ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಫಿಟ್ನೆಸ್ ಚಟುವಟಿಕೆಗಳು, ಮಾದಕವದ್ರವ್ಯ ವಿರೋಧಿ ಪ್ರತಿಜ್ಞೆ ಮತ್ತು 5.5 ಕಿ.ಮೀ. ಸೈಕಲ್ ರಾಲಿಯಲ್ಲಿ ಯುವಕರನ್ನು ಮುನ್ನಡೆಸಿದರು


ವಾರಾಣಸಿಯಲ್ಲಿ ನಡೆದ 94 ನೇ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಕಾರ್ಯಕ್ರಮವು 'ವಿಕಸಿತ ಭಾರತಕ್ಕಾಗಿ ನಶೆಮಕ್ತ ಯುವಜನತೆ'  ಸಂದೇಶವನ್ನು ಸಾರಿತು

ಪ್ರಕಟಣಾ ದಿನಾಂಕ: 11 OCT 2026 1:37PM by PIB Bengaluru

ಗೌರವಾನ್ವಿತ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ವಾರಾಣಸಿಯಲ್ಲಿ 94 ನೇ ಆವೃತ್ತಿಯ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' (ಸೈಕಲ್ನಲ್ಲಿ 'ಫಿಟ್ ಇಂಡಿಯಾ' ಭಾನುವಾರಗಳು) ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಇದು ಔಷಧಮುಕ್ತ ಯುವ ಸಮುದಾಯ ಮತ್ತು ಆರೋಗ್ಯಕರ ಭಾರತದ ಸಂದೇಶವನ್ನು ಸಾರಲು 500 ಕ್ಕೂ ಹೆಚ್ಚು ಸೈಕ್ಲಿಸ್ಟ್ಗಳು ಮತ್ತು 1,000 ಕ್ಕೂ ಹೆಚ್ಚು ಭಾಗವಹಿಸುವವರನ್ನು ಒಂದೆಡೆ ಸೇರಿಸಿತು.ʻವಿಕಸಿತ ಭಾರತಕ್ಕಾಗಿ ನಶಾಮಕ್ತ ಯುವಜನತೆ' ಎಂಬ ವಿಷಯ ಆಧರಿಸಿದ ಈ ಕಾರ್ಯಕ್ರಮದಲ್ಲಿ, 2026 ರ ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟದ ಪದಕ ವಿಜೇತರಾದ ಕುಮಾರಿ ಪ್ರಾಚಿ ಚೌಧರಿ, ಕುಮಾರಿ ಪಾರುಲ್ ಚೌಧರಿ, ಶ್ರೀ ಜಯ್ ಕುಮಾರ್ ಮತ್ತು ಶ್ರೀ ರಾಜ್ ಕುಮಾರ್ ಪಾಲ್ ಅವರು ಭಾಗವಹಿಸಿದ್ದರು.

