ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚು ಪದಕ ಗೆದ್ದ ರವಿ ರೊಂಗಾಲಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 21 OCT 2026 7:20PM by PIB Bengaluru

ಏಷ್ಯನ್ ಪ್ಯಾರಾ ಕ್ರೀಡಾಕೂಟ 2026ರಲ್ಲಿ ಪುರುಷರ ಶಾಟ್ ಪುಟ್ ಎಫ್ 40 ಸ್ಪರ್ಧೆಯಲ್ಲಿ ಕಂಚು ಪದಕ ಗೆದ್ದ ರವಿ ರೊಂಗಾಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಇದು ಮತ್ತೊಂದು ಉತ್ತಮ ಸಾಧನೆ ಎಂದು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರ ನಿರಂತರ ಯಶಸ್ಸು, ಕ್ರೀಡೆಯ ಮೇಲಿನ ಅವರ ಸಮರ್ಪಣೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಎಕ್ಸ್ ತಾಣದಲ್ಲಿ , ಪ್ರಧಾನಮಂತ್ರಿಯವರ ಕಾರ್ಯಾಲಯ ಈ ರೀತಿ ಸಂದೇಶ ಹಂಚಿಕೊಂಡಿದೆ:

"ರವಿ ರೊಂಗಾಲಿ ಅವರಿಂದ ಮತ್ತೊಂದು ಉತ್ತಮ ಸಾಧನೆ!

ಏಷ್ಯನ್ ಪ್ಯಾರಾ ಕ್ರೀಡಾಕೂಟ 2026ರಲ್ಲಿ ಪುರುಷರ ಶಾಟ್ ಪುಟ್ ಎಫ್ 40 ಸ್ಪರ್ಧೆಯಲ್ಲಿ ಕಂಚು ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರ ನಿರಂತರ ಯಶಸ್ಸು, ಕ್ರೀಡೆಯ ಮೇಲಿನ ಅವರ ಸಮರ್ಪಣೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ @narendramodi"

 

*****

 

 


(ಪ್ರಕಟಣೆ ಐ.ಡಿ.: 2326286) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , Gujarati , Tamil , Malayalam