ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಲ್ಕು ದಿನಗಳ 'ಛತ್  ಮಹಾಪರ್ವ'ದ ಸಮಾಪ್ತಿಯ ಸಂದರ್ಭದಲ್ಲಿ ಶುಭಾಶಯ ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 16 NOV 2026 8:55AM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಲ್ಕು ದಿನಗಳ 'ಛತ್ ಮಹಾಪರ್ವ'ವು ಉದಯಿಸುವ ಸೂರ್ಯ ದೇವರಿಗೆ 'ಅರ್ಘ್ಯ' ಅರ್ಪಿಸುವುದರೊಂದಿಗೆ ಸಂಪನ್ನಗೊಂಡಿದೆ ಎಂದು ತಿಳಿಸಿದ್ದಾರೆ. ಪ್ರಕೃತಿಗೆ ಮೀಸಲಾದ ಈ ಪವಿತ್ರ ಹಬ್ಬದಲ್ಲಿ ದೃಢ ಸಂಕಲ್ಪ ಮತ್ತು ಆಧ್ಯಾತ್ಮಿಕ ಸಾಧನೆಯ ಅದ್ಭುತ ಸಂಗಮ ಕಂಡುಬಂದಿದೆ ಎಂದು ಅವರು ಬಣ್ಣಿಸಿದ್ದಾರೆ. ವ್ರತ ಆಚರಿಸುತ್ತಿರುವ ಎಲ್ಲಾ ಭಕ್ತರ ಮೇಲೆ ಹಾಗೂ ದೇಶಾದ್ಯಂತ ಇರುವ ತಮ್ಮ ಕುಟುಂಬ ಸದಸ್ಯರ ಮೇಲೆ 'ಛಾತಿ ಮೈಯಾ' (ಛಠ್ ದೇವಿ) ತನ್ನ ಆಶೀರ್ವಾದಗಳನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಪ್ರಧಾನ ಮಂತ್ರಿ ಅವರು ತಮ್ಮ 'X' ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

"उदीयमान सूर्यदेव को अर्घ्य अर्पित करने के साथ आज महापर्व छठ का चार दिवसीय अनुष्ठान संपन्न हुआ। प्रकृति को समर्पित इस दिव्य उत्सव में दृढ़ संकल्प और आध्यात्मिक साधना का अद्भुत संगम देखने को मिला। छठी मइया से विनती है कि वे सभी व्रतियों के साथ-साथ देशभर के मेरे परिवारजनों को अपना शुभाशीष प्रदान करें।"

 

*****


(ಪ್ರಕಟಣೆ ಐ.ಡಿ.: 2336776) ವಿಸಿಟರ್ ಕೌಂಟರ್ : 32