ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳನ್ನು ಮಾಡುವುದರ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 16 NOV 2026 8:53AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಯಾವುದೇ ಮನುಷ್ಯನು ಒಂದೇ ಕ್ಷಣವೂ ಏನನ್ನೂ ಮಾಡದೆ (ಕರ್ಮ ಮಾಡದೆ) ಇರಲು ಸಾಧ್ಯವಿಲ್ಲ; ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಳೆಯಬೇಕು ಎಂದು ಅವರು  ಒತ್ತಿ ಹೇಳಲಾಗಿದೆ.

ಪ್ರಧಾನಮಂತ್ರಿ ಅವರು ತಮ್ಮ 'X' ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

"न हि कश्चित्क्षणमपि जातु तिष्ठत्यकर्मकृत्।

कार्यते ह्यवशः कर्म सर्वः प्रकृतिजैर्गुणैः॥"

ಈ ಸೃಷ್ಟಿಯಲ್ಲಿರುವ ಯಾವೊಬ್ಬ ಮನುಷ್ಯನೂ ಒಂದೇ ಒಂದು ಕ್ಷಣವೂ ಏನನ್ನೂ ಮಾಡದೆ ಸುಮ್ಮನಿರಲು ಸಾಧ್ಯವಿಲ್ಲ. ಪ್ರಕೃತಿಯ ಸಹಜ ಗುಣಗಳು ಮತ್ತು ವ್ಯಕ್ತಿಯ ಸ್ವಭಾವವು ಪ್ರತಿಯೊಬ್ಬರನ್ನೂ ನಿರಂತರವಾಗಿ ಕಾರ್ಯಪ್ರವೃತ್ತರನ್ನಾಗಿಸುತ್ತವೆ; ಆದ್ದರಿಂದ, ನಾವು ನಮ್ಮ ಜೀವನವನ್ನು ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳನ್ನು ಮಾಡುತ್ತಾ ಕಳೆಯಬೇಕು.

 

*****


(ಪ್ರಕಟಣೆ ಐ.ಡಿ.: 2336779) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , Marathi , हिन्दी , Nepali , Assamese , Punjabi , Gujarati , Tamil , Telugu , Malayalam