ಪ್ರಕಟಣಾ ದಿನಾಂಕ:
11 NOV 2026 5:43PM by PIB Bengaluru
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು, ಗುಜರಾತ್ ಪ್ರವಾಸೋದ್ಯಮದ ಸಹಭಾಗಿತ್ವದಲ್ಲಿ ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೆಂಬಲದೊಂದಿಗೆ ಆಯೋಜಿಸಿರುವ 'ಭಾರತ ಪರ್ವ 2026' ಗುಜರಾತ್ನ ಏಕ್ತಾ ನಗರದಲ್ಲಿ ನಡೆಯುತ್ತಿದೆ. 'ಏಕ್ ಭಾರತ್ ಶ್ರೇಷ್ಠ ಭಾರತ್' ಎಂಬ ಏಕೀಕೃತ ಧ್ಯೇಯದಡಿ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಸಂಪ್ರದಾಯಗಳು ಮತ್ತು ವೈವಿಧ್ಯತೆಯನ್ನು ಇಲ್ಲಿ ಸಂಭ್ರಮಿಸಲಾಗುತ್ತಿದೆ. 'ರಾಷ್ಟ್ರೀಯ ಏಕತಾ ದಿವಸ'ದ ಆಚರಣೆಯ ಭಾಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಅಕ್ಟೋಬರ್ 30ರಂದು ಈ ಉತ್ಸವಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವು 2026ರ ನವೆಂಬರ್ 15ರವರೆಗೆ ಮುಂದುವರಿಯಲಿದೆ.

ಈ ಉತ್ಸವವು ದೇಶದಾದ್ಯಂತದ ಸಾಂಪ್ರದಾಯಿಕ ಕಲೆಗಳು, ಕರಕುಶಲ ವಸ್ತುಗಳು, ಪ್ರಾದೇಶಿಕ ಖಾದ್ಯಗಳು, ಜಾನಪದ ಸಂಪ್ರದಾಯಗಳು, ಸಂಗೀತ, ನೃತ್ಯ ಮತ್ತು ಸ್ಥಳೀಯ ಕೌಶಲಗಳನ್ನು ಒಂದೆಡೆ ತಂದಿದೆ. ಇದು ಸಂದರ್ಶಕರಿಗೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಂದೇ ಸ್ಥಳದಲ್ಲಿ ಅನುಭವಿಸುವ ಅವಕಾಶವನ್ನು ಒದಗಿಸುತ್ತದೆ.

'ಭಾರತ ಪರ್ವ'ದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ 'ಥೀಮ್ ಪೆವಿಲಿಯನ್'ನಲ್ಲಿ, 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 'ಇನ್ಕ್ರೆಡಿಬಲ್ ಇಂಡಿಯಾ' (ಅದ್ಭುತ ಭಾರತ) ಹಾಗೂ 'ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್' (ಕೇಂದ್ರೀಯ ಕುಶಲ ಕೈಗಾರಿಕೆಗಳ ಸಂಸ್ಥೆ) ಭಾಗವಹಿಸಿವೆ. ಈ ಪೆವಿಲಿಯನ್ನಲ್ಲಿ 100ಕ್ಕೂ ಹೆಚ್ಚು 'ಒಂದು ಜಿಲ್ಲೆ, ಒಂದು ಉತ್ಪನ್ನ' (ODOP) ಉತ್ಪನ್ನಗಳೊಂದಿಗೆ, ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಜವಳಿಗಳು, ವರ್ಣಚಿತ್ರಗಳು, ಕೃಷಿ ಉತ್ಪನ್ನಗಳು ಮತ್ತು ಇತರ ವಿಶಿಷ್ಟ ಪ್ರಾದೇಶಿಕ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಇವು ಭಾರತದ ವಿವಿಧ ಪ್ರದೇಶಗಳ ಕಲಾತ್ಮಕ ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಗುರುತನ್ನು ಎತ್ತಿ ತೋರಿಸುತ್ತವೆ.
