ಜಲ ಶಕ್ತಿ ಸಚಿವಾಲಯ
azadi ka amrit mahotsav

ಕೇಂದ್ರ ಜಲಶಕ್ತಿ ಸಚಿವರಿಂದ ಪುನಃ ಭರಣ್ ಮೊಬೈಲ್ ಆ್ಯಪ್ ಬಿಡುಗಡೆ

ಪ್ರಕಟಣಾ ದಿನಾಂಕ: 28 OCT 2026 12:16PM by PIB Bengaluru

ವೈಜ್ಞಾನಿಕವಾಗಿ ಅಂತರ್ಜಲ ಮರುಪೂರಣ ಯೋಜನೆಯನ್ನು ರೂಪಿಸಲು ಸಹಾಯ ಮಾಡಲು, ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ವ್ಯಾಪ್ತಿಯ ರಾಷ್ಟ್ರೀಯ ಜಲ ಮಿಷನ್ (ಎನ್ ಡಬ್ಲ್ಯೂ ಎಂ) ಸಹಯೋಗದೊಂದಿಗೆ ಬಿಐಎಸ್ ಎ ಜಿ-ಎನ್ ಅಭಿವೃದ್ಧಿಪಡಿಸಿರುವ ʻಪುನಃ ಭರಣ್ʼ ಮೊಬೈಲ್ ಆ್ಯಪ್  ಅನ್ನು ಕೇಂದ್ರ ಜಲಶಕ್ತಿ ಸಚಿವರು ಬಿಡುಗಡೆ ಮಾಡಿದರು.

ʻಪುನಃ ಭರಣ್ʼ ಮೊಬೈಲ್  ಆ್ಯಪ್, ಬಳಕೆದಾರರಿಗೆ 3 ಕಿ.ಮೀ ವ್ಯಾಪ್ತಿಯಲ್ಲಿ ಕೃತಕ ಅಂತರ್ಜಲ ಮರುಪೂರಣಕ್ಕೆ ಸೂಕ್ತವಾದ ಪ್ರದೇಶಗಳನ್ನು ಗುರುತಿಸಲು ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾದ ಮರುಪೂರಣ ರಚನೆಗಳನ್ನು ಅನ್ವೇಷಿಸಲು ನೆರವಾಗುತ್ತದೆ.

ʻಪುನಃ ಭರಣ್ʼ ವೆಬ್ ಪೋರ್ಟಲ್ ಗ್ರಾಮ ಮಟ್ಟದ ಕೃತಕ ಮರುಪೂರಣ ರಚನೆ (ಎ ಆರ್ ಎಸ್) ವಲಯ ನಕ್ಷೆಗಳು, ಜಿಐಎಸ್  ಉಪಕರಣಗಳು ಮತ್ತು ಡಿಜಿಟಲ್ ಭೌಗೋಳಿಕ ಮಾಹಿತಿಯ ವಿಭಿನ್ನ ಪದರಗಗಳಿಗೆ ಪ್ರವೇಶಾವಕಾಶವನ್ನು ಒದಗಿಸುತ್ತದೆ, ಇದು ಸುಸ್ಥಿರ ಅಂತರ್ಜಲ ನಿರ್ವಹಣೆಗೆ ಅಗತ್ಯವಾದ ವೈಜ್ಞಾನಿಕ ಯೋಜನೆಗಳನ್ನು ರೂಪಿಸಲು ಬೆಂಬಲ ನೀಡುತ್ತದೆ.

ಈ ವೇದಿಕೆಯು ಮಳೆ ಪ್ರಮಾಣ, ಅಂತರ್ಜಲ ಮಟ್ಟ, ಅಂತರ್ಜಲ ಇಳುವರಿ, ಇಳಿಜಾರು ಮತ್ತು ಒಳಚರಂಡಿ ಸೇರಿದಂತೆ ಭೌಗೋಳಿಕ ದತ್ತಾಂಶಗಳನ್ನು ಬಳಸಿಕೊಂಡು ಸಂಭಾವ್ಯ ಮರುಪೂರಣ ಪ್ರದೇಶಗಳನ್ನು ಗುರುತಿಸಲು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.

ಪುನಃ ಭರಣ್ — ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಮೂಲಕ ವೈಜ್ಞಾನಿಕ ಅಂತರ್ಜಲ ಮರುಪೂರಣ ಯೋಜನೆಯನ್ನು ಉತ್ತೇಜಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2329393) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , Assamese , English , Urdu , हिन्दी , Marathi , Gujarati , Tamil , Telugu