ಜಲ ಶಕ್ತಿ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ ಗಂಗಾ ಪ್ರವಾಹ ನಿಯಂತ್ರಣ ಮಂಡಳಿಯ 19ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರು ವಹಿಸಿದರು 

ಪ್ರಕಟಣಾ ದಿನಾಂಕ: 29 OCT 2026 12:53PM by PIB Bengaluru

ಗಂಗಾ ಪ್ರವಾಹ ನಿಯಂತ್ರಣ ಮಂಡಳಿಯ (ಜಿ.ಎಫ್‌.ಸಿ.ಬಿ.) 19ನೇ ಸಭೆಯು ಅಕ್ಟೋಬರ್ 27, 2026 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ; ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮ್ ನಾಥ್ ಠಾಕೂರ್; ನೀತಿ ಆಯೋಗದ ಸದಸ್ಯರಾದ ಪ್ರೊ. ಕೆ.ವಿ. ರಾಜು; ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಹಾರ ಸರ್ಕಾರದ ಜಲಸಂಪನ್ಮೂಲ ಸಚಿವರಾದ ಶ್ರೀ ವಿಜಯ್ ಕುಮಾರ್ ಚೌಧರಿ; ಉತ್ತರ ಪ್ರದೇಶ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಸ್ವತಂತ್ರ ದೇವ್ ಸಿಂಗ್; ಗಂಗಾ ಜಲಾನಯನ ರಾಜ್ಯಗಳ ಪ್ರತಿನಿಧಿಗಳು; ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು; ಮತ್ತು ಸಂಬಂಧಪಟ್ಟ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು.

ಗಂಗಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹ, ಸವೆತ ಮತ್ತು ಒಳಚರಂಡಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳ ಸಂಘಟಿತ ಯೋಜನೆ ಮತ್ತು ಅನುಷ್ಠಾನವನ್ನು ಸುಗಮಗೊಳಿಸಲು ಭಾರತ ಸರ್ಕಾರವು ಏಪ್ರಿಲ್ 18, 1972 ರಂದು ಗಂಗಾ ಪ್ರವಾಹ ನಿಯಂತ್ರಣ ಮಂಡಳಿ (ಜಿ.ಎಫ್.ಸಿ.ಬಿ.) ಅನ್ನು ರಚಿಸಲಾಯಿತು. ಈ ಮಂಡಳಿಯು ಕೇಂದ್ರ ಜಲಶಕ್ತಿ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಹಾಗೂ ಸಂಬಂಧಪಟ್ಟ ಇತರೇ ಕೇಂದ್ರ ಸಚಿವಾಲಯಗಳು ಮತ್ತು ಗಂಗಾ ನದಿ ಜಲಾನಯನ ರಾಜ್ಯಗಳ ಮುಖ್ಯಮಂತ್ರಿಗಳು ಅಥವಾ ಅವರ ಪ್ರತಿನಿಧಿಗಳನ್ನು ಕೂಡಾ ಒಳಗೊಂಡಿರುತ್ತದೆ, ಗಂಗಾ ಪ್ರವಾಹ ನಿಯಂತ್ರಣ ಆಯೋಗದ (ಜಿ.ಎಫ್‌.ಸಿ.ಸಿ.) ಅಧ್ಯಕ್ಷರು ಅದರ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾರೆ. ಇದು ಗಂಗಾ ನದಿ ಜಲಾನಯನ ಪ್ರದೇಶದಾದ್ಯಂತ ಕೇಂದ್ರ-ರಾಜ್ಯ ಸಹಕಾರ ಮತ್ತು ಸಂಘಟಿತ ಪ್ರವಾಹ ನಿರ್ವಹಣೆಯನ್ನು ಬಲಪಡಿಸಲು ಉನ್ನತ ಮಟ್ಟದ ಸಾಂಸ್ಥಿಕ ವೇದಿಕೆಯನ್ನು ಒದಗಿಸುತ್ತದೆ. ನಡೆಯುತ್ತಿರುವ ಉಪಕ್ರಮಗಳನ್ನು ಪರಿಶೀಲಿಸಲು, ಅಂತರರಾಜ್ಯ ಸಮನ್ವಯವನ್ನು ಬಲಪಡಿಸಲು ಮತ್ತು ಪರಿಣಾಮಕಾರಿ ಪ್ರವಾಹ ನಿರ್ವಹಣೆಗಾಗಿ ಉದಯೋನ್ಮುಖ ವಿಧಾನಗಳ ಕುರಿತು ಚರ್ಚಿಸಲು ಸಭೆಯು ಅವಕಾಶವನ್ನು ಒದಗಿಸಿತು.

ಸಭೆಯ ಸಂದರ್ಭದಲ್ಲಿ, ಕೇಂದ್ರ ಜಲಶಕ್ತಿ ಸಚಿವರು ಭಾಸ್ಕರಾಚಾರ್ಯ ರಾಷ್ಟ್ರೀಯ ಬಾಹ್ಯಾಕಾಶ ಅನ್ವಯಿಕೆಗಳು ಮತ್ತು ಜಿಯೋ-ಇನ್ಫರ್ಮ್ಯಾಟಿಕ್ಸ್ ರಾಷ್ಟ್ರೀಯ ಜಲ ಮಿಷನ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಪುನಾಹ ಭರಣ್ ಮೊಬೈಲ್ ಅಪ್ಲಿಕೇಶನ್ ಅನ್ನು ಚಾಲನೆಗೊಳಿಸಿದರು. ಕೃತಕ ಅಂತರ್ಜಲ ಪುನರ್ಭರ್ತಿ ಮಧ್ಯಸ್ಥಿಕೆಗಳಿಗೆ ಸೂಕ್ತವಾದ ಸ್ಥಳಗಳ ವೈಜ್ಞಾನಿಕ ಗುರುತಿಸುವಿಕೆಯನ್ನು ಸುಗಮಗೊಳಿಸುವ ಗುರಿಯನ್ನು ಈ ಅಪ್ಲಿಕೇಶನ್ ಹೊಂದಿದೆ.

