ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 29 ರಂದು ನಡೆಯಲಿರುವ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ

ಪ್ರಕಟಣಾ ದಿನಾಂಕ: 28 NOV 2026 3:27PM by PIB Bengaluru

ನವೆಂಬರ್ 29, 2026 ರಂದು ಸಂಜೆ 6 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಡಾ. ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಡಾ. ಭೂಪೇನ್ ಹಜಾರಿಕಾ ಅವರು ಸೆಪ್ಟೆಂಬರ್ 8, 1926 ರಂದು ಅಸ್ಸಾಂನ ಸಾದಿಯಾದಲ್ಲಿ ಜನಿಸಿದರು. 'ಸುಧಾಕಾಂತ' ಮತ್ತು 'ಬ್ರಹ್ಮಪುತ್ರನದಿಯ ಹಾಡುಗಾರ' ಎಂದು ಪ್ರೀತಿಯಿಂದ ಸ್ಮರಿಸಿಕೊಳ್ಳಲ್ಪಡುವ ಅವರು ಅಸ್ಸಾಂ ಮತ್ತು ರಾಷ್ಟ್ರದ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಪ್ರಸಿದ್ಧ ಗಾಯಕ, ಸಂಯೋಜಕ, ಗೀತರಚನೆಕಾರ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿದ್ದ ಅವರು, ತಮ್ಮ ಸೃಜನಶೀಲ ಕೃತಿಗಳ ಮೂಲಕ ಸಾಮಾನ್ಯ ಜನರ ಆಕಾಂಕ್ಷೆಗಳು ಮತ್ತು ಭಾವನೆಗಳಿಗೆ ಧ್ವನಿ ನೀಡಿದರು.  ಅಸ್ಸಾಂ ಮತ್ತು ಈಶಾನ್ಯ ಭಾರತದ ಜಾನಪದ ಸಂಪ್ರದಾಯಗಳಲ್ಲಿ ಬೇರೂರಿರುವ ಅವರ ಸಂಗೀತವು ಭಾಷಾ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ, ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಭಾರತ ಮತ್ತು ಅದರಾಚೆಗೆ ಪ್ರೇಕ್ಷಕರಿಗೆ ತಲುಪಿಸಿತು.

ಡಾ. ಹಜಾರಿಕಾ ಅವರು, ತಮ್ಮ ಕಲಾತ್ಮಕ ಕೊಡುಗೆಗಳನ್ನು ಮೀರಿ, ಮಾನವತಾವಾದಿ ಮತ್ತು ಸಾಮಾಜಿಕ ಚಿಂತಕರಾಗಿ ಕೂಡ ಹೆಸರುವಾಸಿಯಾಗಿದ್ದರು. ಅವರ ಕೃತಿಗಳು ಸಮಾನತೆ, ಮಾನವ ಘನತೆ, ಸಾಮಾಜಿಕ ಸಾಮರಸ್ಯ ಮತ್ತು ಸಾರ್ವತ್ರಿಕ ಸಹೋದರತ್ವವನ್ನು ಉತ್ತೇಜಿಸಿದವು. ಅವರು ಅಸ್ಸಾಂನ ಸಾಂಸ್ಕೃತಿಕ ಗುರುತನ್ನು ಬಲಪಡಿಸಲು ಮತ್ತು ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಲು ಸಹ ಕೊಡುಗೆ ನೀಡಿದರು. ಭಾರತೀಯ ಸಂಗೀತ, ಸಿನಿಮಾ ಮತ್ತು ಸಂಸ್ಕೃತಿಗೆ ಅವರ ಅಸಾಧಾರಣ ಕೊಡುಗೆಗಾಗಿ  , ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವಗಳು ದೊರಕಿವೆ. 2019 ರಲ್ಲಿ, ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ "ಭಾರತ ರತ್ನ"ವನ್ನು ನೀಡಿ ಗೌರವಿಸಲಾಯಿತು.

ಜನ್ಮ ಶತಮಾನೋತ್ಸವ ಆಚರಣೆಗಳು ಸೆಪ್ಟೆಂಬರ್ 8, 2025 ರಂದು ಪ್ರಾರಂಭವಾದವು, ಡಾ. ಹಜಾರಿಕಾ ಅವರ ಸಂಗೀತ, ಸಾಹಿತ್ಯ, ಸಿನಿಮಾ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮರುಪರಿಶೀಲಿಸಲು ಮತ್ತು ಮರುಶೋಧಿಸಲು ಅವಕಾಶವನ್ನು ಒದಗಿಸಿತು. ಕಾರ್ಯಕ್ರಮಗಳು , ಆಚರಣೆಗಳು ಅವರ ಆದರ್ಶಗಳ ಪ್ರಸ್ತುತತೆ, ಅವರ ಸೃಜನಶೀಲ ಪ್ರತಿಭೆಯ ಕಾಲಾತೀತ ಆಕರ್ಷಣೆ ಮತ್ತು ಮಾನವೀಯತೆ, ಸಾಮರಸ್ಯ ಮತ್ತು ಸಾರ್ವತ್ರಿಕ ಸಹೋದರತ್ವದ ಸಂದೇಶವನ್ನು ಸಹ ಎತ್ತಿ ತೋರಿಸಿದವು.

 

*****


(ಪ್ರಕಟಣೆ ಐ.ಡಿ.: 2343599) ವಿಸಿಟರ್ ಕೌಂಟರ್ : 3