ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಅನುಭವವನ್ನು ಸುಧಾರಿಸಲು NHAI ರಾಜಮಾರ್ಗಯಾತ್ರೆ ಅಪ್ಲಿಕೇಶನ್ನಲ್ಲಿ ಟೋಲ್ ಪ್ಲಾಜಾ ಪ್ರತಿಕ್ರಿಯಾ ವೈಶಿಷ್ಟ್ಯವನ್ನು ಪರಿಚಯಿಸಿದೆ
ಪ್ರಕಟಣಾ ದಿನಾಂಕ:
19 OCT 2026 4:43PM by PIB Bengaluru
ಟೋಲ್ ಪ್ಲಾಜಾಗಳಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸುವ ಮಹತ್ವದ ಆಕಾಂಕ್ಷೆಯ ಉಪಕ್ರಮದಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಜಮಾರ್ಗಯಾತ್ರೆ ಎಂಬ ಮೊಬೈಲ್ ಅಪ್ಲಿಕೇಶನ್ನಲ್ಲಿ 'ಟೋಲ್ ಪ್ಲಾಜಾ ಪ್ರತಿಕ್ರಿಯೆ' ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ರಾಷ್ಟ್ರೀಯ ಹೆದ್ದಾರಿ ಬಳಕೆದಾರರು ಟೋಲ್ ಪ್ಲಾಜಾಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮವು ನಾಗರಿಕರ ಭಾಗವಹಿಸುವಿಕೆಯನ್ನು ಬಲಪಡಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಯಾಣಗಳನ್ನು ಸುರಕ್ಷಿತ, ಸುಗಮ ಮತ್ತು ಹೆಚ್ಚು ಅನುಕೂಲಕರವಾಗಿಸುವ ಪ್ರಯತ್ನಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಸರಳ ಮತ್ತು ಬಳಕೆದಾರ-ಸ್ನೇಹಿ ಪ್ರತಿಕ್ರಿಯೆ ಪ್ರಕ್ರಿಯೆ
ಟೋಲ್ ಪ್ಲಾಜಾಗಳಲ್ಲಿ ಸೇವಾ ವಿತರಣೆಯನ್ನು ಸುಧಾರಿಸಲು NHAI ಬಳಕೆದಾರರ ಪ್ರತಿಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾವನ್ನು ದಾಟಿದ ನಂತರ, ವಾರ್ಷಿಕ ಪಾಸ್ ಬಳಕೆದಾರರು ತಮ್ಮ ಟೋಲ್ ಪ್ಲಾಜಾ ಅನುಭವವನ್ನು ಹಂಚಿಕೊಳ್ಳಲು ಆಹ್ವಾನಿಸುವ ಅಧಿಸೂಚನೆಯನ್ನು ತಮ್ಮ ರಾಜಮಾರ್ಗ ಯಾತ್ರಾ ಅಪ್ಲಿಕೇಶನ್ನಲ್ಲಿ ಸ್ವೀಕರಿಸುತ್ತಾರೆ. ಇದರ ಜೊತೆಗೆ, ಎಲ್ಲಾ ಬಳಕೆದಾರರು ಈಗ ಯಾವುದೇ ಟೋಲ್ ಪ್ಲಾಜಾದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಬಯಸಿದಲ್ಲಿ, ಅಪ್ಲಿಕೇಶನ್ನ ಮೆನು ವಿಭಾಗದಲ್ಲಿ "ಟೋಲ್ ಪ್ಲಾಜಾ ಫೀಬ್ಯಾಕ್" ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು. ಬಳಕೆದಾರರು ತಮ್ಮ ಅನುಭವವನ್ನು ಒಂದು ಪ್ರಮಾಣದಲ್ಲಿ ರೇಟ್ ಮಾಡಿ, ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಆಯ್ದುಕೊಳ್ಳಬಹುದು ಹಾಗೂ ತಮ್ಮ ಟೀಕೆಗಳೇನಾದರು ಇದ್ದರೆ ಅವುಗಳನ್ನು ಸೇರಿಸಬಹುದು.
ಈ ವೈಶಿಷ್ಟ್ಯವು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು, ಗಮನ ನೀಡಲು ಅಗತ್ಯವಿರುವ ಸಮಸ್ಯೆಗಳನ್ನು ಹೈಲೈಟ್ ಮಾಡಲು ಒಂದು ಚಾನಲ್ ಅನ್ನು ಒದಗಿಸುತ್ತದೆ. ಟೋಲ್ ಪ್ಲಾಜಾ ಸೇವೆಗಳಲ್ಲಿ ಸುಧಾರಣೆಗಳು ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ, ಮೇಲ್ವಿಚಾರಣೆ ಮಾಡಲು NHAI ನ ಪ್ರಯತ್ನಗಳನ್ನು ಸಹ ಇದು ಬೆಂಬಲಿಸುತ್ತದೆ.
ರಾಷ್ಟ್ರೀಯ ಹೆದ್ದಾರಿ ಬಳಕೆದಾರರು ಟೋಲ್ ಪ್ಲಾಜಾ ಫೀಡ್ಬ್ಯಾಕ್ ವೈಶಿಷ್ಟ್ಯವನ್ನು ಸಕ್ರಿಯವಾಗಿ ಬಳಸಲು ಮತ್ತು ರಾಜಮಾರ್ಗಯಾತ್ರೆ ಅಪ್ಲಿಕೇಶನ್ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು NHAI ಪ್ರೋತ್ಸಾಹಿಸುತ್ತದೆ. ನಾಗರಿಕರ ಭಾಗವಹಿಸುವಿಕೆಯು NHAI ಬಳಕೆದಾರರ ಕಾಳಜಿಗಳನ್ನು ಪರಿಹರಿಸಿ, ರಾಷ್ಟ್ರೀಯ ಹೆದ್ದಾರಿ ಜಾಲದಾದ್ಯಂತದ ಟೋಲ್ ಪ್ಲಾಜಾಗಳಲ್ಲಿ ಸೇವಾ ವಿತರಣೆಯನ್ನು ಸುಧಾರಿಸುವತ್ತ ಕೆಲಸ ಮಾಡಲು ಸಹಾಯ ಮಾಡುತ್ತದೆ.
*****
(ಪ್ರಕಟಣೆ ಐ.ಡಿ.: 2325321)
ವಿಸಿಟರ್ ಕೌಂಟರ್ : 5