ಒ.ಡಿ.ಒ.ಪಿ.(ODOP) ಪ್ರದರ್ಶನಗಳು ಉತ್ಸವದ ಪ್ರಮುಖ ಅಂಶವಾಗಿದ್ದು, ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯಾ ಪ್ರದೇಶಗಳ ವಿಶಿಷ್ಟ ಕೌಶಲ್ಯಗಳು, ಸಾಂಪ್ರದಾಯಿಕ ಕರಕುಶಲತೆ ಮತ್ತು ಸ್ಥಳೀಯ ವಿಶೇಷತೆಗಳನ್ನು ಪ್ರತಿಬಿಂಬಿಸುವ ಉತ್ಪನ್ನಗಳನ್ನು ಪ್ರಸ್ತುತಪಡಿಸುತ್ತಿವೆ. ಸಂಕೀರ್ಣ ರಚನೆಯ ಜವಳಿ ಮತ್ತು ಕೈಮಗ್ಗ ಉತ್ಪನ್ನಗಳಿಂದ ಹಿಡಿದು ಸಾಂಪ್ರದಾಯಿಕ ವರ್ಣಚಿತ್ರಗಳು, ಕರಕುಶಲ ವಸ್ತುಗಳು ಮತ್ತು ಪ್ರದೇಶ-ನಿರ್ದಿಷ್ಟ ಕೃಷಿ ಉತ್ಪನ್ನಗಳವರೆಗೆ, ಈ ಪ್ರದರ್ಶನಗಳು ಸಂದರ್ಶಕರಿಗೆ ಭಾರತದ ವೈವಿಧ್ಯಮಯ ಸ್ಥಳೀಯ ಉತ್ಪನ್ನಗಳು ಮತ್ತು ಕರಕುಶಲ ಸಂಪ್ರದಾಯಗಳ ಒಂದು ನೋಟವನ್ನು ನೀಡುತ್ತವೆ. ಸ್ಥಳೀಯವಾಗಿ ಪ್ರಸಿದ್ಧ ಉತ್ಪನ್ನಗಳನ್ನು ರಾಷ್ಟ್ರೀಯ ವೇದಿಕೆಗೆ ತರುವ ಮೂಲಕ, ಭಾರತ್ ಪರ್ವ್ ಪ್ರಾದೇಶಿಕ ಕರಕುಶಲತೆಯ ಗೋಚರತೆಯನ್ನು ಹೆಚ್ಚಿಸಲು, ಸಾಂಪ್ರದಾಯಿಕ ಕೌಶಲ್ಯಗಳನ್ನು ಉತ್ತೇಜಿಸಲು ಮತ್ತು ಸ್ಥಳೀಯ ಕಲಾವಿದರು ಹಾಗು ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳ ಬಗೆಗಿನ ಮೆಚ್ಚುಗೆಯನ್ನು ಉತ್ತೇಜಿಸಲು ಅವಕಾಶವನ್ನು ಒದಗಿಸುತ್ತದೆ. ಇನ್ಕ್ರೆಡಿಬಲ್ ಇಂಡಿಯಾ ಪೆವಿಲಿಯನ್ ಡಿಜಿಟಲ್ ಮಧ್ಯಸ್ಥಿಕೆಗಳನ್ನು ತೊಡಗಿಸಿಕೊಳ್ಳುವ ಮೂಲಕ ದೇಶದ ಪರಂಪರೆ, ಸಂಸ್ಕೃತಿ ಮತ್ತು ಹಬ್ಬಗಳನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.