ಗಂಗಾ ಪ್ರವಾಹ ನಿಯಂತ್ರಣ ಆಯೋಗದ (ಜಿ.ಎಫ್‌.ಸಿ.ಬಸಿ.) ಪರಿಷ್ಕೃತ ಆದೇಶ ಮತ್ತು ಪುನರ್ರಚನೆಯ ಕುರಿತು ಮಂಡಳಿಯು ಚರ್ಚಿಸಿತು, ಇದರಲ್ಲಿ ಜಲಾನಯನ ಮಟ್ಟದ ಪ್ರವಾಹ ನಿರ್ವಹಣಾ ಯೋಜನೆಯನ್ನು ಬಲಪಡಿಸುವುದು, ಪ್ರವಾಹ ನಿರ್ವಹಣಾ ಯೋಜನೆಗಳ ಮೌಲ್ಯಮಾಪನ, ನದಿ ರೂಪವಿಜ್ಞಾನ ಮತ್ತು ಸೆಡಿಮೆಂಟೇಶನ್ ಅಧ್ಯಯನಗಳು ಮತ್ತು ಪ್ರವಾಹ ನಿರ್ವಹಣಾ ಮಾಹಿತಿ ವ್ಯವಸ್ಥೆಯ (ಎಫ್.‌ ಎಂ. ಐ.ಎಸ್.) ಅಭಿವೃದ್ಧಿ ಸೇರಿವೆ. ಪರಿಷ್ಕೃತ ಸಾಂಸ್ಥಿಕ ವ್ಯವಸ್ಥೆಗಳು ಸಮನ್ವಯ, ತಾಂತ್ರಿಕ ಮೌಲ್ಯಮಾಪನ ಮತ್ತು ಸಕಾಲಿಕ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸುವ ನಿರೀಕ್ಷೆಯಿದೆ.

ಅಪಾಯ ಆಧಾರಿತ ಜಲಾನಯನ ಮಾಸ್ಟರ್ ಪ್ಲಾನ್ ಗಳನ್ನು ಸಿದ್ಧಪಡಿಸುವುದು, ಸೇತುವೆಗಳ ಕೆಳಗೆ ಜಲಮಾರ್ಗಗಳು ಮತ್ತು ದ್ವಾರಗಳ ಸಮರ್ಪಕತೆಯ ಮೌಲ್ಯಮಾಪನ, ವಿವರವಾದ ಯೋಜನಾ ವರದಿಗಳ (ಡಿಪಿಆರ್) ಗುಣಮಟ್ಟವನ್ನು ಸುಧಾರಿಸುವುದು, ಪ್ರವಾಹ ನಿರ್ವಹಣಾ ಯೋಜನೆಗಳ ಸಕಾಲಿಕ ಅನುಷ್ಠಾನ ಮತ್ತು ಪ್ರವಾಹ ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅನ್ವಯದ ಮೇಲೆ ಚರ್ಚೆಗಳು ಕೇಂದ್ರೀಕರಿಸಿದವು.

ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರ ನಡುವೆ ಸಮನ್ವಯವನ್ನು ಬಲಪಡಿಸುವ ಬಗ್ಗೆ, ವಿಶೇಷವಾಗಿ ನದಿ ರೂಪವಿಜ್ಞಾನ, ಒಳಚರಂಡಿ ದಟ್ಟಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಹ ಸ್ಥಿತಿಸ್ಥಾಪಕತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಒತ್ತು ನೀಡಲಾಯಿತು. ಆಧುನಿಕ ಸಮೀಕ್ಷಾ ತಂತ್ರಗಳು, ಉತ್ತಮ ತಾಂತ್ರಿಕ ತನಿಖೆಗಳು, ಸೂಕ್ತವಾದ ಶಾಸನಬದ್ಧ ಅನುಮತಿಗಳು ಮತ್ತು ಯೋಜನೆಯ ಅನುಷ್ಠಾನದ ಅಡಚಣೆಗಳ ಸಕಾಲಿಕ ಪರಿಹಾರದ ಮಹತ್ವವನ್ನು ಸಹೀ ಸಭೆಯಲ್ಲಿ ಉಲ್ಲೇಖಿಸಲಾಯಿತು.

ಪ್ರವಾಹ ನಿರ್ವಹಣೆಗೆ ಸಮಗ್ರ, ಅಪಾಯ-ಮಾಹಿತಿ ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸಿದ ವಿಧಾನದ ಮಹತ್ವವನ್ನು ಸಭೆಯು ಪುನರುಚ್ಚರಿಸಿತು, ಇದಕ್ಕೆ ಪರಿಣಾಮಕಾರಿ ಕೇಂದ್ರ-ರಾಜ್ಯ ಸಹಕಾರ, ಸುಧಾರಿತ ತಾಂತ್ರಿಕ ಮಾನದಂಡಗಳು ಮತ್ತು ಗಂಗಾ ಜಲಾನಯನ ಪ್ರದೇಶದಾದ್ಯಂತ ಪ್ರವಾಹ ನಿರ್ವಹಣಾ ಕ್ರಮಗಳ ಸಂಘಟಿತ ಅನುಷ್ಠಾನದ ಬೆಂಬಲವಿದೆ. 

 

*****


(ಪ್ರಕಟಣೆ ಐ.ಡಿ.: 2330339) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Odia , Tamil