,688 ಕ್ಕೆ ಹೆಚ್ಚಾಗಿದೆ; ನೋಂದಣಿಯು 9.5 ಲಕ್ಷದಿಂದ 14.7 ಲಕ್ಷಕ್ಕೆ ಏರಿಕೆಯಾಗಿದೆ; ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು 25 ರಿಂದ 33 ಕ್ಕೆ ಹೆಚ್ಚಾಗಿವೆ.
- ತರಬೇತುದಾರರು 11 ರಿಂದ 120 ಕ್ಕೆ ಹೆಚ್ಚಾಗಿವೆ.

ಕ್ರೀಡೆ ಮತ್ತು ಫಿಟ್‌ನೆಸ್
- ಭಾರತವು ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದರಿಂದ ಉನ್ನತ ಮಟ್ಟದ ಕಾರ್ಯಕ್ಷಮತೆಯ (ಹೈ-ಪರ್ಫಾರ್ಮೆನ್ಸ್) ಬೆಂಬಲದವರೆಗೆ ವಿಸ್ತರಿಸುವ ರಚನಾತ್ಮಕ ಕ್ರೀಡಾ ವ್ಯವಸ್ಥೆಯನ್ನು ನಿರ್ಮಿಸಿದೆ. ತರಬೇತಿ (ಕೋಚಿಂಗ್), ಮೂಲಸೌಕರ್ಯ, ವೈಜ್ಞಾನಿಕ ತರಬೇತಿ ಮತ್ತು ಸ್ಪರ್ಧಾತ್ಮಕ ಅನುಭವದ ಬೆಂಬಲದೊಂದಿಗೆ ಕ್ರೀಡೆಯು ಹೆಚ್ಚು ಸೂಕ್ತವಾದ ವೃತ್ತಿಜೀವನವಾಗಿ ರೂಪುಗೊಳ್ಳುತ್ತಿದೆ.
- ಖೇಲೋ ಇಂಡಿಯಾ ಮೂಲಸೌಕರ್ಯ – ಈ ಯೋಜನೆಯಡಿಯಲ್ಲಿ ₹3,176 ಕೋಟಿ ಮೌಲ್ಯದ 349 ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 1,067 ಖೇಲೋ ಇಂಡಿಯಾ ಕೇಂದ್ರಗಳು ಮತ್ತು 267 ಅಕಾಡೆಮಿಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆಯು 2,745 ಕ್ರೀಡಾಪಟುಗಳಿಗೂ ಬೆಂಬಲ ನೀಡುತ್ತದೆ.
- ಖೇಲೋ ಇಂಡಿಯಾ ಗೇಮ್ಸ್ – 2018 ರಿಂದ ಯೂತ್, ಯೂನಿವರ್ಸಿಟಿ, ವಿಂಟರ್, ಪ್ಯಾರಾ, ಬೀಚ್, ವಾಟರ್ ಸ್ಪೋರ್ಟ್ಸ್ ಮತ್ತು ಬುಡಕಟ್ಟು (ಟ್ರೈಬಲ್) ಕ್ರೀಡಾಕೂಟಗಳಲ್ಲಿ 63,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
- ಉನ್ನತ ಮಟ್ಟದ ಕ್ರೀಡಾಪಟುಗಳಿಗೆ ಬೆಂಬಲ – ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ 51 ಪ್ರಮುಖ (ಕೋರ್), 52 ಪ್ಯಾರಾ ಕೋರ್ ಮತ್ತು 130 ಅಭಿವೃದ್ಧಿ (ಡೆವಲಪ್‌ಮೆಂಟ್) ಕ್ರೀಡಾಪಟುಗಳಿಗೆ ಬೆಂಬಲ ನೀಡುತ್ತದೆ. ಕೋರ್ ಮತ್ತು ಡೆವಲಪ್‌ಮೆಂಟ್ ಕ್ರೀಡಾಪಟುಗಳು ಕ್ರಮವಾಗಿ ಮಾಸಿಕ ₹50,000 ಮತ್ತು ₹25,000 ಗೌರವಧನವನ್ನು ಪಡೆಯುತ್ತಾರೆ.
- ವಿಸ್ತೃತ ಹೂಡಿಕೆ – ಮರುರೂಪಿಸಲಾದ ಖೇಲೋ ಇಂಡಿಯಾ ಯೋಜನೆ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಹೆಚ್ಚಿಸಿದ ಬೆಂಬಲವು 2026–27 ರಿಂದ 2030–31ರ ಅವಧಿಗೆ ₹36,441 ಕೋಟಿ ಒಟ್ಟು ವೆಚ್ಚವನ್ನು ಹೊಂದಿದೆ.

