ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಾಗತಿಕ ಸಾಂಸ್ಕೃತಿಕ ಚರ್ಚೆಯಲ್ಲಿ ಭಾರತದ ನಾಗರಿಕ ಪರಂಪರೆಯ ಮಹತ್ವದ ಪಾತ್ರವನ್ನು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 25 NOV 2026 1:37PM by PIB Bengaluru

ಜಾಗತಿಕ ಸಾಂಸ್ಕೃತಿಕ ಚರ್ಚೆಯಲ್ಲಿ ಭಾರತದ ನಾಗರಿಕ ಪರಂಪರೆ ಹೇಗೆ ಬೆಳೆಯುತ್ತಿದೆ ಎಂಬುದನ್ನು ಉಲ್ಲೇಖಿಸುವ ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹಂಚಿಕೊಂಡಿದ್ದಾರೆ.

ಪರಂಪರೆ ಸಂರಕ್ಷಣೆ, ಸಾಂಸ್ಕೃತಿಕ ಸಂಶೋಧನೆ, ನಾವೀನ್ಯತೆ ಮತ್ತು ಸೃಜನಶೀಲ ಉದ್ಯಮದ ಮೂಲಕ ಭಾರತವು ತನ್ನ ಶ್ರೀಮಂತ ನಾಗರಿಕ ಸಂಪ್ರದಾಯಗಳನ್ನು ವಿಶಾಲ ಜಾಗತಿಕ ಪ್ರೇಕ್ಷಕರಿಗೆ ಹೇಗೆ ಪರಿಚಯಿಸಬಹುದು ಎಂಬುದನ್ನು ಅನ್ವೇಷಿಸುವ, ಬಲವಾದ ಸಾಂಸ್ಕೃತಿಕ ಸಹಕಾರಕ್ಕಾಗಿ ಚೌಕಟ್ಟನ್ನು ರೂಪಿಸುವ ಮೊದಲ SCO ನಾಗರಿಕ ಸಂವಾದ ವೇದಿಕೆ ಮತ್ತು ಇಂದ್ರಪ್ರಸ್ಥ ಸಂವಹನವನ್ನು ಶ್ರೀ ಶೇಖಾವತ್ ಉಲ್ಲೇಖಿಸಿದ್ದಾರೆ.

ಪ್ರಧಾನಮಂತ್ರಿಯವರ ಕಛೇರಿಯು Xನಲ್ಲಿ ಪೋಸ್ಟ್ ಮಾಡಿ:

"ಭಾರತದ ನಾಗರಿಕ ಪರಂಪರೆಯು ಜಾಗತಿಕ ಸಾಂಸ್ಕೃತಿಕ ಚರ್ಚೆಯಲ್ಲಿ ಹೆಚ್ಚಿನ ಪಾತ್ರವನ್ನು ಹೊಂದಿದೆ.

ಕೇಂದ್ರ ಸಚಿವರಾದ ಶ್ರೀ @gssjodhpur ಅವರು ಮೊದಲ SCO ನಾಗರಿಕ ಸಂವಾದ ವೇದಿಕೆ ಮತ್ತು ಬಲವಾದ ಸಾಂಸ್ಕೃತಿಕ ಸಹಕಾರಕ್ಕಾಗಿ ಚೌಕಟ್ಟನ್ನು ರೂಪಿಸುವ ಇಂದ್ರಪ್ರಸ್ಥ ಸಂವಹನದ ಬಗ್ಗೆ ಬರೆದಿದ್ದಾರೆ.

ಪರಂಪರೆ ಸಂರಕ್ಷಣೆ, ಸಾಂಸ್ಕೃತಿಕ ಸಂಶೋಧನೆ, ನಾವೀನ್ಯತೆ ಮತ್ತು ಸೃಜನಶೀಲ ಉದ್ಯಮದ ಮೂಲಕ ಭಾರತವು ತನ್ನ ಶ್ರೀಮಂತ ನಾಗರಿಕ ಸಂಪ್ರದಾಯಗಳನ್ನು ವಿಶಾಲ ಜಾಗತಿಕ ಪ್ರೇಕ್ಷಕರ ಬಳಿಗೆ ಹೇಗೆ ಕೊಂಡೊಯ್ಯಬಹುದು ಎಂಬುದನ್ನು ಅವರು ನಿರೂಪಿಸುತ್ತಾರೆ.

https://indianexpress.com/article/opinion/columns/sco-civilisational-dialogue-forum-lets-create-spaces-where-civilisations-engage-with-dignity-10977257/lite/"

 

*****


(ಪ್ರಕಟಣೆ ಐ.ಡಿ.: 2341796) ವಿಸಿಟರ್ ಕೌಂಟರ್ : 8