ಪ್ರಕಟಣಾ ದಿನಾಂಕ:
23 OCT 2026 7:45PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ರಿಕರ್ವ್ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹರ್ವಿಂದರ್ ಸಿಂಗ್ ಮತ್ತು ವಿಜಯ್ ಸುಂಡಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಅವರ ಅತ್ಯುತ್ತಮ ಪ್ರದರ್ಶನವು ರಾಷ್ಟ್ರಕ್ಕೆ ಹೆಚ್ಚಿನ ಹೆಮ್ಮೆಯನ್ನು ತಂದಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದೆ:
‘‘ಹರ್ವಿಂದರ್‌ಸಿಂಗ್ ಮತ್ತು ವಿಜಯ್ ಸುಂಡಿ ಅವರ ದೊಡ್ಡ ಸಾಧನೆ!
ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ರಿಕರ್ವ್ ಡಬಲ್ಸ್‌ನಲ್ಲಿ ಚಿನ್ನ ಗೆದ್ದ ಇವರಿಬ್ಬರಿಗೆ ಅಭಿನಂದನೆಗಳು. ಅವರ ಅತ್ಯುತ್ತಮ ಪ್ರದರ್ಶನವು ರಾಷ್ಟ್ರಕ್ಕೆ ಹೆಚ್ಚಿನ ಹೆಮ್ಮೆಯನ್ನು ತಂದಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi’’
*****