ಆರೋಗ್ಯ ಮತ್ತು ಯೋಗಕ್ಷೇಮ
ಯುವಜನತೆಯ ಸಬಲೀಕರಣವು ದೈಹಿಕ, ಮಾನಸಿಕ ಮತ್ತು ತಡೆಗಟ್ಟುವ (ಪ್ರಿವೆಂಟಿವ್) ಆರೋಗ್ಯ ರಕ್ಷಣೆಯನ್ನು ಅವಲಂಬಿಸಿದೆ. ಸರ್ಕಾರದ ಕಾರ್ಯಕ್ರಮಗಳು ಹದಿಹರೆಯದವರಿಗೆ ಪೂರಕವಾದ ಸೇವೆಗಳು, ಮಾನಸಿಕ-ಆರೋಗ್ಯ ಸಲಹೆ (ಕೌನ್ಸೆಲಿಂಗ್), ಮಾದಕ ದ್ರವ್ಯ ದುರ್ಬಳಕೆ ಕುರಿತ ಜಾಗೃತಿ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯ ಲಭ್ಯತೆಯನ್ನು ವಿಸ್ತರಿಸಿವೆ.
- ಹದಿಹರೆಯದವರ ಆರೋಗ್ಯ – ಹದಿಹರೆಯದವರ ಸ್ನೇಹಿ ಆರೋಗ್ಯ ಚಿಕಿತ್ಸಾಲಯಗಳು 2014-15 ರಲ್ಲಿ 6,619 ರಿಂದ 2021-22 ರಲ್ಲಿ 7,203 ಕ್ಕೆ ಹೆಚ್ಚಾಗಿವೆ. ಇದೇ ಅವಧಿಯಲ್ಲಿ ಚಿಕಿತ್ಸಕ ಮತ್ತು ಆಪ್ತಸಲಹಾ ಸೇವೆಗಳನ್ನು ಪಡೆದ ಹದಿಹರೆಯದವರ ಸಂಖ್ಯೆ 39 ಲಕ್ಷದಿಂದ 82 ಲಕ್ಷಕ್ಕೆ ಏರಿಕೆಯಾಗಿದೆ; 2024–25 ರಲ್ಲಿ ನವೆಂಬರ್ 2024 ರವರೆಗೆ 97.67 ಲಕ್ಷ ಯುವಕರು ಚಿಕಿತ್ಸಾಲಯಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.
- ಮಾನಸಿಕ ಆರೋಗ್ಯ– ಟೆಲಿ-ಮಾನಸ್ 53 ಕೋಶಗಳ (ಸೆಲ್ಸ್) ಮೂಲಕ 43.70 ಲಕ್ಷಕ್ಕೂ ಹೆಚ್ಚು ಕರೆಗಳನ್ನು ನಿರ್ವಹಿಸಿದೆ. ಇದಕ್ಕೆ 23 ಮಾರ್ಗದರ್ಶಿ ಸಂಸ್ಥೆಗಳು ಮತ್ತು ಐದು ಪ್ರಾದೇಶಿಕ ಸಮನ್ವಯ ಕೇಂದ್ರಗಳು ಬೆಂಬಲ ನೀಡುತ್ತಿವೆ (ಆಗಸ್ಟ್ 12, 2026 ರ ವೇಳೆಗೆ).
- ಮಾದಕ ದ್ರವ್ಯ ದುರ್ಬಳಕೆ ತಡೆಗಟ್ಟುವಿಕೆ – ಆಗಸ್ಟ್ 12, 2026 ರ ವೇಳೆಗೆ, ನಶಾ ಮುಕ್ತ ಭಾರತ್ ಅಭಿಯಾನವು 11.86 ಕೋಟಿ ಯುವಕರು ಸೇರಿದಂತೆ 30.05 ಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 28.56 ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗಿದ್ದು, 28.29 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳು ಚಿಕಿತ್ಸೆ ಮತ್ತು ಪುನರ್ವಸತಿ ಬೆಂಬಲವನ್ನು ಪಡೆದಿದ್ದಾರೆ.
