ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ರಜತ ಪದಕ ಪಡೆದಿರುವ ಭಾಗ್ಯಶ್ರೀ ಜಾಧವ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 21 OCT 2026 6:55PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಮಹಿಳೆಯರ ಶಾಟ್ ಪುಟ್ ಎಫ್ 34 ಸ್ಪರ್ಧೆಯಲ್ಲಿ ಅತ್ಯುತ್ತಮ ಎಸೆತ ಹಾಗೂ ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ದಾಖಲಿಸುವ ಮೂಲಕ ಬೆಳ್ಳಿ ಪದಕ ಜಯಿಸಿ, ಭಾರತಕ್ಕೆ ಮತ್ತೊಮ್ಮೆ ಹೆಮ್ಮೆ ತಂದಿರುವ ಭಾಗ್ಯಶ್ರೀ ಜಾಧವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಹಿಂದಿನ ಆವೃತ್ತಿಯಿಂದ ಕಾರ್ಯಕ್ಷಮತೆ ಸುಧಾರಿಸಿಕೊಂಡ ನಂತರ, ಭಾಗ್ಯಶ್ರೀ ಅವರು ಗಮನಾರ್ಹ ಸ್ಥಿರತೆ ಮತ್ತು ಉತ್ತಮ ಪ್ರದರ್ಶನ ಮುಂದುವರಿಸುವ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹೇಳುತ್ತಾ ಶ್ರೀ ಮೋದಿ ಅವರು, ಈ ಅರ್ಹ ಯಶಸ್ಸಿಗೆ ಭಾಗ್ಯಶ್ರೀ ಅವರನ್ನು ಅಭಿನಂದಿಸಿದ್ದಾರೆ ಮತ್ತು ಅವರ ಪರಿಶ್ರಮ ನಿಜಕ್ಕೂ ಪ್ರೇರಣಾದಾಯಕ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಕಚೇರಿಯು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:

“ ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಮತ್ತೊಂದು ರಜತ ಪದಕ ಮತ್ತು ಹೊಸ ವೈಯಕ್ತಿಕ ಶ್ರೇಷ್ಠ ಸಾಧನೆ!

ಭಾಗ್ಯಶ್ರೀ ಜಾಧವ್ ಅವರು ಮಹಿಳೆಯರ ಶಾಟ್ ಪುಟ್ ಎಫ್ 34 ಸ್ಪರ್ಧೆಯಲ್ಲಿ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಪದಕ ಗೆದ್ದು, ಮತ್ತೊಮ್ಮೆ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಹಿಂದಿನ ಆವೃತ್ತಿಯಿಂದ ತಮ್ಮ ಪ್ರದರ್ಶನ ಸುಧಾರಿಸಿಕೊಂಡಿರುವ ಅವರು, ಗಮನಾರ್ಹ ಸ್ಥಿರತೆ ಹಾಗೂ ನಿರಂತರವಾಗಿ ಉತ್ತಮಗೊಳ್ಳುವ ಬದ್ಧತೆ ಪ್ರದರ್ಶಿಸಿದ್ದಾರೆ. ಈ ಅರ್ಹ ಯಶಸ್ಸಿಗಾಗಿ ಭಾಗ್ಯಶ್ರೀ ಅವರಿಗೆ ಅಭಿನಂದನೆಗಳು. ಅವರ ಅವಿರತ ಯತ್ನ ನಿಜವಾಗಿಯೂ ಸ್ಫೂರ್ತಿದಾಯಕ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2326462) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam