ಆಯುಷ್
azadi ka amrit mahotsav

ಪ್ರಕೃತಿ ಚಿಕಿತ್ಸಾ ದಿನ (ನ್ಯಾಚುರೋಪಥಿ) 2026: ವೈಜ್ಞಾನಿಕ ಸಂಶೋಧನೆಯಿಂದ ಭಾರತದ ಪ್ರಕೃತಿ ಆಧಾರಿತ ಆರೋಗ್ಯ ರಕ್ಷಣಾ ಪೂರಕ ವ್ಯವಸ್ಥೆ ಬಲವರ್ಧನೆ


'ಪ್ರಕೃತಿ ಚಿಕಿತ್ಸಾ-ಸ್ವಸ್ಥ ಭಾರತ' ಎಂಬ ‍ಘೋಷವಾಕ್ಯದಡಿಯಲ್ಲಿ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ ನವೆಂಬರ್ 18 ರಂದು ಕರ್ನಾಟಕದ ನಾಗಮಂಗಲದಲ್ಲಿ ಆಚರಣೆ

ಪ್ರಕಟಣಾ ದಿನಾಂಕ: 12 NOV 2026 12:12PM by PIB Bengaluru

ಭಾರತದಲ್ಲಿ ಪ್ರಕೃತಿ ಚಿಕಿತ್ಸಾ ಪದ್ಧತಿಯು(ನ್ಯಾಚುರೋಪಥಿಯು) ಪ್ರಕೃತಿ ಚಿಕಿತ್ಸೆಯೊಂದಿಗೆ ತನ್ನ ಸಾಂಪ್ರದಾಯಿಕ ಸಂಬಂಧವನ್ನು ಮೀರಿ ವೈಜ್ಞಾನಿಕ ಸಂಶೋಧನೆ, ಕ್ಲಿನಿಕಲ್ ಮೌಲ್ಯಮಾಪನ ಮತ್ತು ಆರೋಗ್ಯ ರಕ್ಷಣೆಯ ಮುನ್ನೆಚ್ಚರಿಕೆಗೆ ಹೆಚ್ಚು ಸಾಂಸ್ಥಿಕ ಪೂರಕ ವ್ಯವಸ್ಥೆಯತ್ತ ಸಾಗುತ್ತಿದೆ. ಜೀವನಶೈಲಿ-ಸಂಬಂಧಿತ ಅಸ್ವಸ್ಥತೆಗಳು, ಬೊಜ್ಜು, ಒತ್ತಡ ಮತ್ತು ವಯಸ್ಸಾದ ನಂತರ ಆರೋಗ್ಯಕರ ಬಗ್ಗೆ  ಗಮನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಣೆ, ನೈಸರ್ಗಿಕ ಚಿಕಿತ್ಸೆಗಳು ಮತ್ತು ಜೀವನಶೈಲಿ ಮಾರ್ಪಾಡುಗಳ ಮೇಲೆ ಅದಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಹೊಸ ಪ್ರಸ್ತುತತೆಯನ್ನು ಕಂಡುಕೊಳ್ಳುತ್ತಿದೆ.

