ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹರ್ಷಿ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ


ಮಹರ್ಷಿ ವಾಲ್ಮೀಕಿಯವರ ಕರುಣಾಭಾವ ಹಾಗೂ ರಾಮಾಯಣದ ಅಡಿಪಾಯವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 26 OCT 2026 8:05AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹರ್ಷಿ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಮಹರ್ಷಿ ವಾಲ್ಮೀಕಿಯವರ ಉದಾತ್ತ ಚಿಂತನೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೂಲಭೂತ ಅಂಶಗಳಾಗಿ ಉಳಿದುಕೊಂಡಿವೆ ಮತ್ತು ಅವು ಪ್ರತಿಯೊಂದು ಯುಗದಲ್ಲೂ ರಾಷ್ಟ್ರವನ್ನು ಪೋಷಿಸುತ್ತಾ, ಸಮೃದ್ಧಗೊಳಿಸುತ್ತಾ ಸಾಗಲಿವೆ ಎಂದು ಪ್ರಧಾನ ಮಂತ್ರಿ ಹೇಳಿದರು. ಮನುಕುಲಕ್ಕೆ ಅವರು ನೀಡಿದ ಅಮೂಲ್ಯ ಸಂದೇಶಗಳು ದೇಶದ ನಾಗರಿಕರಿಗೆ ಸದಾ ದಾರಿದೀಪವಾಗಿ ಉಳಿಯಲಿವೆ ಎಂದು ಅವರು ತಿಳಿಸಿದರು.

ಮಹರ್ಷಿ ವಾಲ್ಮೀಕಿಯವರಲ್ಲಿನ ಅಪಾರ ಕರುಣಾಭಾವವನ್ನು ಉಲ್ಲೇಖಿಸುವ ಮತ್ತು ಅದೇ ಕರುಣಾಭಾವವು ಮೊದಲ ಶ್ಲೋಕದ ರಚನೆಗೆ ಕಾರಣವಾಯಿತು ಮತ್ತು ರಾಮಾಯಣಕ್ಕೆ ಅಡಿಪಾಯ ಹಾಕಿತು ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸುವ ಸಂಸ್ಕೃತ ಸುಭಾಷಿತವೊಂದನ್ನು ಶ್ರೀ ನರೇಂದ್ರ ಮೋದಿ ಇಂದು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ತಮ್ಮ ಸರಣಿ X ಪೋಸ್ಟ್‌ಗಳಲ್ಲಿ ಹೀಗೆ  ಹಂಚಿಕೊಂಡಿದ್ದಾರೆ:

"आप सभी को महर्षि वाल्मीकि जयंती की असीम शुभकामनाएं। उनके सद्विचार भारतीय संस्कृति और विरासत के मूल तत्व रहे हैं, जो हर युग में राष्ट्र को पुष्पित-पल्लवित करते रहेंगे। मानवता के लिए उनके अनमोल संदेश देशवासियों के लिए सदैव पथ-प्रदर्शक बने रहेंगे।"

 

"तामभ्यगच्छद्रुदितप्रवादात्कविः कुशेध्माहरणाय यातः।

निषादविद्धाण्डजदर्शनोत्थः श्लोकत्वमापद्यत यस्य शोकः॥"

 

ಮಹರ್ಷಿ ವಾಲ್ಮೀಕಿಗಳು ಕುಶ ಹುಲ್ಲು ಮತ್ತು ಯಜ್ಞಕ್ಕೆ ಬೇಕಾದ ಸಮಿಧೆಗಳನ್ನು ಸಂಗ್ರಹಿಸಲು ತೆರಳಿದಾಗ, ಕ್ರೌಂಚ ಪಕ್ಷಿಯ ಹೆಣ್ಣು ಹಕ್ಕಿಯೊಂದರ ಆರ್ತನಾದದ ಕೂಗನ್ನು ಆಲಿಸಿದರು. ಅವರ ಪವಿತ್ರ ಹೃದಯದಲ್ಲಿ ಜಾಗೃತಗೊಂಡ ಕರುಣೆಯು ಒಂದು ಶ್ಲೋಕದ ರೂಪದಲ್ಲಿ ಹೊರಹೊಮ್ಮಿತು. ಸರ್ವಜ್ಞರಾದ ಮಹರ್ಷಿ ವಾಲ್ಮೀಕಿಗಳ ಕರುಣೆ, ಸಮಚಿತ್ತತೆ, ತಪಸ್ಸು ಮತ್ತು ಜ್ಞಾನವನ್ನು ಪ್ರತಿಬಿಂಬಿಸುವ ಈ ಶ್ಲೋಕವೇ ರಾಮಾಯಣಕ್ಕೆ ಮೂಲಬುನಾದಿಯಾಯಿತು.

 

*****


(ಪ್ರಕಟಣೆ ಐ.ಡಿ.: 2328380) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Gujarati , Tamil , Telugu , Malayalam