ಕಾರ್ಯಕ್ರಮವು ಬೆಳಿಗ್ಗೆ 6:00 ಗಂಟೆಗೆ ನಮೋ ಘಾಟ್ ನಲ್ಲಿ ಹೈದರಾಬಾದಿನ ಕನ್ಹಾ ಶಾಂತಿಧಾಮದ ಹಾರ್ಟ್ಫುಲ್ ನೆಸ್ ಇನ್ಸ್ಟಿಟ್ಯೂಟಿನ ಯುವ ವ್ಯವಹಾರಗಳ ನಿರ್ದೇಶಕರಾದ ಡಾ. ನಿವೇದಿತಾ ಶ್ರೇಯಾನ್ಸ್ ಅವರ ನೇತೃತ್ವದ ಧ್ಯಾನ ಅಧಿವೇಶನದೊಂದಿಗೆ ಆರಂಭವಾಯಿತು. ಇದು ಆರೋಗ್ಯಕರ ಜೀವನ ನಡೆಸಲು ದೈಹಿಕ ದಾರ್ಢ್ಯತೆಯ ಜೊತೆಗೆ ಮಾನಸಿಕ ಸ್ವಾಸ್ಥ್ಯದ ಪ್ರಾಮುಖ್ಯತೆಯನ್ನು ತಿಳಿಸಿತು. ಇದರ ಬೆನ್ನಲ್ಲೇ ಒಂದು ಸುಂದರವಾದ ಕಥಕ್ ನೃತ್ಯ ಪ್ರದರ್ಶನ ಮತ್ತು ಉತ್ಸಾಹಭರಿತ ಜುಂಬಾ ನಡೆಯಿತು. ಇದು ಸಾಂಸ್ಕೃತಿಕ ಅಭಿವ್ಯಕ್ತಿ, ಚಲನೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಒಗ್ಗೂಡಿಸಿ ಸಮಗ್ರ ಸ್ವಾಸ್ಥ್ಯವನ್ನು ಉತ್ತೇಜಿಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಮಾಂಡವಿಯಾ ಅವರು, ಯುವಕರು ದೈಹಿಕ ದಾರ್ಢ್ಯತೆಯನ್ನು ತಮ್ಮ ದೈನಂದಿನ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳುವಂತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಮಾದಕದ್ರವ್ಯ  ಮುಕ್ತ ಸಮಾಜದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಸಚಿವರು ಮತ್ತು ಭಾಗವಹಿಸುವವರು 'ನಶೆ ಮುಕ್ತ ಭಾರತ' ಪ್ರತಿಜ್ಞೆಯನ್ನು ಸ್ವೀಕರಿಸಿದರು. ಇದು ಮಾದಕ ದ್ರವ್ಯ ಸೇವನೆಯ ವಿರುದ್ಧ ಹೋರಾಡಲು ಮತ್ತು ಮಾದಕದ್ರವ್ಯ  ಮುಕ್ತ ಪೀಳಿಗೆಯನ್ನು ನಿರ್ಮಿಸಲು ತಮ್ಮ ಸಾಮೂಹಿಕ ಸಂಕಲ್ಪವನ್ನು ಪುನರುಚ್ಚರಿಸಿತು. ಈ ಭಾಷಣದ ನಂತರ, ಡಾ. ಮಾಂಡವಿಯಾ ಅವರು ನಮೋ ಘಾಟ್ ನಿಂದ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದವರೆಗೆ ಸೈಕಲ್ ರಾಲಿಯ ನೇತೃತ್ವ ವಹಿಸಿ, ವಾರಾಣಸಿಯ ಬೀದಿಗಳಲ್ಲಿ ʻವಿಕಸಿತ ಭಾರತಕ್ಕಾಗಿ ನಶಾಮಕ್ತ ಯುವಜನತೆ'  ಸಂದೇಶವನ್ನು ಪಸರಿಸಿದರು.

 

ಈ ಕಾರ್ಯಕ್ರಮವು 2026 ರ ಐಚಿ-ನಗೋಯಾ ಏಷ್ಯನ್ ಗೇಮ್ಸ್ನ ಪ್ರತಿಷ್ಠಿತ ಪದಕ ವಿಜೇತರನ್ನು ಸನ್ಮಾನಿಸುವ ಮೂಲಕ ಭಾರತದ ಕ್ರೀಡಾ ಸಾಧನೆಗಳನ್ನು ಆಚರಿಸಿತು. ಸನ್ಮಾನಿತ ಕ್ರೀಡಾಪಟುಗಳಲ್ಲಿ ಮಹಿಳೆಯರ 400 ಮೀಟರ್ ಓಟದಲ್ಲಿ ಕಂಚಿನ ಪದಕ ವಿಜೇತರಾದ ಕುಮಾರಿ ಪ್ರಾಚಿ ಚೌಧರಿ; ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ಮತ್ತು 5000 ಮೀಟರ್ಗಳಲ್ಲಿ ಎರಡು ಕಂಚಿನ ಪದಕ ವಿಜೇತರಾದ ಕುಮಾರಿ ಪರುಲ್ ಚೌಧರಿ; ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಹಾಗೂ ಪುರುಷರ 4x400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ವಿಜೇತರಾದ ಶ್ರೀ ಜಯ್ ಕುಮಾರ್; ಮತ್ತು ಭಾರತೀಯ ಪುರುಷರ ಹಾಕಿ ತಂಡದ ಭಾಗವಾಗಿ ಚಿನ್ನದ ಪದಕ ವಿಜೇತರಾದ ಶ್ರೀ ರಾಜ್ ಕುಮಾರ್ ಪಾಲ್ ಸೇರಿದ್ದಾರೆ.

