ಪ್ರಕಟಣಾ ದಿನಾಂಕ:
22 OCT 2026 6:33PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಹಿಳಾ ವೈಯಕ್ತಿಕ ಪ್ಯಾರಾ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಶೀತಲ್ ದೇವಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಸತತ ಎರಡನೇ ಆವೃತ್ತಿಯಲ್ಲಿ ಚಿನ್ನದ ಪದಕ ಜಯಿಸಿ ತಮ್ಮ ಹಿಂದಿನ ಸಾಧನೆಯನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ ಏಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶೀತಲ್ ಅವರನ್ನು ಅಭಿನಂದಿಸಿದ್ದಾರೆ.
ಕ್ರೀಡಾ ಶ್ರೇಷ್ಠತೆಯನ್ನು ಸಾಧಿಸುವಲ್ಲಿ ಶೀತಲ್ ಅವರ ನಿಖರತೆ, ಸ್ಥಿರತೆ ಮತ್ತು ಸಮರ್ಪಣಾ ಭಾವಗಳು ನಿಜಕ್ಕೂ ಗಮನಾರ್ಹ ಎಂದು ಹೇಳುತ್ತಾ ಶ್ರೀ ಮೋದಿ ಅವರು, ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಹಿಳಾ ವೈಯಕ್ತಿಕ ಪ್ಯಾರಾ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಶೀತಲ್ ದೇವಿ ಅವರಿಂದ ಅತ್ಯದ್ಭುತ ಪ್ರದರ್ಶನ! ಅವರು ಸತತ ಎರಡನೇ ಬಾರಿಗೆ ಚಿನ್ನದ ಪದಕ ಜಯಿಸಿ, ಯಶಸ್ವಿಯಾಗಿ ತಮ್ಮ ಪ್ರಶಸ್ತಿ ಉಳಿಸಿಕೊಂಡಿದ್ದಾರೆ. ಅವರ ನಿಖರತೆ, ಸ್ಥಿರತೆ ಮತ್ತು ಕ್ರೀಡಾ ಶ್ರೇಷ್ಠತೆಗಾಗಿನ ಬದ್ಧತೆ ನಿಜಕ್ಕೂ ಗಮನಾರ್ಹ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****