ಸಂಪುಟ
azadi ka amrit mahotsav

ಲಿಥಿಯಂ ಮತ್ತು ನಿಕ್ಕಲ್ ಸಂಸ್ಕರಣೆಗಾಗಿ 2,814 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಣಾಯಕ ಖನಿಜ ಸಂಸ್ಕರಣೆಯನ್ನು ಉತ್ತೇಜಿಸಲು ಕ್ಯಾಪೆಕ್ಸ್ ಬೆಂಬಲ ಯೋಜನೆಗೆ ಸಂಪುಟದ ಅನುಮೋದನೆ


ಪ್ರಕಟಣಾ ದಿನಾಂಕ: 04 NOV 2026 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಐದು ವರ್ಷಗಳ ಅವಧಿಯಲ್ಲಿ 2,814 ಕೋಟಿ ರೂ.ಗಳ ಆರ್ಥಿಕ ವೆಚ್ಚದೊಂದಿಗೆ 'ನಿರ್ಣಾಯಕ ಖನಿಜ ಸಂಸ್ಕರಣೆಯನ್ನು ಉತ್ತೇಜಿಸಲು ಬಂಡವಾಳ ವೆಚ್ಚ ಬೆಂಬಲ ಯೋಜನೆ'ಗೆ ಅನುಮೋದನೆ ನೀಡಿದೆ.

ನಿರ್ಣಾಯಕ ಖನಿಜಗಳ ಸಂಸ್ಕರಣೆಯು ಭೌಗೋಳಿಕವಾಗಿ ಕೆಲವೇ ಜಾಗತಿಕ ಸ್ಥಳಗಳಲ್ಲಿ ಕೇಂದ್ರೀಕೃತವಾಗಿದೆ. ಇದು ಪೂರೈಕೆ ಸರಪಳಿಗಳನ್ನು ಭೌಗೋಳಿಕ ರಾಜಕೀಯ ಅಡೆತಡೆಗಳು, ಬೆಲೆ ಚಂಚಲತೆ ಮತ್ತು ಸಂಭಾವ್ಯ ಪೂರೈಕೆ ನಿರ್ಬಂಧಗಳಿಗೆ ಒಡ್ಡುತ್ತದೆ, ಪೂರೈಕೆ ಸರಪಳಿಯ ಸದೃಢತೆ ಮತ್ತು ಆರ್ಥಿಕ ಭದ್ರತೆಗೆ ತೀವ್ರ ಅಪಾಯಗಳನ್ನು ಒಡ್ಡುತ್ತದೆ. ಇದು ರಾಷ್ಟ್ರೀಯ ಭದ್ರತೆ, ಆರ್ಥಿಕ ಸಾರ್ವಭೌಮತ್ವ ಮತ್ತು ಇಂಗಾಲ ಮುಕ್ತೀಕರಣ (ಡಿಕಾರ್ಬನೈಸೇಷನ್‌) ಗುರಿಗಳ ಸಮಯೋಚಿತ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆ.

