ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪುರುಷರ 19 ವರ್ಷದೊಳಗಿನವರ ಏಷ್ಯಾ ಕಪ್ 2026 ಜಯಿಸಿರುವ ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 14 NOV 2026 9:30PM by PIB Bengaluru

ಭಾರತೀಯ ಕ್ರಿಕೆಟ್‌ ಗೆ ಇದೊಂದು ಅತ್ಯುತ್ತಮ ದಿನ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. 'ಪುರುಷರ 19 ವರ್ಷದೊಳಗಿನವರ ಏಷ್ಯಾ ಕಪ್ 2026 ಗೆಲುವಿಗೆ ಮತ್ತು ಯುವ ಕ್ರಿಕೆಟಿಗರು ತೋರಿದ ಅಮೋಘ ಪ್ರದರ್ಶನಕ್ಕೆ ಅವರು ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ಯಶಸ್ಸು ಅನೇಕ ಯುವಜನರನ್ನು ಪ್ರೇರೇಪಿಸಲಿದೆ ಎಂದು ತಿಳಿಸಿರುವ ಪ್ರಧಾನಮಂತ್ರಿಯವರು, ತಂಡದ ಮುಂದಿನ ಪ್ರಯತ್ನಗಳಿಗಾಗಿ ಶುಭ ಹಾರೈಸಿದ್ದಾರೆ.

ಪ್ರಧಾನಮಂತ್ರಿ ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

"ಭಾರತೀಯ ಕ್ರಿಕೆಟ್‌ ಗೆ ಇದೊಂದು ಅತ್ಯುತ್ತಮ ದಿನ!

ಇಂದಿನ ಅಮೋಘ ಪ್ರದರ್ಶನ ಹಾಗೂ 'ಪುರುಷರ 19 ವರ್ಷದೊಳಗನವರ ಏಷ್ಯಾ ಕಪ್ 2026' ಅನ್ನು ಜಯಿಸಿರುವ ನಮ್ಮ ಯುವ ಕ್ರಿಕೆಟಿಗರ ಬಗ್ಗೆ ಅಪಾರ ಹೆಮ್ಮೆ ಎನಿಸುತ್ತಿದೆ. ಅವರ ಈ ಯಶಸ್ಸು ಅನೇಕ ಯುವಜನರಿಗೆ ಸ್ಫೂರ್ತಿಯಾಗಲಿದೆ.

ತಂಡದ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು.”

 

*****


(ಪ್ರಕಟಣೆ ಐ.ಡಿ.: 2336766) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , Assamese , English , Urdu , हिन्दी , Manipuri , Bengali , Punjabi , Gujarati , Malayalam