ಪರಿವರ್ತನೆಯ ಒಂದು ದಶಕ
ಹನ್ನೆರಡು ವರ್ಷಗಳ ಸುಸ್ಥಿರ, ಬಹು-ವಲಯ ಹೂಡಿಕೆಯು ಭಾರತದ ಯುವಜನತೆಯಲ್ಲಿ ಅಳೆಯಬಹುದಾದ ಪರಿವರ್ತನೆಯನ್ನು ತಂದಿದೆ. ಅತೀ ಹೆಚ್ಚು ಯುವ ಭಾರತೀಯರು ಶಿಕ್ಷಣದಲ್ಲಿ ಮುಂದುವರೆಯುತ್ತಿದ್ದಾರೆ, ಉದ್ಯಮಕ್ಕೆ ಸೂಕ್ತವಾದ ಕೌಶಲ್ಯಗಳನ್ನು ಗಳಿಸುತ್ತಿದ್ದಾರೆ, ಔಪಚಾರಿಕ ಉದ್ಯೋಗಕ್ಕೆ ಸೇರುತ್ತಿದ್ದಾರೆ, ಉದ್ಯಮಗಳನ್ನು ಸೃಷ್ಟಿಸುತ್ತಿದ್ದಾರೆ, ಸಮುದಾಯ ಜೀವನದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಕ್ರೀಡೆಯ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಬದಲಾವಣೆಯು ಕೇವಲ ಅವಕಾಶಗಳ ಪ್ರವೇಶದಿಂದ ಅವಕಾಶಗಳ ಸೃಷ್ಟಿಯವರೆಗೆ, ಭಾಗವಹಿಸುವಿಕೆಯಿಂದ ನಾಯಕತ್ವದವರೆಗೆ ಮತ್ತು ಯುವಕರು ಕೇವಲ ಫಲಾನುಭವಿಗಳಾಗಿರದೆ ಸಹ-ಸೃಷ್ಟಿಕರ್ತರಾಗುವವರೆಗೆ ಸಾಗಿದೆ. ನೀತಿ, ಸಂಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳು ಬಲವಾದ ಅಡಿಪಾಯವನ್ನು ಹಾಕಿವೆ; 'ಅಮೃತ ಪೀಳಿಗೆ'ಯು ಇದನ್ನು ವಿಕಸಿತ ಭಾರತ @ 2047 ರತ್ತ ಮುನ್ನಡೆಸುತ್ತಿದೆ.
References
Ministry of Education
https://udiseplus.gov.in/#/en/home
https://dashboard.udiseplus.gov.in/report2026/static/media/UDISE+2025_26_Booklet_nep.94ceae1e8c2210549d21.pdf (pg 29)
https://www.dohe-education.gov.in/static/uploads/2026/07/426440f1daac445265cdea027ae6a00d.pdf (pg 1)
https://www.pib.gov.in/PressReleasePage.aspx?PRID=2297090®=48&lang=2
https://www.abc.gov.in/
https://swayam.gov.in/
https://diksha.gov.in/data/
Ministry of Social Justice and Empowerment
https://www.pib.gov.in/PressReleasePage.aspx?PRID=2241240®=48&lang=2
https://www.dosje.gov.in/organisation/nasha-mukt-bharat-abhiyaan/
Ministry of Personnel, Public Grievances, and Pensions
https://www.pib.gov.in/PressReleasePage.aspx?PRID=1929384®=3&lang=2
Ministry of Commerce and Industry
https://www.startupindia.gov.in/
Ministry of Corporate Affairs
https://pminternship.mca.gov.in/login/
Ministry of Health and Family Welfare
https://sansad.in/getFile/annex/258/AS147.pdf?source=pqars
https://static.pib.gov.in/WriteReadData/specificdocs/documents/2024/dec/doc20241228477601.pdf
https://telemanas.mohfw.gov.in/telemanas-dashboard/#/
PIB Backgrounders
https://www.pib.gov.in/PressNoteDetails.aspx?NoteId=159409&ModuleId=3®=48&lang=1
https://www.pib.gov.in/FactsheetDetails.aspx?id=150695&NoteId=150695&ModuleId=16®=48&lang=2
https://www.pib.gov.in/PressNoteDetails.aspx?NoteId=158887&ModuleId=3®=48&lang=1
https://www.pib.gov.in/PressReleasePage.aspx?PRID=2256476®=3&lang=2
NITI Aayog
https://aim.gov.in/aic.php
Click here to see PDF
*****
(तथ्य सामग्री आईडी: 150866)
आगंतुक पटल : 11
Provide suggestions / comments