ಅವರ ಉಪಸ್ಥಿತಿಯು ಕ್ರೀಡಾ ಶ್ರೇಷ್ಠತೆಯ ಆಧಾರವಾಗಿರುವ  ಶಿಸ್ತು, ಪರಿಶ್ರಮ ಮತ್ತು ಸಮರ್ಪಣಾ ಭಾವದ ಮೌಲ್ಯಗಳನ್ನು ಉಲ್ಲೇಖಿಸಿತು. ಇದು ಭಾಗವಹಿಸುವವ ಯುವಜನತೆಯು ದೈಹಿಕ ದಾರ್ಢ್ಯವನ್ನು   ಅನ್ನು ಅನುಸರಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಆಯ್ಕೆ ಮಾಡಲು ಸ್ಪೂರ್ತಿ ನೀಡಿತು.

ಈ ಸೈಕಲ್ ರಾಲಿಯು ʻಫಿಟ್ನೆಸ್ʼ ಸಂದೇಶವನ್ನು ಸಾಮೂಹಿಕ ಕ್ರಿಯೆಯನ್ನಾಗಿ ಪರಿವರ್ತಿಸಿತು. ಇದು ನಾಗರಿಕರಿಗೆ ಸಕ್ರಿಯ ಜೀವನಶೈಲಿಯನ್ನು ಆಯ್ಕೆ ಮಾಡಲು ಮತ್ತು ಮಾದಕದ್ರವ್ಯಮುಕ್ತ ಸಮಾಜದ ರಾಯಭಾರಿಗಳಾಗಲು ಪ್ರೋತ್ಸಾಹಿಸಿತು. ಕ್ರೀಡಾ ಸಾಧಕರನ್ನು  ಸಮುದಾಯಗಳಿಗೆ ಹತ್ತಿರ ತರುವ ಮೂಲಕ, 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಯುವಜನರಿಗೆ ಕ್ರೀಡಾ ಕ್ಷೇತ್ರದ ಆದರ್ಶ ವ್ಯಕ್ತಿಗಳೊಂದಿಗೆ ಮಾತುಕತೆಯಾಡಲು  ಮತ್ತು ಅವರ ಪ್ರಯಾಣದಿಂದ ಸ್ಫೂರ್ತಿ ಪಡೆಯಲು ಅವಕಾಶವನ್ನು ಕಲ್ಪಿಸಿಕೊಟ್ಟಿತು.

94 ನೇ ಆವೃತ್ತಿಯು ದೈಹಿಕ ದಾರ್ಢ್ಯತೆ  (ಫಿಟ್ನೆಸ್) ಎನ್ನುವುದು ಕೇವಲ ದೈಹಿಕ ಚಟುವಟಿಕೆಗಿಂತ,  ಅದು ಶಿಸ್ತು, ಮಾನಸಿಕ ಆರೋಗ್ಯ ಮತ್ತು ಜವಾಬ್ದಾರಿಯುತ ಆಯ್ಕೆಗಳನ್ನು ಉತ್ತೇಜಿಸುವ ಒಂದು ಜೀವನ ಶೈಲಿಯಾಗಿದೆ ಎಂಬ ಸಂದೇಶವನ್ನು ಬಲಪಡಿಸಿತು. ಸೈಕ್ಲಿಂಗ್, ಸಾಂಸ್ಕೃತಿಕ ಅಭಿವ್ಯಕ್ತಿ, ಧ್ಯಾನ ಮತ್ತು 'ನಶೆ ಮುಕ್ತ ಭಾರತ' ಪ್ರತಿಜ್ಞೆಯ ಸಂಯೋಜಿತ ಸಂದೇಶದ ಮೂಲಕ, ಈ ಕಾರ್ಯಕ್ರಮವು ಯುವಕರು ಮಾದಕ ದ್ರವ್ಯ ಸೇವನೆಯನ್ನು ತಿರಸ್ಕರಿಸಲು, ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮತ್ತು 'ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ' ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಲು ಕರೆ ನೀಡಿತು.

 

******


(ಪ್ರಕಟಣೆ ಐ.ಡಿ.: 2321929) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati