ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಅಕ್ಟೋಬರ್ 2026ರ ವೇಳೆಗೆ 5.5 ಲಕ್ಷ ಎಂಟಿಪಿಎ ಮೀರಿದ ಹಸಿರು ಜಲಜನಕ ಖರೀದಿ ಬದ್ಧತೆಗಳೊಂದಿಗೆ ಜಾಗತಿಕ ಮಟ್ಟದಲ್ಲಿ ಮುಂಚೂಣಿ ತಲುಪಿದ ಭಾರತ


2026ರಲ್ಲಿ ಭಾರತೀಯ ಕಂಪನಿಗಳಿಂದ 4 ಲಕ್ಷ ಎಂಟಿಪಿಎಗೂ ಅಧಿಕ ಹಸಿರು ಜಲಜನಕ ಖರೀದಿಗೆ ಸಂಬಂಧಿಸಿದ 18 ಹೊಸ ಒಪ್ಪಂದಗಳಿಗೆ ಸಹಿ

ಪ್ರಕಟಣಾ ದಿನಾಂಕ: 29 OCT 2026 12:54PM by PIB Bengaluru
  • ಅಕ್ಟೋಬರ್ 2026ರ ವೇಳೆಗೆ, ಭಾರತೀಯ ಕಂಪನಿಗಳು ಒಟ್ಟು 5.5 ಲಕ್ಷ MTPAಗಿಂತಲೂ ಅಧಿಕ ಹಸಿರು ಹೈಡ್ರೋಜನ್ ಖರೀದಿ ಬದ್ಧತೆಗಳಿಗೆ ಸಹಿ ಹಾಕಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣವಾಗಿದೆ. ಇದರೊಂದಿಗೆ ಹಸಿರು ಹೈಡ್ರೋಜನ್ ಪೂರೈಕೆ ಬದ್ಧತೆಗಳಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.
  • 2026ರಲ್ಲಿ ಭಾರತೀಯ ಕಂಪನಿಗಳು 4 ಲಕ್ಷ MTPAಗಿಂತ ಹೆಚ್ಚಿನ ಹಸಿರು ಹೈಡ್ರೋಜನ್ ಸಮತೂಕ ಪ್ರಮಾಣದ ಪೂರೈಕೆಗಾಗಿ 18 ಹೊಸ ಆಫ್ಟೇಕ್ ಒಪ್ಪಂದಗಳಿಗೆ ಸಹಿ ಹಾಕಿವೆ.
  • 2023ರಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಆರಂಭವಾದ ನಂತರ, ಒಟ್ಟು 5.5 ಲಕ್ಷ MTPAದಷ್ಟು ಹಸಿರು ಹೈಡ್ರೋಜನ್ ಸಮಾನ ಪ್ರಮಾಣವನ್ನು ಒಳಗೊಂಡ 23 ಆಫ್ಟೇಕ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅದರಲ್ಲಿ ಶೇ.70ಕ್ಕಿಂತ ಹೆಚ್ಚಿನ ಪ್ರಮಾಣವನ್ನು ರಫ್ತಿಗಾಗಿ ಮೀಸಲಿಡಲಾಗಿದೆ.
  • ಈ ಹಸಿರು ಹೈಡ್ರೋಜನ್ ಯೋಜನೆಗಳು ಒಟ್ಟು ಸುಮಾರು ₹90,000 ಕೋಟಿ (ಅಂದಾಜು 9.5 ಬಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ.
  • ಭಾರತೀಯ ಪೂರೈಕೆದಾರರು ಹಸಿರು ಅಮೋನಿಯಾ ಮತ್ತು ಹಸಿರು ಮೆಥನಾಲ್‌ಗೆ ವಿಶ್ವದಲ್ಲೇ ಅತ್ಯಂತ ಸ್ಪರ್ಧಾತ್ಮಕ ಬೆಲೆಗಳನ್ನು ನೀಡುತ್ತಿದ್ದಾರೆ. ಇದರಿಂದ ಯುರೋಪ್ ಮತ್ತು ಜಪಾನ್ ಮಾರುಕಟ್ಟೆಗಳಲ್ಲಿ ಭಾರತದ ಮುಂಚೂಣಿ ಸ್ಥಾನ ಮತ್ತಷ್ಟು ಬಲಪಡಿಸುತ್ತದೆ.
  • ಜಾಗತಿಕ ಮತ್ತು ಮಿಥೆನಾಲ್ ನೌಕಾಯಾನ ಕ್ಷೇತ್ರದಲ್ಲಿ ಹಡಗುಗಳಿಗೆ ಇಂಧನ ತುಂಬಿಸಲು ಹಸಿರು ಅಮೋನಿಯಾ ಸ್ವಚ್ಛ ಬಂಕರ್ ಇಂಧನವಾಗಿ ಕ್ರಮೇಣ ಬಳಕೆಗೆ ಬರುತ್ತಿದೆ.
  • ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಮೋನಿಯಾ ಸಹ-ಉರಿಯುವಿಕೆಗಾಗಿ ಹಸಿರು ಅಮೋನಿಯಾವನ್ನು ಸಹ ನಿಯೋಜಿಸಲಾಗುತ್ತಿದೆ.
  • ಕೈಗಾರಿಕಾ ವಲಯದಲ್ಲಿ ಕಾರ್ಬನ್ ಹೊರಸೂಸುವುದನ್ನು ಕಡಿಮೆ ಮಾಡುವ ಉದ್ದೇಶದಿಂದ, ವಿಶ್ವದಾದ್ಯಂತ ರಸಗೊಬ್ಬರ ಉತ್ಪಾದನೆ ಮತ್ತು ತೈಲ ಶುದ್ಧೀಕರಣ ಕ್ಷೇತ್ರಗಳಲ್ಲಿ ಹಸಿರು ಹೈಡ್ರೋಜನ್‌ನಿಂದ ತಯಾರಾಗುವ ಉತ್ಪನ್ನಗಳ ಬಳಕೆ ಹೆಚ್ಚುತ್ತಿದೆ.