ಪ್ರಸ್ತುತ, ಲಿಥಿಯಂ, ನಿಕಲ್, ಕೋಬಾಲ್ಟ್ ಸೇರಿದಂತೆ ನಿರ್ಣಾಯಕ ಖನಿಜಗಳಿಗೆ ದೇಶೀಯ ಲಾಭ ಮತ್ತು ಸಂಸ್ಕರಣಾ ಮೂಲಸೌಕರ್ಯದ ಆರಂಭಿಕ ಹಂತದಿಂದಾಗಿ ಭಾರತವು ಸಂಸ್ಕರಿಸಿದ ಮಧ್ಯವರ್ತಿಗಳು ಮತ್ತು ಹೆಚ್ಚಿನ-ಶುದ್ಧತೆಯ ವಸ್ತುಗಳ ಆಮದುಗಳ ಮೇಲೆ ಗಣನೀಯವಾಗಿ ಅವಲಂಬಿತವಾಗಿದೆ. ನಿರ್ಣಾಯಕ ಖನಿಜಗಳ ದೇಶೀಯ ಸಂಸ್ಕರಣಾ ಸಾಮರ್ಥ್ಯವು ಸೀಮಿತವಾಗಿಯೇ ಉಳಿದಿದೆ. ವಾಣಿಜ್ಯ-ಮಟ್ಟದ ಯೋಜನೆಗಳು ಹೆಚ್ಚಿನ ಬಂಡವಾಳದ ಅಗತ್ಯತೆಗಳು, ಸೂಕ್ತವಾದ ತಂತ್ರಜ್ಞಾನಗಳ ಸೀಮಿತ ಲಭ್ಯತೆ ಮತ್ತು ಕಚ್ಚಾ ವಸ್ತುಗಳ ನಿರ್ಬಂಧಿತ ಲಭ್ಯತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿವೆ. ಮೌಲ್ಯವರ್ಧನೆಯನ್ನು ಗರಿಷ್ಠಗೊಳಿಸಲು, ಆಮದು ಪರ್ಯಾಯವನ್ನು ಸಾಧಿಸಲು ಮತ್ತು ಸಮಗ್ರ ಮೌಲ್ಯ ಸರಪಳಿಗಳನ್ನು ಸ್ಥಾಪಿಸಲು ದೇಶೀಯ ಸಂಸ್ಕರಣಾ ಸಾಮರ್ಥ್ಯವು ಅತ್ಯಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ದೇಶೀಯ ಸಂಸ್ಕರಣಾ ಸೌಲಭ್ಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಉದ್ದೇಶಿತ ಬಂಡವಾಳ ವೆಚ್ಚದ ಬೆಂಬಲವನ್ನು ಒದಗಿಸಲು "ನಿರ್ಣಾಯಕ ಖನಿಜ ಸಂಸ್ಕರಣೆಯನ್ನು ಉತ್ತೇಜಿಸಲು ಕ್ಯಾಪೆಕ್ಸ್ ಬೆಂಬಲ ಯೋಜನೆ" ಯನ್ನು ರೂಪಿಸಲಾಗಿದೆ. ಈ ಯೋಜನೆಯು ದೇಶದೊಳಗೆ ಮೌಲ್ಯವರ್ಧನೆಯನ್ನು ಬೆಂಬಲಿಸಲು, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಮೌಲ್ಯ ಸರಪಳಿಯನ್ನು ಸುಧಾರಿಸಲು ಭಾರತದಲ್ಲಿ ದೇಶೀಯ ಸಂಸ್ಕರಣಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಲಿಥಿಯಂ ಮತ್ತು ನಿಕ್ಕಲ್ ಅದಿರುಗಳು/ಮಧ್ಯವರ್ತಿ ಉತ್ಪನ್ನಗಳನ್ನು ಹೆಚ್ಚಿನ ಶುದ್ಧತೆಯ ಸಂಯುಕ್ತಗಳಾಗಿ ಸಂಸ್ಕರಿಸುವ ಗುರಿಯನ್ನು ಹೊಂದಿದೆ. ಕೋಬಾಲ್ಟ್ ಅನ್ನು ನಿಕ್ಕಲ್ ಉತ್ಪಾದನೆಯ ಉಪ-ಉತ್ಪನ್ನವಾಗಿ ಮರುಪಡೆಯುವ ನಿರೀಕ್ಷೆಯಿದೆ. ಇದು ಎಲೆಕ್ಟ್ರಿಕ್ ಮೊಬಿಲಿಟಿ, ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬಿಇಎಸ್ಎಸ್), ಎಲೆಕ್ಟ್ರಾನಿಕ್ಸ್, ರಕ್ಷಣೆ, ವಿಶೇಷ ಉಕ್ಕು ಮುಂತಾದ ನಿರ್ಣಾಯಕ ಕ್ಷೇತ್ರಗಳನ್ನು ಬೆಂಬಲಿಸುತ್ತದೆ.

