ಕೆಲವು ಪ್ರಯಾಣಗಳು ಭೂಚೌಕಟ್ಟುಗಳನ್ನು ದಾಟಿದರೆ, ಇನ್ನು ಕೆಲವು ನೆನಪು, ಗುರುತು ಮತ್ತು ಸೇರಿದವರ ಸಂಕೀರ್ಣತೆಗಳ ಮೂಲಕ ಪ್ರಯಾಣಿಸುತ್ತವೆ. ಇತಿಹಾಸ ಮತ್ತು ಆಳವಾದ ವೈಯಕ್ತಿಕ ಸಂಬಂಧಗಳನ್ನು ಒಟ್ಟುಗೂಡಿಸುತ್ತವೆ, ಪ್ರಸಿದ್ಧ ಪೋಲಿಷ್ ಚಲನಚಿತ್ರ ನಿರ್ಮಾಪಕ ಪಾವೆಲ್ ಪಾವ್ಲಿಕೋವ್ಸ್ಕಿ ಅವರು ನಿರ್ದೇಶಿಸಿದ ಫಾದರ್ಲ್ಯಾಂಡ್ (ಓಜ್ಜಿಜ್ನಾ/ ಪಿತೃ ಭೂಮಿ) 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ.ಎಫ್.ಎಫ್.ಐ) ಉದ್ಘಾಟನಾ ಚಿತ್ರವಾಗಿ ಆಯ್ಕೆಯಾಗಿದೆ, ಇದು ಗೋವಾದಲ್ಲಿ ಒಂಬತ್ತು ದಿನಗಳ ಸಿನಿಮಾ ಉತ್ಸವ ಆಚರಣೆಗೆ ನಾಂದಿ ಹಾಡಿದೆ.
1949ರ ಬೇಸಿಗೆಯಲ್ಲಿ, ಶೀತಲ ಸಮರದ ಉತ್ತುಂಗದ ಹಿನ್ನೆಲೆಯಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ಬರಹಗಾರ ಥಾಮಸ್ ಮಾನ್ ಅವರು ಮತ್ತು ಅವರ ಮಗಳು, ನಟಿ, ಬರಹಗಾರ್ತಿ ಮತ್ತು ರ್ಯಾಲಿ ಚಾಲಕಿ ಎರಿಕಾ ಅವರ ನಡುವಿನ ಸಂಬಂಧವನ್ನು ಫಾದರ್ಲ್ಯಾಂಡ್ ಚಲನಚಿತ್ರವು ಕಥಾಹಂದರ ಮೂಲಕ ಅನ್ವೇಷಿಸುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಹದಿನಾರು ವರ್ಷಗಳ ಗಡಿಪಾರು ನಂತರ ಜರ್ಮನಿಗೆ ಹಿಂದಿರುಗಿದ ಥಾಮಸ್ ಮಾನ್, ತನ್ನ ಮಗಳೊಂದಿಗೆ ಕಪ್ಪು ಬ್ಯೂಕ್ ನಲ್ಲಿ ಸವಾಲಿನ ರಸ್ತೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಅವರ ಪ್ರಯಾಣವು ಅವರನ್ನು ಯುದ್ಧದಿಂದ ಧ್ವಂಸಗೊಂಡ ದೇಶವನ್ನು ದಾಟಿ, ಯು.ಎಸ್. ಪ್ರಾಬಲ್ಯದ ಫ್ರಾಂಕ್ ಫರ್ಟ್‌ನಿಂದ ಸೋವಿಯತ್ ನಿಯಂತ್ರಣದಲ್ಲಿರುವ ವೀಮರ್ ವರೆಗೆ ಕರೆದೊಯ್ಯುತ್ತದೆ.
