ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಚಿನ್ನದ ಪದಕ ಗೆದ್ದ ಪ್ರಣವ್ ಸೂರ್ಮಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 20 OCT 2026 9:25PM by PIB Bengaluru

2026 ರ ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್ 51/52/53 ಸ್ಪರ್ಧೆಯಲ್ಲಿ ದಾಖಲೆಯ ಎಸೆತದೊಂದಿಗೆ ಚಿನ್ನದ ಪದಕ ಗೆದ್ದ ಪ್ರಣವ್ ಸೂರ್ಮಾ ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

"ಹೊಸ ಏಷ್ಯನ್ ದಾಖಲೆಯನ್ನು ಸ್ಥಾಪಿಸುವುದು ಈ ಪ್ರತಿಷ್ಠಿತ ಪದಕ ಮತ್ತು ವಿಜಯವನ್ನು ಇನ್ನಷ್ಟು ಅಸಾಧಾರಣವಾಗಿಸುತ್ತದೆ" ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು , "ಪ್ರಣವ್ ಅವರ ಶಕ್ತಿ, ದೃಢನಿಶ್ಚಯ ಮತ್ತು ಸ್ಪರ್ಧಾತ್ಮಕ ಮನೋಭಾವವು ಸ್ಫೂರ್ತಿಯಾಗಿದೆ" ಎಂದು ಹೇಳಿದರು ಮತ್ತು ಈ ಐತಿಹಾಸಿಕ ಸಾಧನೆಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ  ಹಂಚಿಕೊಂಡಿರುವ ಮಾಹಿತಿ ಹೀಗಿದೆ:

"ಪ್ರತಿಷ್ಠಿತ ಪದಕ ಮತ್ತು ಏಷ್ಯನ್ ಗೇಮ್ಸ್ ದಾಖಲೆ!

ಪ್ರಣವ್ ಸೂರ್ಮ ಅವರು ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್ 51/52/53 ಸ್ಪರ್ಧೆಯಲ್ಲಿ ದಾಖಲೆಯ ಥ್ರೋ ಮೂಲಕ ಚಿನ್ನ ಗೆದ್ದಿದ್ದಾರೆ. ಹೊಸ ಏಷ್ಯನ್ ದಾಖಲೆಯನ್ನು ಸ್ಥಾಪಿಸುವುದು ಈ ವಿಜಯವನ್ನು ಇನ್ನಷ್ಟು ಅಸಾಧಾರಣವಾಗಿಸುತ್ತದೆ. ಪ್ರಣವ್ ಅವರ ಶಕ್ತಿ, ದೃಢನಿಶ್ಚಯ ಮತ್ತು ಸ್ಪರ್ಧಾತ್ಮಕ ಮನೋಭಾವವು ಸ್ಫೂರ್ತಿಯಾಗಿದೆ. ಈ ಐತಿಹಾಸಿಕ ಸಾಧನೆಗಾಗಿ ಅವರಿಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2325736) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Punjabi , Gujarati , Telugu , Malayalam