ಪ್ರಕಟಣಾ ದಿನಾಂಕ:
08 NOV 2026 2:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ಬಸ್ತಾರ್ ನ ಕರಣ್ ಪುರದಲ್ಲಿರುವ 'ಕೋಬ್ರಾ' (ದೃಢವಾದ ಕ್ರಮಕ್ಕಾಗಿ ಕಮಾಂಡೋ ಬೆಟಾಲಿಯನ್ - CoBRA) ಕಾರ್ಯಾಚರಣೆ ನೆಲೆಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದರು ಮತ್ತು ಹಬ್ಬದ ಅಂಗವಾಗಿ ಸಿಹಿ ಹಂಚಿದರು.
ದೇಶವನ್ನು ರಕ್ಷಿಸುವವರೊಂದಿಗೆ ದೀಪಾವಳಿ ಆಚರಣೆಯು ಇನ್ನಷ್ಟು ಮಧುರವಾಗಿರಲಿದೆ ಎಂದು ಹೇಳುತ್ತಾ, ಪ್ರಧಾನಮಂತ್ರಿಯವರು ಹಬ್ಬದ ಸಂಭ್ರಮಾಚರಣೆಯ ಕೆಲವು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ:
“ನಮ್ಮನ್ನು ರಕ್ಷಿಸುವವರೊಂದಿಗೆ ದೀಪಾವಳಿ ಆಚರಣೆಯು ಇನ್ನಷ್ಟು ಸಿಹಿಯಾಗಿರಲಿದೆ!
#Bastar #NaxalFreeIndia”
*****