ಸಾಂಪ್ರದಾಯಿಕ ಕುಶಲಕರ್ಮಿಗಳಿಂದ ನೇರ ಪ್ರದರ್ಶನಗಳು ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದು, ಪ್ರವಾಸಿಗರಿಗೆ ಭಾರತದ ಸ್ಥಳೀಯ ಕರಕುಶಲತೆಯನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಒದಗಿಸುತ್ತವೆ. ಇವುಗಳಲ್ಲಿ ಅಸ್ಸಾಂನ ಸಾಂಪ್ರದಾಯಿಕ ಮುಖವಾಡ ತಯಾರಿಕೆ, ಬಿಹಾರದ ಮಧುಬನಿ ಚಿತ್ರಕಲೆ ಮತ್ತು ಸಿಕ್ಕಿ ಕರಕುಶಲ ವಸ್ತುಗಳು, ಗುಜರಾತ್ನ ರೋಗನ್ ಕಲೆ ಮತ್ತು ಸಾಂಪ್ರದಾಯಿಕ ವರ್ಣಚಿತ್ರಗಳು, ಛತ್ತೀಸ್ಗಢದ ಬಿದಿರಿನ ಕಲೆ, ಕೇರಳದ ತೆಂಗಿನ ನಾರು-ಉತ್ಪನ್ನ ತಯಾರಿಕೆ, ಒಡಿಶಾದ ಪಟ್ಟಚಿತ್ರ ಚಿತ್ರಕಲೆ ಮತ್ತು ಬೆಳ್ಳಿ ಫಿಲಿಗ್ರೀ, ಉತ್ತರಾಖಂಡದ ಐಪಾನ್ ಚಿತ್ರಕಲೆ ಮತ್ತು ರಿಂಗಾಲ್ ಬುಟ್ಟಿ ನೇಯ್ಗೆ ಹಾಗು ಜಮ್ಮು ಮತ್ತು ಕಾಶ್ಮೀರದ ಸೋಜ್ನಿ ಕಲೆ ಸೇರಿವೆ. ಈ ಪ್ರದರ್ಶನಗಳು ಭೇಟಿ ನೀಡುವವರಿಗೆ ಕುಶಲಕರ್ಮಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾದ ಸಾಂಪ್ರದಾಯಿಕ ಕಲಾ ಪ್ರಕಾರಗಳು, ತಂತ್ರಗಳು ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಪರಿಚಯಿಸಲು ಒಂದು ವೇದಿಕೆಯನ್ನು ಒದಗಿಸುತ್ತವೆ.

ಈ ಉತ್ಸವದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವೈವಿಧ್ಯಮಯ ಜಾನಪದ ಹಾಗೂ ಶಾಸ್ತ್ರೀಯ ಪರಂಪರೆಗಳನ್ನು ಬಿಂಬಿಸುವ ಸಾಂಸ್ಕೃತಿಕ ಪ್ರದರ್ಶನಗಳ ಅದ್ಭುತ ಸರಣಿಯೇ ಇದೆ. ಇಲ್ಲಿಗೆ ಬರುವ ಸಂದರ್ಶಕರು ಆಂಧ್ರಪ್ರದೇಶದ ಕೂಚಿಪುಡಿ, ಅಸ್ಸಾಂನ ಬಿಹು ಮತ್ತು ಇತರ ಜಾನಪದ ನೃತ್ಯಗಳು, ಗುಜರಾತ್ನ ಗರ್ಬಾ, ಹರಿಯಾಣದ ಸಾಂಪ್ರದಾಯಿಕ ಜಾನಪದ ಪ್ರದರ್ಶನಗಳು, ಕೇರಳದ ತೋಲ್ಪಾವಕೂತ್ತು, ರಾಜಸ್ಥಾನದ ರಾವಣಹತ್ತ (ವಾದ್ಯ ಸಂಗೀತ), ತಮಿಳುನಾಡಿನ ಸಾಂಪ್ರದಾಯಿಕ ನೃತ್ಯ ಪ್ರಕಾರಗಳು, ಜಮ್ಮು ಮತ್ತು ಕಾಶ್ಮೀರದ ಸಂತೂರ್ ವಾದನ, ಹಾಗೂ ಪಶ್ಚಿಮ ಬಂಗಾಳದ ಬೌಲ್ ಜಾನಪದ ಸಂಗೀತ ಮತ್ತು ಪುರುಲಿಯಾ ಛೌ ನೃತ್ಯ ಸೇರಿದಂತೆ ಇನ್ನೂ ಅನೇಕ ಪ್ರಾದೇಶಿಕ ಕಲಾ ಪ್ರಕಾರಗಳನ್ನು ಕಣ್ತುಂಬಿಕೊಳ್ಳಬಹುದು. ಈ ಸಾಂಸ್ಕೃತಿಕ ಪ್ರಸ್ತುತಿಗಳು ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾದ ಸಂಗೀತ, ನೃತ್ಯ ಮತ್ತು ಕಲಾತ್ಮಕ ಸಂಪ್ರದಾಯಗಳಿಗೆ ಜೀವ ತುಂಬುತ್ತವೆ.