“ಪ್ರಕೃತಿ ಚಿಕಿತ್ಸಾ, ಸ್ವಸ್ಥ ಭಾರತ" ಎಂಬ ಘೋಷವಾಕ್ಯದಡಿಯಲ್ಲಿ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು 2026ರ ನವೆಂಬರ್ 18 ರಂದು ಕರ್ನಾಟಕದ ನಾಗಮಂಗಲದಲ್ಲಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸಂಶೋಧನಾ ಸಂಸ್ಥೆಯಲ್ಲಿ (ಸಿಆರ್ ಐವೈಎನ್)’’ ಆಚರಿಸಲಾಗುವುದು. ಪ್ರಕೃತಿ ಚಿಕಿತ್ಸಾ ಪದ್ಧತಿಯ ಅರಿವು ಮತ್ತು ಆರೋಗ್ಯ ಪ್ರಚಾರ, ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಅಳವಡಿಕೆಯಲ್ಲಿ ಅದರ ಪಾತ್ರವನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯವು ಸೂಕ್ತ ಆಹಾರ ಪದ್ಧತಿಗಳು, ದೈಹಿಕ ಚಟುವಟಿಕೆ, ಯೋಗ, ಒತ್ತಡ ನಿರ್ವಹಣೆ ಮತ್ತು ಇತರ ಪುರಾವೆ-ಮಾಹಿತಿ ಪಡೆದ ಪ್ರಕೃತಿ ಚಿಕಿತ್ಸಾ ವಿಧಾನಗಳ ಮೂಲಕ ತಡೆಗಟ್ಟುವ ಮತ್ತು ಉತ್ತೇಜಕ ಆರೋಗ್ಯ ರಕ್ಷಣೆಯನ್ನು ಒತ್ತಿಹೇಳುತ್ತದೆ. ಇದು ಬೊಜ್ಜು ತಡೆಗಟ್ಟುವಿಕೆ ಮತ್ತು ಜೀವನಶೈಲಿ ಸಂಬಂಧಿತ ಅಸ್ವಸ್ಥತೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಬಲಪಡಿಸಲು, ವ್ಯಕ್ತಿಗಳು ಮತ್ತು ಸಮುದಾಯಗಳು ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ. ಈ ಆಚರಣೆಯು ಗೌರವಾನ್ವಿತ ಪ್ರಧಾನ ಮಂತ್ರಿಯವರ ದೈಹಿಕ ಕ್ಷಮತೆ (ಫಿಟ್) ಮತ್ತು ಆರೋಗ್ಯಕರ ಭಾರತಕ್ಕಾಗಿ ದೂರದೃಷ್ಟಿಗೆ ಅನುಗುಣವಾಗಿದೆ, ಆರೋಗ್ಯ ರಕ್ಷಣೆ ಮುನ್ನೆಚ್ಚರಿಕೆ, ಆರೋಗ್ಯಕರ ಜೀವನ ಮತ್ತು ಸಾರ್ವಜನಿಕ ಯೋಗಕ್ಷೇಮದ ಕಡೆಗೆ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿಹೇಳುತ್ತದೆ.

ಕೇಂದ್ರ ಆಯುಷ್ (ಸ್ವತಂತ್ರ ಹೊಣೆಗಾರಿಕೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್ "ಪ್ರಕೃತಿ ಚಿಕಿತ್ಸೆಯು ಜೀವನಶೈಲಿ, ಪ್ರಕೃತಿ ಮತ್ತು ಒಟ್ಟಾರೆ ಆರೋಗ್ಯದ ನಡುವಿನ ನಿಕಟ ಸಂಬಂಧ ಗುರುತಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ" ಎಂದು ಪುನರುಚ್ಚರಿಸಿದರು. ವಿಶ್ವಾಸಾರ್ಹ ಸಂಶೋಧನೆ, ಗುಣಮಟ್ಟದ ಶಿಕ್ಷಣ ಮತ್ತು ಸಾಂಪ್ರದಾಯಿಕ ಆರೋಗ್ಯ ರಕ್ಷಣೆಯೊಂದಿಗೆ ಜವಾಬ್ದಾರಿಯುತ ಏಕೀಕರಣದ ಮೂಲಕ ಅದರ ವೈಜ್ಞಾನಿಕ ಅಡಿಪಾಯ ಬಲಪಡಿಸುವುದರ ಮೇಲೆ ನಾವು ಒತ್ತು ನೀಡುತ್ತೇವೆ. ಈ ವಿಧಾನವು ಆರೋಗ್ಯ ರಕ್ಷಣಾ ಮುನ್ನಚ್ಚರಿಕೆ ಕೊಡುಗೆ ನೀಡಬಹುದು ಮತ್ತು ಸದೃಢ ಮತ್ತು ಆರೋಗ್ಯಕರ ಭಾರತದ ದೃಷ್ಟಿಯನ್ನು ಮುನ್ನಡೆಸಬಹುದು."

ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು, "ಪ್ರಕೃತಿ ಚಿಕಿತ್ಸೆಯ ವಿಶ್ವಾಸಾರ್ಹತೆ ಮತ್ತು ವ್ಯಾಪಕ ಅನ್ವಯವನ್ನು ಬಲಪಡಿಸಲು ವೈಜ್ಞಾನಿಕ ಮೌಲ್ಯೀಕರಣ ಅತ್ಯಗತ್ಯ. ಸಿಸಿಆರ್ ವೈ ಎನ್ ಮತ್ತು ಇತರ ಸಂಸ್ಥೆಗಳ ಮೂಲಕ, ಪ್ರಕೃತಿ ಚಿಕಿತ್ಸಾ ಪದ್ಧತಿಗಳನ್ನು ಸೂಕ್ತ ವೈಜ್ಞಾನಿಕ ವಿಧಾನಗಳ ಮೂಲಕ ನಿರ್ಣಯಿಸಬಹುದು ಮತ್ತು ಜವಾಬ್ದಾರಿಯುತ ಆರೋಗ್ಯ ರಕ್ಷಣಾ ವಿಧಾನಗಳಾಗಿ ಪರಿವರ್ತಿಸಬಹುದು ಎಂದು ನಾವು ವ್ಯವಸ್ಥಿತ ಸಂಶೋಧನೆ, ಕ್ಲಿನಿಕಲ್ ಮೌಲ್ಯಮಾಪನ ಮತ್ತು ಸಹಯೋಗವನ್ನು ಪ್ರೋತ್ಸಾಹಿಸುತ್ತಿದ್ದೇವೆ" ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಕೇಂದ್ರೀಯ ಸಂಶೋಧನಾ ಮಂಡಳಿ (ಸಿಸಿಆರ್ ವೈಎನ್) 2025–26ರ ಹಣಕಾಸು ವರ್ಷದಲ್ಲಿ ಪೀರ್-ರಿವ್ಯೂಡ್ ಜರ್ನಲ್‌ಗಳಲ್ಲಿ ವಿವಿಧ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿತು, ಆದರೆ ಸಚಿವಾಲಯದ ಅಡಿಯಲ್ಲಿರುವ ಐದು ಸಂಶೋಧನಾ ಮಂಡಳಿಗಳು ಒಟ್ಟಾಗಿ 653 ಪ್ರಬಂಧಗಳನ್ನು ಪ್ರಕಟಿಸಿದವು. ಭಾರತದಾದ್ಯಂತ 22 ಘಟಕಗಳನ್ನು ಹೊಂದಿರುವ ಈ ಮಂಡಳಿಯು ಸಂಶೋಧನೆ, ಶಿಕ್ಷಣ ಮತ್ತು ಸಂಪರ್ಕದಲ್ಲಿ ತನ್ನ ಸಾಂಸ್ಥಿಕ ಜನಸಂಪರ್ಕವನ್ನು ಪ್ರತಿಬಿಂಬಿಸುತ್ತದೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಶಿಕ್ಷಣ ಮತ್ತು ಸಂಶೋಧನೆಗೆ ಮೀಸಲಾಗಿರುವ ಸ್ನಾತಕೋತ್ತರ ಸಂಸ್ಥೆಗಳ ಮೂಲಕ ಭಾರತದ ಸಾಂಸ್ಥಿಕ ಮೂಲಸೌಕರ್ಯವು ವಿಸ್ತರಿಸಿದೆ, ಜೊತೆಗೆ ಹರಿಯಾಣದ ಝಜ್ಜರ್ ಮತ್ತು ಕರ್ನಾಟಕದ ನಾಗಮಂಗಲದಲ್ಲಿ 200 ಹಾಸಿಗೆಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಸ್ಥಾಪಿಸಲಾದ ಮೊದಲ ಕಾಲೇಜು ಪುಣೆಯ ನಿಸರ್ಗ ಗ್ರಾಮ್‌ನಲ್ಲಿರುವ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಪದವಿ (BNYS) ಕಾಲೇಜು, ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ಸಂಸ್ಥೆ (NIN), ಶೈಕ್ಷಣಿಕ ಮತ್ತು ವೈದ್ಯಕೀಯ ತರಬೇತಿ, ಸಂಶೋಧನೆ ಆಧಾರಿತ ಕಲಿಕೆ ಮತ್ತು ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ಪ್ರಾಯೋಗಿಕ ಮಾನ್ಯತೆ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ, ಆರೋಗ್ಯ ರಕ್ಷಣೆ, ಸಂಶೋಧನೆ, ಶೈಕ್ಷಣಿಕ ಮತ್ತು ಖಾಸಗಿ ಅಭ್ಯಾಸದಲ್ಲಿ ವೃತ್ತಿಜೀವನಕ್ಕಾಗಿ ಪದವೀಧರರನ್ನು ಸಿದ್ಧಪಡಿಸುತ್ತದೆ.

ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ (NIN), ಆರೋಗ್ಯ ಸಂಶೋಧನಾ ಇಲಾಖೆಯಲ್ಲಿ ನೋಂದಾಯಿಸಲಾದ ಮೀಸಲಾದ ಸಂಶೋಧನಾ ವಿಭಾಗ ಮತ್ತು ಸಾಂಸ್ಥಿಕ ನೀತಿ ಸಮಿತಿಯ ಮೂಲಕ ತನ್ನ ಸಂಶೋಧನಾ ಚೌಕಟ್ಟನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ. ಆ ಉಪಕ್ರಮಗಳಲ್ಲಿ ಸಂಶೋಧನಾ ವಿಧಾನ ಕಾರ್ಯಾಗಾರಗಳು, ಉತ್ತಮ ಕ್ಲಿನಿಕಲ್ ಅಭ್ಯಾಸ ತರಬೇತಿ, ವೀಕ್ಷಣಾ ಅಧ್ಯಯನಗಳು, ವ್ಯವಸ್ಥಿತ ವಿಮರ್ಶೆಗಳು ಮತ್ತು ಸಹಯೋಗದ ಸಂಶೋಧನೆ ಸೇರಿವೆ.

ಪ್ರಕೃತಿ ಚಿಕಿತ್ಸೆಯು ಆರೋಗ್ಯಕರ ಆಹಾರ ಪದ್ಧತಿಗಳು, ದೈಹಿಕ ಚಟುವಟಿಕೆ, ಸಾಕಷ್ಟು ವಿಶ್ರಾಂತಿ ಮತ್ತು ಒತ್ತಡ ನಿರ್ವಹಣೆಯನ್ನು ಉತ್ತೇಜಿಸುವುದರಿಂದ ಹೆಚ್ಚುತ್ತಿರುವ ಸಂಶೋಧನಾ ಒತ್ತು ವಿಶೇಷವಾಗಿ ಪ್ರಸ್ತುತವಾಗಿದೆ. ಈ ಜೀವನಶೈಲಿ ಕ್ರಮಗಳು ವಿವಿಧ ವಯೋಮಾನದವರಲ್ಲಿ ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಬೆಂಬಲಿಸಬಹುದು ಮತ್ತು ಜೀವನಶೈಲಿ-ಸಂಬಂಧಿತ ಅಪಾಯಕಾರಿ ಅಂಶಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬಹುದು.

ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದಂದು, ಪ್ರಕೃತಿ ಚಿಕಿತ್ಸೆಯ ವೈಜ್ಞಾನಿಕ ಬುನಾದಿಯನ್ನು ಬಲಪಡಿಸುವುದು, ಸಾಂಸ್ಥಿಕ ಸಾಮರ್ಥ್ಯ ವಿಸ್ತರಣೆ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವುದರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. ನಿರಂತರ ಸಂಶೋಧನೆ, ಗುಣಮಟ್ಟದ ಶಿಕ್ಷಣ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ, ಭಾರತವು ತನ್ನ ವ್ಯಾಪಕವಾದ  ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆ ಪ್ರಯತ್ನಗಳಿಗೆ ಪೂರಕವಾಗಿರುವ ಮತ್ತು 'ಪ್ರಕೃತಿ ಚಿಕಿತ್ಸಾ, ಸ್ವಸ್ಥ ಭಾರತ'ದ ದೂರದೃಷ್ಟಿಗೆ ಕೊಡುಗೆ ನೀಡುವ ವಿಶ್ವಾಸಾರ್ಹ ಮತ್ತು ಲಭ್ಯವಿರಬಹುದಾದ ಪ್ರಕೃತಿ ಚಿಕಿತ್ಸಾ ಪರಿಸರ ವ್ಯವಸ್ಥೆ ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿ  ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2335370) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Marathi , हिन्दी , Assamese , Gujarati , Tamil