ಅಕ್ಟೋಬರ್ 2026ರ ವೇಳೆಗೆ ಭಾರತೀಯ ಕಂಪನಿಗಳು ಗ್ರೀನ್ ಹೈಡ್ರೋಜನ್ (ಹಸಿರು ಜಲಜನಕ) ಖರೀದಿಸಲು ಮಾಡಿಕೊಂಡಿರುವ ದೃಢವಾದ ಒಪ್ಪಂದಗಳು ಮತ್ತು ಬದ್ಧತೆಗಳು ಒಟ್ಟು 5,55,610 ಎಂಟಿಪಿಎ (ಮೆಟ್ರಿಕ್ ಟನ್ ಪ್ರತಿ ವರ್ಷ) ತಲುಪಿವೆ. ಇದು 'ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್'ನ ಗುರಿಯ ಸುಮಾರು ಶೇ.11 ರಷ್ಟಾಗಿದೆ. ಈ ಬೆಳವಣಿಗೆಯು ಗ್ರೀನ್ ಹೈಡ್ರೋಜನ್ ವಲಯದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುತ್ತದೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡಿರುವ ಈ ಸಮಗ್ರ ಒಪ್ಪಂದಗಳನ್ನು ಈಡೇರಿಸಲು, ಒಟ್ಟಾರೆಯಾಗಿ ₹90,000 ಕೋಟಿಗೂ (ಸುಮಾರು 9.5 ಶತಕೋಟಿ ಅಮೆರಿಕನ್ ಡಾಲರ್) ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ.

ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಜಲಜನಕ ಮಿಷನ್  ಅನ್ನು ಅನುಮೋದಿಸಿದ್ದು, 2029-30ನೇ ಸಾಲಿನವರೆಗೆ ಅದಕ್ಕಾಗಿ 19,744 ಕೋಟಿ ರೂಪಾಯಿಗಳ ಆರಂಭಿಕ ಅನುದಾನ ನಿಗದಿಪಡಿಸಿದೆ. 2030ರ ವೇಳೆಗೆ ವಾರ್ಷಿಕ ಕನಿಷ್ಠ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಜಲಜನಕವನ್ನು ಉತ್ಪಾದಿಸುವುದು ಈ ಮಿಷನ್‌ನ ಗುರಿಯಾಗಿದೆ. ಅಲ್ಲದೆ, ಈ ಮಿಷನ್‌ನಿಂದ 125 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರ್ಪಡೆ, ಒಟ್ಟು 8 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹೂಡಿಕೆ, 6 ಲಕ್ಷಕ್ಕೂ ಅಧಿಕ ಪೂರ್ಣಾವಧಿ ಉದ್ಯೋಗಗಳ ಸೃಷ್ಟಿ ಮತ್ತು ವಾರ್ಷಿಕ 50 ಮಿಲಿಯನ್ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಗ್ಗಿಸುವ ನಿರೀಕ್ಷೆಯಿದೆ.