23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಖಾದ್ಯಗಳು ಹಾಗೂ ಸಾಂಪ್ರದಾಯಿಕ ತಿನಿಸುಗಳನ್ನು ಒಳಗೊಂಡಿರುವ 'ಫುಡ್ ಕೋರ್ಟ್' (ಆಹಾರ ವಿಭಾಗ) ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಇದು ಸಂದರ್ಶಕರಿಗೆ ಭಾರತದ ವೈವಿಧ್ಯಮಯ ಪಾಕಪದ್ಧತಿಯ ಪರಂಪರೆಯನ್ನು ಅನುಭವಿಸಲು ಅವಕಾಶ ಕಲ್ಪಿಸುತ್ತದೆ. 'ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ಮೆಂಟ್ ಅಂಡ್ ಕೇಟರಿಂಗ್ ಟೆಕ್ನಾಲಜಿ' (NCHMCT) ನಿರ್ವಹಿಸುವ ವಿಶೇಷ 'ಸ್ಟುಡಿಯೋ ಕಿಚನ್', ಪ್ರಾದೇಶಿಕ ಅಡುಗೆ ಪದ್ಧತಿಗಳು ಮತ್ತು ಸಾಂಪ್ರದಾಯಿಕ ಆಹಾರ ತಯಾರಿಕೆಯ ವಿಧಾನಗಳನ್ನು ಪ್ರದರ್ಶಿಸುವ ಮೂಲಕ ಈ ಅನುಭವವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತದೆ. ಅಲ್ಲದೆ, ಪ್ರತಿದಿನ ಸಂಜೆ 5:00 ರಿಂದ ರಾತ್ರಿ 8:00 ರವರೆಗೆ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದರಲ್ಲಿ ಪ್ರತಿದಿನ 10 ರಾಜ್ಯಗಳ ಕಲಾವಿದರು ಭಾಗವಹಿಸಿ, ಪ್ರಾದೇಶಿಕ ಖಾದ್ಯಗಳು, ಸಂಗೀತ ಮತ್ತು ನೃತ್ಯಗಳನ್ನು ಒಗ್ಗೂಡಿಸುವ ಮೂಲಕ ಒಂದು ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತಾರೆ.


ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವುದರ ಜೊತೆಗೆ, ಭಾರತ್ ಪರ್ವ್ ಪ್ರಾದೇಶಿಕ ಉತ್ಪನ್ನಗಳನ್ನು ಪ್ರದರ್ಶಿಸಲು, ಸ್ಥಳೀಯ ಕಲಾ ಪ್ರಕಾರಗಳನ್ನು ಉತ್ತೇಜಿಸಲು ಮತ್ತು ಸಾಂಪ್ರದಾಯಿಕ ಕಲಾವಿದರು, ಕರಕುಶಲಕರ್ಮಿಗಳು ಮತ್ತು ಪ್ರದರ್ಶನ ಕಲಾವಿದರನ್ನು ದೇಶದ ವಿವಿಧ ಭಾಗಗಳ ಪ್ರೇಕ್ಷಕರಿಗೆ ಹತ್ತಿರ ತರಲು ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ. ಪ್ರವಾಸೋದ್ಯಮ ಅನುಭವಗಳನ್ನು ಶ್ರೀಮಂತಗೊಳಿಸುವಲ್ಲಿ ಮತ್ತು ವಿವಿಧ ಪ್ರದೇಶಗಳ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಪ್ರದರ್ಶಿಸುವಲ್ಲಿ ಸ್ಥಳೀಯ ಸಂಪ್ರದಾಯಗಳು, ಕರಕುಶಲ ವಸ್ತುಗಳು ಮತ್ತು ಪಾಕಪದ್ಧತಿಯ ಪಾತ್ರವನ್ನು ಈ ಉತ್ಸವವು ಎತ್ತಿ ತೋರಿಸುತ್ತದೆ.
ಭಾರತ್ ಪರ್ವ್ 2026 ಸಾಂಸ್ಕೃತಿಕ ವಿನಿಮಯವನ್ನು ಬೆಳೆಸುವ ಮೂಲಕ, ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವ ಮೂಲಕ ಮತ್ತು ವೈವಿಧ್ಯತೆಯಲ್ಲಿ ಭಾರತದ ಏಕತೆಯನ್ನು ಆಚರಿಸುವ ಮೂಲಕ 'ಏಕ್ ಭಾರತ್ ಶ್ರೇಷ್ಠ ಭಾರತ್' ನ ಉತ್ಸಾಹವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ಈ ಉತ್ಸವವು ಗುಜರಾತ್ನ ಏಕ್ತಾ ನಗರದಲ್ಲಿ 2026 ನವೆಂಬರ್ 15 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ.
*****