ಪ್ರಸ್ತಾವಿತ ಯೋಜನೆಗೆ ಒಟ್ಟು 2,814 ಕೋಟಿ ರೂ.ಗಳ ಹಣಕಾಸು ವೆಚ್ಚವನ್ನು ಅಂದಾಜಿಸಲಾಗಿದೆ. ಯೋಜನೆಯ ಅವಧಿಯು 2026-27 ರಿಂದ 2030-31 ರವರೆಗೆ ಇರುತ್ತದೆ. ಯೋಜನೆಯಡಿಯಲ್ಲಿ, ನಾಲ್ಕು ನಿರ್ಣಾಯಕ ಖನಿಜ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅರ್ಹ ಹೂಡಿಕೆಯ ಶೇ.30 ರಷ್ಟು ಬಂಡವಾಳ ಸಬ್ಸಿಡಿಯನ್ನು ಒದಗಿಸಲಾಗುವುದು. ಇದರಲ್ಲಿ ಎರಡು ಲಿಥಿಯಂ ಸಂಸ್ಕರಣಾ ಘಟಕಗಳು (ತಲಾ ಕನಿಷ್ಠ 30 ಕೆಟಿ ಸಾಮರ್ಥ್ಯದೊಂದಿಗೆ) ಮತ್ತು ಎರಡು ನಿಕ್ಕಲ್ ಸಂಸ್ಕರಣಾ ಘಟಕಗಳು (ತಲಾ ಕನಿಷ್ಠ 50 ಕೆಟಿ ಸಾಮರ್ಥ್ಯದೊಂದಿಗೆ) ಸೇರಿವೆ. ಗರಿಷ್ಠ ಬಂಡವಾಳ ಬೆಂಬಲವನ್ನು ಪ್ರತಿ ಲಿಥಿಯಂ ಫಲಾನುಭವಿಗೆ ಕ್ರಮವಾಗಿ 500 ಕೋಟಿ ರೂ.ಗಳಿಗೆ ಮತ್ತು ಪ್ರತಿ ನಿಕ್ಕಲ್ ಫಲಾನುಭವಿಗೆ 900 ಕೋಟಿ ರೂ.ಗಳಿಗೆ ಮಿತಿಗೊಳಿಸಲಾಗುವುದು.

ಫಲಾನುಭವಿಗಳ ಆಯ್ಕೆಯನ್ನು ಎರಡು ಹಂತದ ಪ್ರಕ್ರಿಯೆಯ ಮೂಲಕ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ, ಅರ್ಜಿಗಳನ್ನು ತಾಂತ್ರಿಕ ಅರ್ಹತೆಗಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ತಾಂತ್ರಿಕವಾಗಿ ಅರ್ಹ ಅರ್ಜಿದಾರರು ಮಾತ್ರ ಎರಡನೇ ಹಂತದ ಹಣಕಾಸು ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ತಿಯೊಂದು ಖನಿಜಕ್ಕೂ, ಕನಿಷ್ಠ ವೆಚ್ಚದ ಮಾನದಂಡದ ಆಧಾರದ ಮೇಲೆ ಅಂದರೆ, ಯೋಜನೆಯಡಿಯಲ್ಲಿ ಬಿಡ್ದಾರರು ಕೋರಿದ ಕಡಿಮೆ ಕ್ಯಾಪೆಕ್ಸ್ ಬೆಂಬಲದ ಆಧಾರದ ಮೇಲೆ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಿರ್ದಿಷ್ಟ ಮೈಲುಗಲ್ಲುಗಳ ಸಾಧನೆಗೆ ಸಂಬಂಧಿಸಿದ ಮೂರು ಕಂತುಗಳಲ್ಲಿ ಪ್ರೋತ್ಸಾಹಕಗಳನ್ನು ವಿತರಿಸಲಾಗುತ್ತದೆ.

ಸದೃಢ ದೇಶೀಯ ಸಂಸ್ಕರಣಾ ಮೂಲಸೌಕರ್ಯದ ಅಭಿವೃದ್ಧಿಯನ್ನು ಬೆಂಬಲಿಸುವ ಮೂಲಕ ಮತ್ತು ನಿರ್ಣಾಯಕ ಖನಿಜ ಮೌಲ್ಯ ಸರಪಳಿಯಲ್ಲಿ ಭಾರತದ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ ಆತ್ಮನಿರ್ಭರ ಭಾರತದ ಉದ್ದೇಶಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಈ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.

 

*****


(ಪ್ರಕಟಣೆ ಐ.ಡಿ.: 2332511) ವಿಸಿಟರ್ ಕೌಂಟರ್ : 18