ತಂದೆ ಮತ್ತು ಮಗಳು ವಿಭಜಿತ ಜರ್ಮನಿಯ ಮೂಲಕ ಪ್ರಯಾಣಿಸುವಾಗ, ಸಂಘರ್ಷದಿಂದ ಛಿದ್ರಗೊಂಡ ರಾಷ್ಟ್ರದ ಗೋಚರ ಗಾಯಗಳಿಗಿಂತ ಹೆಚ್ಚಿನದನ್ನು ಅವರು ಎದುರಿಸುತ್ತಾರೆ. ಅವರ ಪ್ರಯಾಣವು ಅವರ ಸ್ವಂತ ಕುಟುಂಬದೊಳಗಿನ ಆಳವಾದ ವಿಭಜನೆಗಳನ್ನು ಸಹ ಎದುರಿಸುತ್ತದೆ. ಈ ಭಾವನಾತ್ಮಕವಾಗಿ ಪದರ ಪದರದ ನಿರೂಪಣೆಯ ಮೂಲಕ, ಚಲನಚಿತ್ರವು ವೈಯಕ್ತಿಕ ಸಂಬಂಧಗಳು, ಇತಿಹಾಸ ಮತ್ತು ಮನೆಯ ಕಲ್ಪನೆಯ ಛೇದಕಗಳನ್ನು ಪರಿಶೋಧಿಸುತ್ತದೆ.
ಸಾಂಡ್ರಾ ಹಲ್ಲರ್ ಮತ್ತು ಹ್ಯಾನ್ಸ್ ಜಿಶ್ಲರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ 82 ನಿಮಿಷಗಳ ನಾಟಕ ಪ್ರಧಾನ ಚಲನಚಿತ್ರವು ಪೋಲೆಂಡ್, ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಅನ್ನು ಒಳಗೊಂಡ ಸಹಯೋಗದ ನಿರ್ಮಾಣವಾಗಿದೆ. ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಪ್ರಸ್ತುತಪಡಿಸಲಾದ ಈ ಚಲನಚಿತ್ರವು ಈಗ ಭಾರತದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ.ಎಫ್.ಎಫ್.ಐ) ಪ್ರಥಮ ಪ್ರದರ್ಶನ ಅವಕಾಶವನ್ನು ಹೊಂದಿದೆ.

ನಿರ್ದೇಶಕ ಪಾವೆಲ್ ಪಾವ್ಲಿಕೋವ್ಸ್ಕಿಯವರ ಇತಿಹಾಸ ಮತ್ತು ಮಾನವ ಸಂಬಂಧಗಳ ಅನ್ವೇಷಣೆಯನ್ನು ಯುರೋಪಿಯನ್ ಇತಿಹಾಸದ ಮಹತ್ವದ ಕ್ಷಣದ ವಿರುದ್ಧ ಹೊಂದಿಸಲಾದ ಆತ್ಮೀಯ ನಿರೂಪಣೆಯ ಮೂಲಕ ಈ ಫಾದರ್ ಲ್ಯಾಂಡ್ ಚಲನಚಿತ್ರವು ಮುಂದುವರಿಯುತ್ತದೆ. ಈ ಚಿತ್ರವು ಈಗಾಗಲೇ 2026 ರಲ್ಲಿ ಕೇನ್ಸ್, ಸ್ಯಾನ್ ಸೆಬಾಸ್ಟಿಯನ್ ಮತ್ತು ಟೆಲ್ಲುರೈಡ್ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಉತ್ಸವಗಳಿಗೆ ಪ್ರಯಾಣ ಬೆಳೆಸಿದೆ, ಪಾವ್ಲಿಕೋವ್ಸ್ಕಿ ಅವರ ಈ ಚಲನಚಿತ್ರವು ಕೇನ್ಸ್ ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಕೂಡ ಗಳಿಸಿದೆ.
ಫಾದರ್ ಲ್ಯಾಂಡ್ ಚಲನಚಿತ್ರವು ದೊಂದಿಗೆ, 57 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿದ ಕಥೆಗಳ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಸಿನಿಮಾವು , ವಿಭಿನ್ನ ಪ್ರಪಂಚಗಳು ಮತ್ತು ದೃಷ್ಟಿಕೋನಗಳನ್ನು ಒಟ್ಟುಗೂಡಿಸುವುದರಿಂದ, ಆರಂಭಿಕ ಚಿತ್ರವು ಈ ವರ್ಷದ ಚಲನಚಿತ್ರೋತ್ಸವದ ಪರಿಕಲ್ಪನೆಯಾದ - ಗಡಿಗಳಿಲ್ಲದ ಕಥೆಗಳು ('ಸ್ಟೋರೀಸ್ ವಿಥೌಟ್ ಬಾರ್ಡರ್ಸ್' ), ಎಂಬುದಕ್ಕೆ ಸೂಕ್ತವಾದ ಆರಂಭಿಕ ಮೌಲ್ಯವನ್ನು ನೀಡುತ್ತದೆ.
*****