ಭಾರತೀಯ ಉದ್ಯಮ ಸಂಸ್ಥೆಗಳು ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಮಹತ್ವದ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಮತ್ತು ಹಸಿರು ಜಲಜನಕವನ್ನು ಖರೀದಿಸುವ ಬದ್ಧ ಒಪ್ಪಂದಗಳನ್ನು ಮಾಡಿಕೊಂಡಿವೆ. ಅವುಗಳಲ್ಲಿ ಗಮನಾರ್ಹವಾದ ಒಪ್ಪಂದಗಳು ಹೀಗಿವೆ:

1. ಭಾರತದ 'ಎಸಿಎಂಇ ಗ್ರೂಪ್', ಜಪಾನ್‌ನ 'IHI' ಸಂಸ್ಥೆಯೊಂದಿಗೆ ವಾರ್ಷಿಕ 4,88,000 ಮೆಟ್ರಿಕ್ ಟನ್ ಹಸಿರು ಅಮೋನಿಯಾವನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದೆ.

  1. 'ಎಸಿಎಂಇ ಗ್ರೂಪ್', ಜಪಾನ್‌ನ 'ಮಿತ್ಸುಬಿಷಿ ಗ್ಯಾಸ್ ಕೆಮಿಕಲ್' ಸಂಸ್ಥೆಗೆ ವಾರ್ಷಿಕ 1,00,000 ಮೆಟ್ರಿಕ್ ಟನ್ ಹಸಿರು ಮೆಥನಾಲ್ ಅನ್ನು ಪೂರೈಸುವ ಒಪ್ಪಂದವನ್ನೂ ಮಾಡಿಕೊಂಡಿದೆ.
  2. 'L&T' ಮತ್ತು 'ITOCHU' ಸಂಸ್ಥೆಗಳು ವಾರ್ಷಿಕ 3,00,000 ಟನ್ ಹಸಿರು ಅಮೋನಿಯಾವನ್ನು ಪೂರೈಸಲು 'ಸ್ಪೆಷಲ್ ಪರ್ಪಸ್ ವೆಹಿಕಲ್' (ವಿಶೇಷ ಕಾರ್ಯಪಡೆ) ಒಂದನ್ನು ರಚಿಸಿವೆ. ಇದರಡಿಯಲ್ಲಿ ಪೂರೈಕೆಯು 2029ರ ಡಿಸೆಂಬರ್‌ನಿಂದ ಆರಂಭವಾಗುವ ನಿರೀಕ್ಷೆಯಿದೆ.
  3. 'ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್', ದಕ್ಷಿಣ ಕೊರಿಯಾದ 'ಸ್ಯಾಮ್‌ಸಂಗ್ ಸಿ&ಟಿ ಕಾರ್ಪೊರೇಷನ್' ಜೊತೆಗೆ ದೀರ್ಘಕಾಲೀನ ಪೂರೈಕೆ ಮತ್ತು ಖರೀದಿ ಒಪ್ಪಂದವನ್ನು ಮಾಡಿಕೊಂಡಿದೆ. 3 ಶತಕೋಟಿ ಅಮೆರಿಕನ್ ಡಾಲರ್‌ಗಿಂತಲೂ ಅಧಿಕ  ಮೌಲ್ಯದ ಈ ಒಪ್ಪಂದವು, ಜಾಗತಿಕ ಮಟ್ಟದಲ್ಲಿ ಹಸಿರು ಅಮೋನಿಯಾ ಖರೀದಿಗೆ ಸಂಬಂಧಿಸಿದ ಅತಿದೊಡ್ಡ ಒಪ್ಪಂದಗಳಲ್ಲಿ ಒಂದಾಗಿದೆ. ಈ ಒಪ್ಪಂದದ ಅಡಿಯಲ್ಲಿ ಪೂರೈಕೆಯು 2028ರ ವೇಳೆಗೆ ಆರಂಭವಾಗುವ ನಿರೀಕ್ಷೆಯಿದೆ.
  4. 'ಅಗಸ್ತ್ಯ' ಸಂಸ್ಥೆಯು ಶ್ರೀಲಂಕಾದ 'ಎಸ್.ಎ.ಆರ್.' ಸಂಸ್ಥೆಗೆ ವಾರ್ಷಿಕ 2,50,000 ಮೆಟ್ರಿಕ್ ಟನ್ ಹಸಿರು ಮೆಥನಾಲ್ ಅನ್ನು ಪೂರೈಸುವ ಪ್ರಕ್ರಿಯೆಯಲ್ಲಿದೆ.
  5. HINT.CO GmbH ನಡೆಸಿದ H2Global ಹರಾಜಿನಲ್ಲಿ, 'ಏಷ್ಯನ್ ಲಾಟ್' ವಿಭಾಗದ ಏಕೈಕ ವಿಜೇತರಾಗಿ 'AM Green' ಆಯ್ಕೆಯಾಗಿದೆ. ಇದರ ಮೂಲಕ, ಜರ್ಮನಿಗೆ 'ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆದ ಅಮೋನಿಯಾ' ಪೂರೈಸಲು ದೀರ್ಘಕಾಲೀನ ಖರೀದಿ ಒಪ್ಪಂದವನ್ನು ಅದು ಪಡೆದುಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, Hintco ಸಂಸ್ಥೆಯು 10 ವರ್ಷಗಳ ಅವಧಿಯಲ್ಲಿ AM Green ನಿಂದ ಕನಿಷ್ಠ 585 ಮಿಲಿಯನ್ ಯುರೋ ಮೌಲ್ಯದ ಅಮೋನಿಯಾವನ್ನು ಖರೀದಿಸಲಿದೆ. ಜರ್ಮನಿಗೆ ಮೊದಲ ಪೂರೈಕೆಯು 2029 ರಲ್ಲಿ ನಡೆಯುವ ನಿರೀಕ್ಷೆಯಿದೆ.
  6. ಜರ್ಮನಿಯ 'ಯುನಿಪರ್' ಸಂಸ್ಥೆಯೊಂದಿಗೆ, ವಾರ್ಷಿಕ 2,50,000 ಮೆಟ್ರಿಕ್ ಟನ್ ಸಾಮರ್ಥ್ಯದ 'ಹಸಿರು ಅಮೋನಿಯಾ'  ಪೂರೈಕೆಗಾಗಿ AM Green ಒಂದು ದೃಢವಾದ ಖರೀದಿ ಒಪ್ಪಂದಕ್ಕೆ  ಸಹಿ ಹಾಕಿದೆ.
  7. ಜಪಾನ್‌ನ ಪ್ರಮುಖ ವಿದ್ಯುತ್ ಉತ್ಪಾದಕ ಸಂಸ್ಥೆಯಾದ JERA ನೊಂದಿಗೆ, ವಾರ್ಷಿಕ 70,000 ಮೆಟ್ರಿಕ್ ಟನ್ ಹಸಿರು ಅಮೋನಿಯಾವನ್ನು ದೀರ್ಘಕಾಲದವರೆಗೆ ಪೂರೈಸಲು AM Green ಒಂದು ಬದ್ಧತೆಯ ಒಪ್ಪಂದಕ್ಕೆ ಸಹಿ ಹಾಕಿದೆ.
  8. 'ಜೌನೊ ಜೂಲ್ಸ್' ಸಂಸ್ಥೆಯು, ದಿನಕ್ಕೆ 600 ಟನ್ (ಅಂದರೆ ವಾರ್ಷಿಕ ಸುಮಾರು 2,19,000 ಮೆಟ್ರಿಕ್ ಟನ್) ಹಸಿರು ಅಮೋನಿಯಾವನ್ನು ಪೂರೈಸುವ ಕುರಿತು 'ಸೆಲೆಕ್ಟ್ ಎನರ್ಜಿ GmbH' ನೊಂದಿಗೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ.

ರಫ್ತು ಮಾನದಂಡಗಳ ಜೊತೆಗೆ, ಸರ್ಕಾರದ ನಿರ್ದಿಷ್ಟ ಚೌಕಟ್ಟುಗಳ ಅಡಿಯಲ್ಲಿ ದೇಶೀಯ ಬೇಡಿಕೆಯೂ ಗಣನೀಯವಾಗಿ ಬಲಗೊಂಡಿದೆ:

1. ಈ ಮಿಷನ್‌ನ 'ಗ್ರೀನ್ ಹೈಡ್ರೋಜನ್ ಪರಿವರ್ತನೆಗಾಗಿ ಕಾರ್ಯತಂತ್ರದ ಮಧ್ಯಸ್ಥಿಕೆಗಳು' ಕಾರ್ಯಕ್ರಮದ ಅಡಿಯಲ್ಲಿ, ದೇಶಾದ್ಯಂತ ಇರುವ 11 ರಸಗೊಬ್ಬರ ಘಟಕಗಳಿಗೆ ವಾರ್ಷಿಕ 6,70,000 ಮೆಟ್ರಿಕ್ ಟನ್ ಹಸಿರು ಅಮೋನಿಯಾವನ್ನು ಉತ್ಪಾದಿಸಿ ಪೂರೈಸಲು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

2. ಅದೇ ರೀತಿ, SIGHT ಕಾರ್ಯಕ್ರಮದ ಅಡಿಯಲ್ಲಿ, IOCL, BPCL, HPCL ಮತ್ತು NRL ನ ತೈಲ ಸಂಸ್ಕರಣಾಗಾರಗಳಿಗೆ ವಾರ್ಷಿಕ 30,000 ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸಿ ಪೂರೈಸುವ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.

ಟ್ವೀಟ್

 

*****


(ಪ್ರಕಟಣೆ ಐ.ಡಿ.: 2329996) ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil , Telugu