ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಹಿಳೆಯರ ಜೆ 2 -52 ಕೆ.ಜಿ ಜೂಡೋದಲ್ಲಿ ಬೆಳ್ಳಿ ಪದಕ ಗೆದ್ದ ಕೋಕಿಲಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
19 OCT 2026 10:07PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026 ರ ಮಹಿಳೆಯರ ಜೆ 2 -52 ಕೆ.ಜಿ ಜೂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಕೋಕಿಲಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಹಿಂದಿನ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರಿಂದ ಹೊಸ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದವರೆಗಿನ ಕೋಕಿಲಾ ಅವರ ಪ್ರಯಾಣವನ್ನು ಪ್ರಧಾನಿ ಉಲ್ಲೇಖಿಸಿದರು. ಇದು ಗಮನಾರ್ಹ ಪರಿಶ್ರಮ, ಸಮರ್ಪಣೆ ಮತ್ತು ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತದೆ. ಮುಂಬರುವ ವರ್ಷಗಳಲ್ಲಿ ಅವರ ಯಶಸ್ಸು ಮುಂದುವರಿಯಲಿ ಎಂದು ಅವರು ಹಾರೈಸಿದರು.
ಪ್ರಧಾನಮಂತ್ರಿಗಳ ಕಾರ್ಯಾಲಯ ಈ ರೀತಿ ಎಕ್ಸ್ ನಲ್ಲಿ ತಿಳಿಸಿದೆ;
"ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಮಹಿಳೆಯರ ಜೆ 2 -52 ಕೆ.ಜಿ ಜೂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಕೋಕಿಲಾ ಅವರಿಗೆ ಅಭಿನಂದನೆಗಳು! ಹಿಂದಿನ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಕಂಚಿನ ಪದಕದಿಂದ ಹೊಸ ವಿಭಾಗದಲ್ಲಿ ಬೆಳ್ಳಿಯವರೆಗೆ, ಅವರ ಪ್ರಯಾಣವು ಗಮನಾರ್ಹ ಪರಿಶ್ರಮ, ಸಮರ್ಪಣೆ ಮತ್ತು ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತದೆ. ಮುಂದಿನ ವರ್ಷಗಳಲ್ಲಿ ಅವರ ಯಶಸ್ಸು ಮುಂದುವರಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi"
*****
(ಪ್ರಕಟಣೆ ಐ.ಡಿ.: 2325404)
ವಿಸಿಟರ್ ಕೌಂಟರ್ : 6