ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಾರ್ವಜನಿಕ ಸೇವೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಅವಧಿಯು ಹೇಗೆ ಮೂಲಸೌಕರ್ಯ ಯೋಜನೆ ಮತ್ತು ಅದರ ಅನುಷ್ಠಾನದ ಸ್ವರೂಪವನ್ನೇ ಬದಲಾಯಿಸಿದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಕುರಿತು ನೀತಿ ಆಯೋಗದ ಸದಸ್ಯರು ಮತ್ತು ಮಾಜಿ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 26 OCT 2026 12:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀತಿ ಆಯೋಗದ ಸದಸ್ಯರು ಮತ್ತು ಮಾಜಿ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು ಬರೆದ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.

ಈ ಲೇಖನದಲ್ಲಿಶ್ರೀ ರಾಜೀವ್ ಗೌಬಾ, ಸಾರ್ವಜನಿಕ ಸೇವೆಯಲ್ಲಿ ಪ್ರಧಾನಮಂತ್ರಿಯವರ 25 ವರ್ಷಗಳ ಅವಧಿಯು ಮೂಲಸೌಕರ್ಯ ಯೋಜನೆಗಳನ್ನು ಮತ್ತು ಅವುಗಳ ಜಾರಿಯನ್ನು ಹೇಗೆ ಮರು ರೂಪಿಸಿದೆ ಎಂದು ಬರೆದಿದ್ದಾರೆ. ಕೇವಲ ಪ್ರತ್ಯೇಕ ಯೋಜನೆಗಳಿಗೆ ಸೀಮಿತವಾಗದೆ, ಸಂಪರ್ಕ ವ್ಯವಸ್ಥೆ, ಜೀವನ ಸುಲಭಗೊಳಿಸುವುದು ಮತ್ತು ಆರ್ಥಿಕ ಉತ್ಪಾದಕತೆಯನ್ನು ಹೆಚ್ಚಿಸುವಂತಹ, ಸಮಗ್ರ ಹಾಗೂ ನಾಗರಿಕ-ಸ್ನೇಹಿ ವಿಧಾನದ ಮೇಲೆ  ಹೆಚ್ಚಿನ ಗಮನಹರಿಸಲಾಗಿದೆ ಎಂಬುದನ್ನು ಲೇಖನದಲ್ಲಿ ಪ್ರಧಾನವಾಗಿ ಉಲ್ಲೇಖಿಸಲಾಗಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ತನ್ನ X ಪೋಸ್ಟ್‌ ನಲ್ಲಿ ಹೀಗೆ  ಬರೆದಿದೆ:

“ನೀತಿ ಆಯೋಗದ ಸದಸ್ಯರು ಮತ್ತು ಮಾಜಿ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು, ಸಾರ್ವಜನಿಕ ಸೇವೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಅವಧಿಯು ಮೂಲಸೌಕರ್ಯ ಯೋಜನೆ ಮತ್ತು ಅದರ ಅನುಷ್ಠಾನದ ಸ್ವರೂಪವನ್ನೇ ಹೇಗೆ ಬದಲಾಯಿಸಿದೆ ಎಂದು ಬರೆದಿದ್ದಾರೆ.

ಕೇವಲ ಪ್ರತ್ಯೇಕ ಯೋಜನೆಗಳಿಗೆ ಸೀಮಿತವಾಗದೆ, ಸಂಪರ್ಕ ವ್ಯವಸ್ಥೆ, ಜೀವನ ಸುಲಭಗೊಳಿಸುವುದು ಮತ್ತು ಆರ್ಥಿಕ ಉತ್ಪಾದಕತೆಯನ್ನು ಹೆಚ್ಚಿಸುವಂತಹ, ಸಮಗ್ರ ಹಾಗೂ ನಾಗರಿಕ-ಸ್ನೇಹಿ ವಿಧಾನದ ಮೇಲೆ ಹೆಚ್ಚಿನ  ಗಮನಹರಿಸಲಾಗಿದೆ.”

https://indianexpress.com/article/opinion/columns/narendra-modi-gati-shakti-infrastructure-growthv-10936571/lite/

 

*****


(ಪ್ರಕಟಣೆ ಐ.ಡಿ.: 2328459) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Gujarati , Telugu , Malayalam