ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನವೀನ್ ಶಿವಕುಮಾರ್ ಮತ್ತು ಸೂರ್ಯ ಕಾಂತ್ ಯಾದವ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 22 OCT 2026 6:50PM by PIB Bengaluru

2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಡಬಲ್ಸ್ SL3-SU5 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ನವೀನ್ ಶಿವಕುಮಾರ್ ಮತ್ತು ಸೂರ್ಯ ಕಾಂತ್ ಯಾದವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಅಭಿನಂದಿಸಿದ್ದಾರೆ. ಈ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಐತಿಹಾಸಿಕ ಪದಕ ಇದಾಗಿದೆ.

ತಮ್ಮ ಚೊಚ್ಚಲ ಪ್ರವೇಶದಲ್ಲೇ ಸಾಧಿಸಿರುವ ಈ ಗೆಲುವು ಇಬ್ಬರೂ ಕ್ರೀಡಾಪಟುಗಳಿಗೆ ಒಂದು ವಿಶೇಷ ಮೈಲಿಗಲ್ಲಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಅಲ್ಲದೆ, ಅವರ ತಂಡದ ಒಗ್ಗಟ್ಟು, ದೃಢ ನಿಶ್ಚಯ ಮತ್ತು ಸಮರ್ಪಣಾ ಭಾವವು ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯವು 'ಎಕ್ಸ್' ಪೋಸ್ಟ್‌ ನಲ್ಲಿ ಹೀಗೆ ಹಂಚಿಕೊಂಡಿದೆ.

"ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್‌ಗೆ ಐತಿಹಾಸಿಕ ಕಂಚಿನ ಪದಕ!

ನವೀನ್ ಶಿವಕುಮಾರ್ ಮತ್ತು ಸೂರ್ಯ ಕಾಂತ್ ಯಾದವ್ ಅವರು 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಡಬಲ್ಸ್ SL3-SU5 ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ. ತಮ್ಮ ಚೊಚ್ಚಲ ಪ್ರವೇಶದಲ್ಲೇ ಸಾಧಿಸಿರುವ ಈ ಗೆಲುವು ಇಬ್ಬರೂ ಕ್ರೀಡಾಪಟುಗಳಿಗೆ ಒಂದು ವಿಶೇಷ ಮೈಲಿಗಲ್ಲಾಗಿದೆ. ಅವರ ತಂಡದ ಒಗ್ಗಟ್ಟು, ದೃಢ ನಿಶ್ಚಯ ಮತ್ತು ಸಮರ್ಪಣಾ ಭಾವವು ಶ್ಲಾಘನೀಯ. ಅವರಿಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2326962) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil , Malayalam